Friday, April 4, 2025
Google search engine

Homeರಾಜಕೀಯ2 ಸಾವಿರ ರೂ. ಗ್ಯಾರಂಟಿ ಬಿಟ್ಟು ಮೊದಲು ಬಾಣಂತಿಯರ ಸಾವು ನಿಲ್ಲಿಸಿ: ಸರ್ಕಾರಕ್ಕೆ ಆರ್.ಅಶೋಕ್ ತರಾಟೆ

2 ಸಾವಿರ ರೂ. ಗ್ಯಾರಂಟಿ ಬಿಟ್ಟು ಮೊದಲು ಬಾಣಂತಿಯರ ಸಾವು ನಿಲ್ಲಿಸಿ: ಸರ್ಕಾರಕ್ಕೆ ಆರ್.ಅಶೋಕ್ ತರಾಟೆ

ಬೆಂಗಳೂರು: ರಾಜ್ಯದಲ್ಲಿ ಸಂಭವಿಸುತ್ತಿರುವ ಬಾಣಂತಿಯರ ಸರಣಿ ಸಾವಿನ ವಿಚಾರವನ್ನು ಪ್ರಸ್ತಾಪಿಸಿ ವಿಪಕ್ಷ ನಾಯಕ ಆರ್.ಅಶೋಕ್ ರಾಜ್ಯ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವು ಮುಂದುವರೆದಿದೆ. ಆಸ್ಪತ್ರೆಗಳಿಗೆ ಹೆರಿಗೆಗೆಂದು ಹೋದವರು ಶವವಾಗಿ ಬರ್ತಿದ್ದಾರೆ. 2 ಸಾವಿರ ರೂ. ಗ್ಯಾರಂಟಿ ಬಿಟ್ಟು ಮೊದಲು ರಾಜ್ಯದಲ್ಲಿ ನಡೆಯುತ್ತಿರುವ ಬಾಣಂತಿಯರ ಸಾವು ನಿಲ್ಲಿಸಿ ಎಂದು ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್.ಅಶೋಕ್, ಇನ್ನೂ ಕೂಡ ಬಾಣಂತಿಯರ ಸಾವು ನಿಂತಿಲ್ಲ. ಅಧಿವೇಶನದಲ್ಲಿ ನಾವು ಸರ್ಕಾರದ ಕಿವಿ ಹಿಂಡಿದ್ದೆವು. ಆದರೂ ಪ್ರಯೋಜನವಾಗಿಲ್ಲ. ಹೆರಿಗೆಗೆಂದು ಹೋದ ತಾಯಂದಿರು ಶವವಾಗಿ ಬರುತ್ತಿದ್ದಾರೆ. ಸರ್ಕಾರ ಇನ್ನೂ ಎಚ್ಚೆತ್ತುಕೊಂಡಿಲ್ಲ ಇದು ಸರ್ಕಾರಿ ಪ್ರಾಯೋಜಿತ ಕೊಲೆಗೆ ಸಮ. ಬಾಣಂತಿಯರ ಸಾವಿಗೆ ಸಂಬಂಧಿಸಿದ ನ್ಯಾಯಾಂಗ ತನಿಖೆ ಬಗ್ಗೆ, ಡೆತ್ ಆಡಿಟ್ ಬಗ್ಗೆ ಇನ್ನೂ ಯಾವುದೇ ಮಾಹಿತಿ ಬಂದಿಲ್ಲ. ಕಳಪೆ ದ್ರಾವಣ ಪೂರೈಸಿದ ಕಂಪನಿ ವಿರುದ್ಧ ದೆಹಲಿಗೆ ಹೋಗಿ ದೂರು ಕೊಡುವುದಾಗಿ ಆರೋಗ್ಯ ಸಚಿವರು ಹೇಳಿದ್ದರು. ಆದರೆ ಇನ್ನೂ ಯಾಕೆ ಹೋಗಿ ದೂರು ಕೊಟ್ಟಿಲ್ಲ ಎಂದು ಪ್ರಶ್ನಿಸಿದರು.

ಬಾಣಂತಿಯರ ಸಾವಿನ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಲಿ ಎಂದು ಆಗ್ರಹಿಸಿದ ಆರ್.ಅಶೋಕ್, ನಿಮ್ಮ ಗ್ಯಾರಂಟಿ 2000 ರೂ ಬೇಡ. ಮೊದಲು ರಾಜ್ಯದಲ್ಲಿ ಬಾಣಂತಿಯರ ಸಾವು ನಿಲ್ಲಿಸಿ. ಗೃಹಲಕ್ಷ್ಮೀ ಯೋಜನೆ ಮನೆ ಯಜಮಾನಿಯರಿಗೆ 2000 ರೂ ಹಾಕಿದ್ದೀವಿ. ಅವರು ಹೊಲಿಗೆ ಯಂತ್ರ ಖರೀದಿಸಿದರು, ಫ್ರಿಡ್ಜ್ ಖರೀದಿಸಿದರು ಬೋರ್ ವೆಲ್ ಕೊರೆಸಿದರು, ಗ್ರಂಥಾಲಯ ತೆಗೆದರು ಎಂದು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದೀರಾ. ಜಿಲ್ಲೆ- ಜಿಲ್ಲೆಗಳಲ್ಲಿ ಬಾಣಂತಿಯರ ಸರಣಿ ಸಾವು ಸಂಭವಿಸುತ್ತಿದೆ. ಆದರೂ ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಅಶೋಕ್ ಕಿಡಿಕಾರಿದರು.

RELATED ARTICLES
- Advertisment -
Google search engine

Most Popular