ರಾಮನಗರ: “ಒಂದೇ ದಿನದಲ್ಲಿ ಶೇ.40 ಲಾಭ” ಎಂದು ನಂಬಿಸಿ ಸೈಬರ್ ವಂಚಕರು ಯಾರಬ್ ನಗರದ ನಿವಾಸಿ ಮಹ್ಮದ್ ಖಾಲೀದ್ ಅವರಿಂದ 2.64 ಲಕ್ಷ ರೂ. ವಂಚಿಸಿದ್ದಾರೆ.
ಟೆಲಿಗ್ರಾಂ ಆ್ಯಪ್ ಮೂಲಕ ಸಂಪರ್ಕಿಸಿದ ಅವರು, ಪ್ರಾರಂಭದಲ್ಲಿ ಕಡಿಮೆ ಮೊತ್ತದ ಲಾಭ ತೋರಿಸಿ ನಂತರ ಹಂತ ಹಂತವಾಗಿ ಹೆಚ್ಚಿನ ಹಣ ಹೂಡಿಕೆ ಮಾಡಿಸಿದರು. ಕೆಲವು ಬಾರಿ ಲಾಭವನ್ನೂ ನೀಡಿದ ಅವರು, ನಂತರ ಸಂಪೂರ್ಣವಾಗಿ ಸಂಪರ್ಕ ಕಡಿತಮಾಡಿ ಹಣ ಹಿಂಪಡೆಯದಂತೆ ಮಾಡಿದರು. ಖಾಲೀದ್ ಅವರು ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.