ಮೈಸೂರು : ಕೇವಲ ೩೦೦ ರೂಪಾಯಿ ಸಲುವಾಗಿ ಸಹೋದರರ ಮಧ್ಯ ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿ ಈ ವೇಳೆ ಮನನೊಂದ ತಮ್ಮ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಅಹಲ್ಯ ಗ್ರಾಮದಲ್ಲಿ ಈ ಒಂದು ದುರಂತ ಸಂಭವಿಸಿದೆ.
ಹೌದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಸಿದ್ದರಾಜು ಎಂದು ಹೇಳಲಾಗುತ್ತಿದೆ. ಕರೆಂಟ್ ಬಿಲ್ ಕಟ್ಟಿ ಮನೆಗೆ ಬಂದ ಸಿದ್ದರಾಜು ಅಣ್ಣ ನಿಂಗಣ್ಣನ ಬಳಿ ೨೦೦ ರೂಪಾಯಿ ಕರೆಂಟ್ ಬಿಲ್ ಕಟ್ಟಿದ್ದೇನೆ ೨೦೦ ರೂ ಕೊಡು ಎಂದು ಕೇಳಿದ್ದಾನೆ. ಈ ವೇಳೆ ನನ್ನ ಬಳಿ ಹಣ ಕೇಳುತ್ತೀಯಾ ನಿಂಗಣ್ಣ ತಮ್ಮ ಸಿದ್ದರಾಜು ಮೇಲೆ ಹಲ್ಲೆ ಮಾಡಿದ್ದಾನೆ.
ಕರೆಂಟ್ ಬಿಲ್ ಕಟ್ಟಿ ತನ್ನ ೨೦೦ ರೂಪಾಯಿ ಕೇಳಿದ್ದಕ್ಕೆ ಅಣ್ಣ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಮನನೊಂದು ಸಿದ್ದರಾಜು ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಆರೋಪಗಳು ಕೇಳಿಬಂದಿವೆ. ಈ ಒಂದು ಆತ್ಮಹತ್ಯೆಗೆ ಸಂಬಂಧಿಸಿದಂತೆ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.