Saturday, April 19, 2025
Google search engine

Homeರಾಜ್ಯ20 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟ ಹೆಸ್ಕಾಂ ಅಧಿಕಾರಿ ಲೋಕಾಯುಕ್ತ ಬಲೆಗೆ

20 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟ ಹೆಸ್ಕಾಂ ಅಧಿಕಾರಿ ಲೋಕಾಯುಕ್ತ ಬಲೆಗೆ

ಬಾಗಲಕೋಟೆ: ರೈತರ ಜಮೀನಿಗೆ ಟಿಸಿ ನೀಡಲು ಇಪ್ಪತ್ತು ಸಾವಿರ ಹಣ ಬೇಡಿಕೆ ಇಟ್ಟಿದ ಹೆಸ್ಕಾಂ ಇಲಾಖೆ ಸೆಕ್ಷನ್  ಆಫೀಸರ್ (SO) ಲಂಚ ಪಡೆಯುವಾಗ ಲೋಕಯುಕ್ತ ಬಲೆಗೆ ಬಿದ್ದಿದ್ದಾರೆ.

ತೊಗಲಬಾಗಿ ಗ್ರಾಮದ ಸೆಕ್ಷನ್ ಆಫೀಸರ್ ಪಡಿಯಪ್ಪ ಲಕ್ಷ್ಮಣ ಭಜಂತ್ರಿ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ.

ಕಣ್ಣವ್ವ  ಬಬಲಾದಿ ಮತ್ತು ಸೋಮರಾಯ ಬಬಲಾದಿ ಇವರ ಹೆಸರಿನಲ್ಲಿರುವ ಚಿಕ್ಕಲಕಿ  ಗ್ರಾಮದ ಜಮಿನಿಗೆ ಹೆಸ್ಕಾಂ ಇಲಾಖೆಯವರು ಟಿಸಿ ನೀಡಬೇಕಿತ್ತು.

 ಟಿಸಿ ನೀಡಲು ರೂ 20,000/- ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಅಧಿಕಾರಿಯ ಲಂಚಕ್ಕೆ ಬೇಸತ್ತು ಜಮೀನು ಮಾಲೀಕರು  ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಹೆಸ್ಕಾಂ ಅಧಿಕಾರಿ  ಲಂಚದ ಹಣ ಪಡೆಯುವ ವೇಳೆ  ಬಾಗಲಕೋಟೆ ಲೋಕಾಯುಕ್ತ ಡಿವೈಎಸ್ಪಿ ಪುಷ್ಪಲತಾ  ಅವರ ನೇತೃತ್ವದಲ್ಲಿ ಸಿಪಿಐ ಮಲ್ಲಪ್ಪ ಬಿದರಿ,ಬಸವರಾಜ್ ಅವಟಿ, ಬಸನಗೌಡ ಪಾಟೀಲ ದಾಳಿ ನಡೆಸಿ ಆರೋಪಿಯನ್ನ ವಶಕ್ಕೆ  ಪಡೆದು ತನಿಖೆ ಮುಂದುವರಿಸಿದ್ದಾರೆ.

RELATED ARTICLES
- Advertisment -
Google search engine

Most Popular