Friday, April 18, 2025
Google search engine

HomeUncategorizedರಾಷ್ಟ್ರೀಯಶಬರಿಮಲೆ ಅಯ್ಯಪ್ಪ ದೇವಾಲಯದಲ್ಲಿ ಕೇವಲ 29 ದಿನಗಳಲ್ಲಿ 163.89 ರೂ. ಆದಾಯ ಕೋಟಿ ಸಂಗ್ರಹ

ಶಬರಿಮಲೆ ಅಯ್ಯಪ್ಪ ದೇವಾಲಯದಲ್ಲಿ ಕೇವಲ 29 ದಿನಗಳಲ್ಲಿ 163.89 ರೂ. ಆದಾಯ ಕೋಟಿ ಸಂಗ್ರಹ

ತಿರುವನಂತಪುರ: ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಕೇರಳದ ಶಬರಿಮಲೆ ಅಯ್ಯಪ್ಪ ದೇವಾಯಲವು ಕೇವಲ 29 ದಿನಗಳಲ್ಲಿ 163.89 ಕೋಟಿ ರೂ. ಆದಾಯ ಗಳಿಸಿದೆ.

ಡಿಸೆಂಬರ್‌ 14ರವರೆಗೆ 22 ಲಕ್ಷ ಅಯ್ಯಪ್ಪನ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಇದು ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ 4.51 ಲಕ್ಷ ಅಧಿಕ ಭಕ್ತರು ಭೇಟಿ ನೀಡಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ತಿರುವಾಂಕೂರು ದೇವಾಲಯ ಮಂಡಳಿಯ ಅಧ್ಯಕ್ಷ ಪಿ.ಎಸ್‌‍ ಪ್ರಶಾಂತ್‌, ದೇವಾಸ್ಥಾನದ ವರಮಾನವನ್ನು ಕಳೆದ ಬಾರಿಗೆ ಹೋಲಿಸಿದರೆ 22.76 ಕೋಟಿ ರೂ. ಹೆಚ್ಚಾಗಿದೆ. ಕೇವಲ 29 ದಿನಗಳಲ್ಲಿ ಒಟ್ಟು 22,67,956 ಭಕ್ತರು ಭೇಟಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಈ ಭಕ್ತರಿಂದ ಒಟ್ಟು 163.89 ಕೋಟಿ ಆದಾಯ ದೇವಾಲಯಕ್ಕೆ ಹರಿದುಬಂದಿದೆ. ಈ ಪೈಕಿ ಪ್ರಸಾದ ಮಾರಾಟದಿಂದಲೇ 82.67 ಕೋಟಿ ರೂ. ಆದಾಯ ಬಂದಿದೆ ಎಂದು ಅವರು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular