Sunday, April 20, 2025
Google search engine

Homeರಾಜ್ಯಧಾರವಾಡ ಮಾವು‌ ಮೇಳದಲ್ಲಿ ಗಮನ ಸೆಳೆದ 2.5 ಲಕ್ಷ ರೂ.ಬೆಲೆಯ ಮಿಯಾ ಜಾಕಿ ಮಾವು

ಧಾರವಾಡ ಮಾವು‌ ಮೇಳದಲ್ಲಿ ಗಮನ ಸೆಳೆದ 2.5 ಲಕ್ಷ ರೂ.ಬೆಲೆಯ ಮಿಯಾ ಜಾಕಿ ಮಾವು

ಧಾರವಾಡ : ವಿಶ್ವದ ಅತ್ಯಂತ ದುಬಾರಿಯಾದ ಕೆ.ಜಿ.ಗೆ 2.5 ಲಕ್ಷ ರೂ.ಗಳ ಮಾವಿನ ಹಣ್ಣು ಮಿಯಾ ಜಾಕಿ ಧಾರವಾಡದ ಮಾವು‌ಮೇಳದಲ್ಲಿ ಗಮನ ಸೆಳೆಯುತ್ತಿದೆ. ಬರೀ ಒಂದು ಹಣ್ಣಿಗೆ ಕನಿಷ್ಠವೆಂದರೂ 25-30ಸಾವಿರ ರೂ. ಖಚಿತ..!

ಇಷ್ಟೊಂದು ದುಬಾರಿ‌ ಮಾವಿನ ಹಣ್ಣು ಖರೀದಿಸದೇ ಹೋದರೂ ಕಣ್ಣುಂಬ್ತಿಕೊಳ್ಳಬಹುದು. ಇಲ್ಲಿಯ ತೋಟಗಾರಿಕೆ ಇಲಾಖೆ ಆವರಣದಲ್ಲಿ ಮಂಗಳವಾರದಿಂದ ಆರಂಭಗೊಂಡಿರುವ ಮಾವು ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಕಳಶ ಪ್ರಾಯವಾಗಿ ಸುದ್ದಿಯಲ್ಲಿದೆ. ಈ ದುಬಾರಿ ಮಾವು ಕಲಕೇರಿ ಮಾವು ಬೆಳೆಗಾರ ಪ್ರಮೋದ ಗಾಂವಕರ ತೋಟದ ಮಾವು ಇದಾಗಿದ್ದು, ಈ ತಳಿಯ ಮಾವು ಈಗ ಮೇಳದಲ್ಲಿ ಇದೆ ಮೊದಲ ಬಾರಿಗೆ ಪ್ರದರ್ಶನಕ್ಕೆ ಇಡಲಾಗಿದೆ.

ಮೂರು ದಿನಗಳ ಆಯೋಜಿಸಿರುವ ಮಾವು ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಇಂದು(ಮೇ 14,2024) ಚಾಲನೆ ದೊರೆತಿದೆ.

ಕಳೆದ ನಾಲ್ಕು ವರ್ಷಗಳಿಂದ ರದ್ದಾಗುತ್ತಲೇ ಬಂದಿದ್ದ ಮಾವು ಮೇಳವು ಈ ಸಲ ಮಾವು ಬೆಳೆಗಾರರ ಒತ್ತಾಸೆಯಂತೆ ಆಯೋಜನೆಗೊಂಡಿದೆ.

ಮಾವು ಮೇಳಕ್ಕೆ ಚಾಲನೆ ನೀಡಿದ ಕಲಗೇರಿಯ ಮಾವು ಬೆಳೆಗಾರ ಪ್ರಮೋದ ಗಾಂವಕರ ಮಾತನಾಡಿ, ಮಾವು ಮೇಳ ಆಯೋಜನೆಯಿಂದ ಮಾವು ಬೆಳೆಗಾರರು ಹಾಗೂ ಗ್ರಾಹಕರಿಗೂ ಅನುಕೂಲ. ನಾಲ್ಕು ವರ್ಷಗಳ ಬಳಿಕ ಮೇಳ ಆಯೋಜಿಸಿದ್ದು ಖುಷಿ‌ ಕೊಟ್ಟಿದೆ. ಪ್ರತಿ ವರ್ಷವೂ ತಪ್ಪದೇ ಮಾವು ಮೇಳ ಆಯೋಜಿಸಿದರೆ ಒಳಿತು. ಇನ್ನು ಮೂರು ದಿನಗಳ ಮಾವು ಮೇಳ ಬದಲು 15 ಅಥವಾ ತಿಂಗಳ‌ ಕಾಲ ಮಾವು ಮೇಳ ಆಯೋಜಿಸಿದರೆ ಅನುಕೂಲ ಆಗಲಿದೆ ಎಂದು‌ ಮನವಿ ಮಾಡಿದರು.

ಶುಗರ ಬೇಬಿ, ಗೋವಾ ಮನಕೂರ, ಸಿಂಧು, ರತ್ನಾ, ಸುವರ್ಣ ರೇಖಾ ಸೇರಿದಂತೆ ಮೇಳದಲ್ಲಿ 52 ವಿವಿಧ ಮಾವು ತಳಿಗಳ ಪ್ರದರ್ಶನ ಗಮನ ಸೆಳೆದಿದೆ.

ಜಿಲ್ಲಾಡಳಿತ, ಜಿ.ಪಂ. ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಆಯೋಜಿಸಿರುವ ಮಾವು ಮೇಳವು ಬೆಳಿಗ್ಗೆ 10:00 ಗಂಟೆಯಿಂದ ರಾತ್ರಿ 9:00 ಗಂಟೆವರೆಗೆ ಇರಲಿದ್ದು, ಮಾವು ಪ್ರಿಯರು ಮೇಳಕ್ಕೆ ಭೇಟಿ ನೀಡಬಹುದಾಗಿದೆ.

RELATED ARTICLES
- Advertisment -
Google search engine

Most Popular