ಬಳ್ಳಾರಿ : ನಗರದ ಕೆಯಿಬಿ ಪಂಕ್ಷನ್ ಹಾಲ್ ನಲ್ಲಿ ನಡೆದ 184ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮದಲ್ಲಿ ಬಳ್ಳಾರಿ ಮಹಾಪೌರರಾದ ಡಿ.ತ್ರಿವೇಣಿ ಭಾಗಿಯಾಗಿ, ಪೋಟೊಗ್ರಫಿ ಪಿತಾಮಹರಾದ, ನಿಸಫರ್, ಹೆನ್ರೀ ಮತ್ತು ಲೂಯಿಸ್ ಡಾಗ್ರೇ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಉದ್ಘಾಟನೆ ಮಾಡಿದರು.
ನಂತರ ಮಾತನಾಡಿದ ಮಹಾಪೌರರರು, ಛಾಯಾಗ್ರಹಣ ದಿನಾಚರಣೆಯಲ್ಲಿ ಭಾಗಿಯಾಗಿರುವುದು ತುಂಬಾ ಸಂತೋಷವಾಗಿದೆ. ಫೋಟೋಗ್ರಾಫರ್’ಗಳ ಯಾವುದೇ ಸಮಸ್ಯೆಗಳಿರಲಿ, ನಮ್ಮ ಮಹಾನಗರ ಪಾಲಿಕೆ ವತಿಯಿಂದ ಸಹಾಯ ಸಹಕಾರವನ್ನು ಮಾಡುತ್ತೇವೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಸಭಾಧ್ಯಕ್ಷ ಪಿ.ಗಾದೆಪ್ಪ, ಕಾಂಗ್ರೆಸ್ ಹಿರಿಯ ಮುಖಂಡ ಕಲ್ಲುಕಂಭ ಪಂಪಾಪತಿ, ಕರ್ನಾಟಕ ಛಾಯಾಗ್ರಹಕರ ರಾಜ್ಯಾಧ್ಯಕ್ಷರಾದ ಪರಮೇಶ್ವರ್, ಬಳ್ಳಾರಿ ಜಿಲ್ಲಾಧ್ಯಕ್ಷರಾದ ನಾಡಗೌಡ ಚಂದ್ರಮೋಹನ್, ತಾಲ್ಲೂಕು ಅಧ್ಯಕ್ಷರಾದ ಶ್ರೀಧರ್, ಜಿಲ್ಲಾ ಕರ್ನಾಟಕ ಛಾಯಾಗ್ರಹಕ ಸಂಘದ ನಿರ್ದೇಶಕ ಬೆಂಗಳೂರು ವೀರೇಶ್, ಗೌರವ ಅಧ್ಯಕ್ಷ ರಾದ ತಿಪ್ಪೇಸ್ವಾಮಿ, ಬಿ.ಗೋಪಾಲ್ ಹಾಗೂ ಶೇಕ್ ಬಾಷಾ, ಲಕ್ಷ್ಮಿರೆಡ್ಡಿ, ತಾಲ್ಲೂಕಿನ ಉಪಾಧ್ಯಕ್ಷರಾದ ಶ್ರೀಧರ್, ನಾಗರಾಜ್, ಜಿಲಾನ್ ಬಾಷಾ, ಸಿದ್ಧರಾಮನ ಗೌಡ ಹಾಗೂ ಉಪಾಧ್ಯಕ್ಷರು ಪಧಾಧಿಕಾರಿಗಳು ಛಾಯಾಗ್ರಹಕರು ಉಪಸ್ಥಿತರಿದ್ದರು.
