ವರದಿ:ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ವಾಹನ ಸವಾರರ ಬಹುದಿನದ ಬೇಡಿಕೆಯಾಗಿದ್ದ ಹೊಸಕೋಟೆ-ಕೆ.ಆರ್.ನಗರ ಮುಖ್ಯರಸ್ತೆಯ ಅಭಿವೃದ್ದಿಗೆ 20 ಕೋಟಿರೂಪಾಯಿಗಳು ಲೋಕೋಪಯೋಗಿ ಇಲಾಖೆಯಿಂದ ಮಂಜೂರು ಅಗಿದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಸಾಲಿಗ್ರಾಮ ತಾಲೂಕಿನ ಅಂಕನಹಳ್ಳಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಡೆದ 5 ಕೋಟಿ ವೆಚ್ಚದ ಮಾಯಿಗೌಡನಹಳ್ಳಿಯಿಂದ ಸೋಮನಹಳ್ಳಿ ರಸ್ತೆ ಅಭಿವೃದ್ದಿ ಕಾಮಗಾರಿಗೆ ಗುದ್ದಲಿ ಪೂಜೆ ನೇರವೇರಿಸಿ ಮಾತನಾಡಿ ಈ ರಸ್ತೆ ಕಾಮಗಾರಿಗೆ ಜ.29.ರಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಚಾಲನೆ ನೀಡಲಿದ್ದಾರೆ ಎಂದರು.
ಚುಂಚನಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆಯನ್ನು 40 ವರ್ಷಗಳ ಅವದಿಗೆ ನಿರಾಣಿ ಶುಗರ್ಸ್ ಅವರಿಗೆ ಗುತ್ತಿಗೆ ನೀಡಲು ಅನುಮೋದನೆ ನೀಡಿದ್ದು ಮುಂದಿನ ತಿಂಗಳ ಒಳಗೆ ಗುತ್ತಿಗೆ ನೊಂದಣಿ ಕಾರ್ಯ ಮುಗಿಯಲಿದ್ದು ಇದರಿಂದ ಕಾರ್ಖಾನೆಯು ಮುಂದಿನ ಹಂಗಾಮಿನಿಂದ ಆರಂಭವಾಗಲಿದ್ದು ರೈತರು ಆತಂತಕ ಪಡುವುದು ಬೇಡ ಎಂದರು.
ಗುಡುನಹಳ್ಳಿ ಗ್ರಾಮದಲ್ಲಿ ಪಶು ಆಸ್ವತ್ರೆ ಅರಂಭಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಜತಗೆ ಅಂಕನಹಳ್ಳಿ ಮತ್ತು ನಾಡಪ್ಪನಹಳ್ಳಿ ಗ್ರಾಮಕ್ಕೆ ಶುದ್ದ ಕುಡಿಯುವ ನೀರಿನ ಘಟಕವನ್ನು ಮಂಜೂರಾತಿ ಮಾಡಿ ಶೀಘ್ರದಲ್ಲಿಯೇ ಕಾಮಗಾರಿಗೆ ಗುದ್ದಲಿ ಪೂಜೆ ನೇರವೇರಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ತಾ.ಪಂ.ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ ಮಾತನಾಡಿ ಗ್ರಾಮಸ್ಥರ ಪರವಾಗಿ
ಶಾಸಕ ಡಿ.ರವಿಶಂಕರ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ನಿವೃತ್ತ ಉಪತಹಸೀಲ್ದಾರ್ ತಿಮ್ಮಯ್ಯ, ತಾ.ಪಂ.ಮಾಜಿ ಅಧ್ಯಕ್ಷ ಹಾಡ್ಯಮಹದೇವಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಮ್ಮನಹಳ್ಳಿ ಉದಯ್, ಗ್ರಾ.ಪಂ.ಸದಸ್ಯೆ ವಂದನಾಮಂಜುನಾಥ್,ದೊಡ್ಡೇಗೌಡ, ಮಾಜಿ ಸದಸ್ಯರಾದ ಸುರೇಶ್,ವಿಶ್ವೇಶ್ವರಯ್ಯ, ನೇತ್ರಾವತಿ, ನೀರು ಬಳಕೆದಾರ ಸಂಘದ ಅಧ್ಯಕ್ಷ ಯತೀಶ್, ಮುಖಂಡರಾದ ಎನ್.ಸಿ.ಪ್ರಸಾದ್, ಎಚ್.ಜೆ.ರಮೇಶ್, ಡೈರಿಮಾದು, ನೂತನ್ ಗೌಡ, ಚಿಕ್ಕಕೊಪ್ಪಲುಮನು, ಚಿಬುಕಹಳ್ಳಿ ಬಸವರಾಜು, ಮಾಯಿಗೌಡನಹಳ್ಳಿ ಮಲ್ಲಿಕಾ, ಷಣ್ಮುಖ, ಮಧು,ಪರಮೇಶ್, ಜಯಣ್ಣ,ಆಟೋಮುಕ್ಕಣ್ಣ, ವೃಷಬೇಂದ್ರ, ಪವನ್, ದೊಡ್ಡಕೊಪ್ಪಲು ಲೋಕಿಮೂಸಿ, ಚನ್ನಂಗೆರೆ ಮೂರ್ತಿ ಎಇಇ ಸುಮಿತಾ, ಇಂಜಿನಿಯರ್ ಚಂದ್ರಮೋಹನ್ ಇದ್ದರು.