Sunday, April 27, 2025
Google search engine

Homeಅಪರಾಧಐಶ್ವರ್ಯ ಗೌಡ ನಿವಾಸದಲ್ಲಿ 2.25 ಕೋಟಿ ನಗದು ಪತ್ತೆ: 14 ದಿನ ವಶಕ್ಕೆ ಪಡೆದ ED

ಐಶ್ವರ್ಯ ಗೌಡ ನಿವಾಸದಲ್ಲಿ 2.25 ಕೋಟಿ ನಗದು ಪತ್ತೆ: 14 ದಿನ ವಶಕ್ಕೆ ಪಡೆದ ED

ಬೆಂಗಳೂರು: ಚಿನ್ನಾಭರಣ ವಂಚನೆ ಆರೋಪ, ಡಿಕೆ ಸಹೋದರಿ ಎಂಬುದಾಗಿ ಹಲವು ವರ್ತಕರಿಗೆ ವಂಚನೆ ಮಾಡಿದ್ದಂತ ಐಶ್ವರ್ಯ ಗೌಡ ನಿವಾಸದಲ್ಲಿ ಬರೋಬ್ಬರಿ 2.25 ಕೋಟಿ ನಗದು ಪತ್ತೆಯಾಗಿದೆ. ಈ ಹಿನ್ನಲೆಯಲ್ಲಿ ಅವರನ್ನು 14 ದಿನಗಳ ಕಾಲ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಮ್ಮ ವಶಕ್ಕೆ ಪೆಡದಿದ್ದಾರೆ.

ಈ ಕುರಿತಂತೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿರುವಂತ ಇಡಿ, ಮನಿ ಲಾಂಡರಿಂಗ್ ಅಪರಾಧದಲ್ಲಿ ಭಾಗಿಯಾಗಿದ್ದಕ್ಕಾಗಿ ಬೆಂಗಳೂರಿನ ಇಡಿ 24.04.2025 ರಂದು ಪಿಎಂಎಲ್ಎ, 2002 ರ ಅಡಿಯಲ್ಲಿ ಐಶ್ವರ್ಯಾ ಗೌಡ ಅವರನ್ನು ಬಂಧಿಸಿದೆ. ಬಂಧನದ ನಂತರ, ಅವರನ್ನು ವಿಶೇಷ ನ್ಯಾಯಾಲಯಕ್ಕೆ (ಪಿಎಂಎಲ್ಎ) ಹಾಜರುಪಡಿಸಲಾಯಿತು. ನ್ಯಾಯಾಲಯವು ಆರೋಪಿಗಳನ್ನು 14 ದಿನಗಳ ಕಾಲ ಇಡಿ ಕಸ್ಟಡಿಗೆ ನೀಡಿದೆ ಎಂದು ತಿಳಿಸಿದೆ.

ದಿನಾಂಕ 24.04.2025 ಮತ್ತು 25.04.2025 ರಂದು ಐಶ್ವರ್ಯಾ ಗೌಡ ಮತ್ತು ಅವರ ಸಹಚರರಿಗೆ ಸಂಬಂಧಿಸಿದ 14 ಸ್ಥಳಗಳಲ್ಲಿ ಪಿಎಂಎಲ್ಎ, 2002 ರ ನಿಬಂಧನೆಗಳ ಅಡಿಯಲ್ಲಿ ಇಡಿ ಶೋಧ ಕಾರ್ಯಾಚರಣೆ ನಡೆಸಿತು. ಶೋಧ ಕಾರ್ಯಾಚರಣೆಯ ಸಮಯದಲ್ಲಿ, ವಿವಿಧ ದಾಖಲೆಗಳು, ಡಿಜಿಟಲ್ ಸಾಧನಗಳು ಮತ್ತು ಸುಮಾರು 2.25 ಕೋಟಿ ರೂ.ಗಳ ನಗದು ಪತ್ತೆಯಾಗಿದೆ ಮತ್ತು ವಶಪಡಿಸಿಕೊಳ್ಳಲಾಗಿದೆ ಎಂಬುದಾಗಿ ಮಾಹಿತಿ ಹಂಚಿಕೊಂಡಿದೆ.

RELATED ARTICLES
- Advertisment -
Google search engine

Most Popular