Wednesday, April 23, 2025
Google search engine

Homeರಾಜ್ಯಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿ ಪಾರಿವಾಳಗಳಿಗೆ ಆಹಾರ ಹಾಕಿದರೆ 200 ರೂ. ದಂಡ

ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿ ಪಾರಿವಾಳಗಳಿಗೆ ಆಹಾರ ಹಾಕಿದರೆ 200 ರೂ. ದಂಡ

ಬೆಂಗಳೂರು: ನಗರದ ರೇಸ್ ಕೋರ್ಸ್ ರಸ್ತೆಯಲ್ಲಿ ಪಾರಿವಾಳಗಳಿಗೆ ಆಹಾರ ಹಾಕಿದರೆ ರೂ 200 ದಂಡ ಹಾಕಲಾಗುತ್ತೆ ಎಂದು ಬಿಬಿಎಂಪಿ ಬೋರ್ಡ್ ಹಾಕಿದೆ.

ಸಿಲಿಕಾನ್‌ ಸಿಟಿಯಲ್ಲಿ‌ ದಿನದಿಂದ‌ ದಿನಕ್ಕೆ ಪಾರಿವಾಳಗಳ ಸಂಖ್ಯೆ ಜಾಸ್ತಿಯಾಗುತ್ತಿದೆ.‌ ಹೀಗಾಗಿ ಪಾರಿವಾಳಗಳ ಹಾಟ್ ಸ್ಪಾಟ್ ​ಗಳಾದ ರೇಸ್ ಕೋರ್ಸ್ ರೋಡ್, ಕಬ್ಬನ್ ಪಾರ್ಕ್, ಸ್ಯಾಂಕಿ ಟ್ಯಾಂಕಿ ರಸ್ತೆಗಳಲ್ಲಿ ಹಾಕಲಾಗಿದೆ. ಇನ್ನು ಈ 200 ರೂ ದಂಡ ಹಾಕೋದಿಕ್ಕೆ ಕಾರಣ ಸದ್ಯ ಪರಿವಾಳ‌ಗಳ‌ ಸಂಖ್ಯೆ ಹೆಚ್ಚಾಗಿರುವುದು.

ಪರಿವಾಳಗಳ ರೆಕ್ಕೆಗಳಿಂದ‌ ಅಸ್ತಮ ಕೇಸ್​ಗಳು ಹೆಚ್ಚಾಗ್ತಿವೆ.‌ ಈ ಬೇಸಿಗೆಯ ಸಮಯದಲ್ಲಿ ಪರಿವಾಳಗಳು ಹೆಚ್ಚಾದ್ರೆ ಆರೋಗ್ಯದ ಮೇಲೆ‌ ಪರಿಣಾಮ ಬೀರಲಿದೆ.‌ ಅಲ್ಲದೇ ರೇಸ್ ಕೋರ್ಸ್ ಸರ್ಕಲ್ ನಲ್ಲಿ ಅಭಿವೃದ್ಧಿ ಕೆಲಸ ಶುರು ಆಗಿದೆ. ರೇಸ್ ಕೋರ್ಸ್ ರಸ್ತೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪರಿವಾಳಗಳಿವೆ. ದಿನನಿತ್ಯ ಇಲ್ಲಿಗೆ ಪಕ್ಷಿ ಪ್ರಿಯರು ಬಂದು ಅವುಗಳಿಗೆ ನೀರು, ಆಹಾರ ನೀಡ್ತಾರೆ. ಇದ್ರಿಂದ ರೇಸ್ ಕೋರ್ಸ್ ರಸ್ತೆ ಸರ್ಕಲ್ ಸಂಪೂರ್ಣವಾಗಿ ಪಾರಿವಾಳ ಪಿಕ್ಕೆಯಿಂದ ಹಾಳಾಗ್ತಿದೆ. ಇದನ್ನ ತಪ್ಪಿಸಲು ಪಾಲಿಕೆ‌ ಈ ರೀತಿಯಾಗಿ ದಂಡ ಪ್ರಯೋಗಕ್ಕೆ‌ ಮುಂದಾಗಿದೆ. ಮತ್ತೊಂದೆಡೆ ವೈಧ್ಯರು ಪಾರಿವಾಳಗಳಿಂದ ಕೊಂಚ ದೂರ ಇರಿ ಎಂದು ಸಲಹೆ ನೀಡಿದ್ದಾರೆ.

ಕಂಡ ಕಂಡಲ್ಲಿ ಪಾರಿವಾಳಗಳಿಗೆ ಆಹಾರ ಹಾಕೋದು ಮಾನವೀಯ ಉತ್ತಮ‌ಗುಣ. ಇದು ಮಕ್ಕಳಿಗೆ ಹಾಗೂ‌ ಮಹಿಳೆಯರಿಗೆ ವೃದ್ಧ ರಿಗೆ ಉಸಿರಾಟ ಸಮ್ಯಸೆ ಇರೋರಿಗೆ ಮಾರಕವಾಗಬಹುದು ಎಂದು ಕೆಲವು ವರದಿಗಳು ಬಂದಿದೆ.‌ ಆದರೆ ಇದು ಎಲ್ಲಿಯೂ ಸಾಭೀತಾಗಿಲ್ಲ.‌ ಪರಿವಾಳಗಳ ಹಾಟ್ ಸ್ಪಾಟ್ ನಲ್ಲಿ ಫುಡ್ ಹಾಕಬೇಡಿ ಅಂದ್ರೆ ಬೇರೆಲ್ಲಿ ಫುಡ್ ಹಾಕಬೇಕು.‌ ಹೊರವಲಯದಲ್ಲಿ ಪಾರಿವಾಳಗಳಿಗೆಂದೇ ವಿಶೇಷ ಜಾಗ ಮೀಸಲಿಡಿ. ಮೊದಲೇ ನಗರದಲ್ಲಿ ಹಕ್ಕಿ ಪಕ್ಷಿಗಳ ಸಂಖ್ಯೆ ಕಡಿಮೆಯಾಗಿ ಹೋಗಿದೆ.‌ ಈ ಮಧ್ಯೆ ಪಾರಿವಾಳಗಳು ಇರುವುದು ಬೇಡ ಅಂದ್ರೆ ಹೇಗೆ ಅಂತ ಪಾರಿವಾಳ‌ ಪ್ರಿಯರು ಆಕ್ರೋಶ ಹೊರ ಹಾಕಿದ್ದಾರೆ.

RELATED ARTICLES
- Advertisment -
Google search engine

Most Popular