ಜಬಲ್ಪುರ: ಇಂದೋರ್ ಜಬಲ್ ಪುರ ನಡುವಿನ ಸೋಮನಾಥ ಎಕ್ಸ್ ಪ್ರೆಸ್ ರೈಲಿನ ಎರಡು ಕೋಚ್ ಗಳು ಶನಿವಾರ ಬೆಳಿಗ್ಗೆ ಹಳಿತಪ್ಪಿವೆ.
ಜಬಲ್ ಪುರ ನಿಲ್ದಾಣ ಸಮೀಪಿಸುತ್ತಿದ್ದಂತೆಯೇ ಘಟನೆ ನಡೆದಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ಬೆಳಿಗ್ಗೆ ೫.೫೦ಕ್ಕೆ ಹಳಿ ತಪ್ಪಿದ್ದು, ಸುದೈವವವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ಜಬಲ್ ಪುರ ನಿಲ್ದಾಣದ ೬ನೇ ಪ್ಲಾಪ್ ಫಾರಂಗೆ ಬರುವ ವೇಳೆ ಘಟನೆ ನಡೆದಿದೆ.