Thursday, April 3, 2025
Google search engine

Homeರಾಜ್ಯವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ ಹೆಚ್ಚಳ

ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ ಹೆಚ್ಚಳ

ಬೆಂಗಳೂರು: ಆಗಸ್ಟ್ ತಿಂಗಳು ಆರಂಭವಾಗುತ್ತಲೆ ತೈಲ ಮಾರುಕಟ್ಟೆ ಕಂಪನಿಗಳು ಭಾರತೀಯ ಮನೆಗಳಿಗೆ ಅಡುಗೆ ಅನಿಲ ಅಥವಾ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಗಳನ್ನು ಏರಿಕೆ ಮಾಡಿದೆ. ೧೪.೨ ಕೆಜಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಗಳು ಯಾವುದೇ ಬದಲಾವಣೆ ಮಾಡದಿದ್ದರೂ, ಆಗಸ್ಟ್ ೧, ೨೦೨೪ ರಿಂದ ಜಾರಿಗೆ ಬರುವಂತೆ ೧೯ ಕೆಜಿ ಸಿಲಿಂಡರ್‌ಗಳ ಬೆಲೆಗಳಲ್ಲಿ ೮.೫೦ ರೂ. ಏರಿಕೆ ಮಾಡಿದೆ.

೧೪ ಕೆಜಿಯ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ದೆಹಲಿಯಿಂದ ಮುಂಬೈವರೆಗೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆ ಏರಿಕೆಯಾಗಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ವೆಬ್‌ಸೈಟ್ ಪ್ರಕಾರ, ದೇಶದ ರಾಜಧಾನಿ ದೆಹಲಿಯಲ್ಲಿ ೧೯ ಕೆಜಿ ಎಲ್‌ಪಿಜಿ ಸಿಲಿಂಡರ್ ಈಗ ೧೬೫೨.೫೦ ರೂ.ಗೆ ಲಭ್ಯವಿದೆ. ಮೊದಲು ಈ ಬೆಲೆ ೧೬೪೬ ರೂ. ಇಲ್ಲಿ ೬.೫೦ ರೂ. ಇತ್ತು. ಈ ಸಿಲಿಂಡರ್ ಈಗ ಕೋಲ್ಕತ್ತಾದಲ್ಲಿ ೧೭೬೪.೫೦ ರೂ.ಗೆ ಲಭ್ಯವಿದೆ.

ಚೆನ್ನೈನಲ್ಲಿ ೧೮೧೭ ರೂ. ಆಗಿದೆ. ೧೯ ಕೆಜಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ನ ಹಳೆಯ ಬೆಲೆ ಕೋಲ್ಕತ್ತಾದಲ್ಲಿ ೧೭೫೬ ರೂ., ಮುಂಬೈನಲ್ಲಿ ೧೫೯೮ ರೂ. ಮತ್ತು ಚೆನ್ನೈನಲ್ಲಿ ೧೮೦೯.೫೦ ರೂ. ಆಗಿದೆ.

RELATED ARTICLES
- Advertisment -
Google search engine

Most Popular