
ಬೆಂಗಳೂರು, ಜೂನ್ 12: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮೊದಲ ಗ್ಯಾರಂಟಿಯಾದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಜಾರಿಯಾದ ಬೆನ್ನಲ್ಲೇ ಬಾಡಿಗೆದಾರರು ಸೇರಿದಂತೆ ಎಲ್ಲಾ ಮನೆಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ಯೋಜನೆಯಾದ ಗೃಹ ಜ್ಯೋತಿ ಅನುಷ್ಠಾನವನ್ನು ಕರ್ನಾಟಕ ಇದೀಗ ಎದುರು ನೋಡುತ್ತಿದೆ. ಆದರೆ ಬಾಡಿಗೆದಾರರು ಯೋಜನೆಯನ್ನು ಆರಿಸಿಕೊಂಡರೆ ನೈಜ ಆದಾಯವನ್ನು ಬಹಿರಂಗಪಡಿಸಬೇಕಾಗಬಹುದು ಮತ್ತು ಹೀಗಾಗಿ ಆದಾಯ ತೆರಿಗೆ ನಿವ್ವಳ ಅಡಿಯಲ್ಲಿ ತರಲಾಗುತ್ತದೆ ಎಂಬ ಭಯದಿಂದ ಭೂಮಾಲೀಕರು ಚಿಂತಕ್ರಾಂತರಾಗಿದ್ದಾರೆ.
ವರದಿಯ ಪ್ರಕಾರ, ಅನೇಕ ಮನೆ ಮಾಲೀಕರು ಯೋಜನೆಗೆ ಅರ್ಜಿ ಸಲ್ಲಿಸುವುದನ್ನು ವಿರೋಧಿಸುತ್ತಿದ್ದಾರೆ ಮತ್ತು ತಮ್ಮ ಬಾಡಿಗೆದಾರರನ್ನು ಕೂಡ ಅರ್ಜಿ ಹಾಕದಂತೆ ತಿಳಿಸಿದ್ದಾರೆ. ಇದಕ್ಕಾಗಿ ಮನೆ ಮಾಲೀಕರು ಮಾಸಿಕ ಬಾಡಿಗೆಯಲ್ಲಿ ರಿಯಾಯಿತಿ ನೀಡುವ ಮಟ್ಟಕ್ಕೂ ಇಳಿದಿದ್ದಾರೆ ಎಂದು ತಿಳಿಸಿದೆ.
ರಾಜ್ಯ ಸರ್ಕಾರವು ಎಲ್ಲರಿಗೂ 200 ಯೂನಿಟ್ ಉಚಿತ ವಿದ್ಯುತ್ ಘೋಷಿಸಿರಬಹುದು. ಆದರೆ ಬಾಡಿಗೆದಾರರು ತಮ್ಮ ಮನೆ ಮಾಲೀಕರ ಕೃಪಕಾಟಕ್ಷದಲ್ಲಿದ್ದಾರೆ. ಮನೆ ಮಾಲೀಕರು ತಮ್ಮ ಆಸ್ತಿಗಳ ಬಾಡಿಗೆ ಮತ್ತು ಗುತ್ತಿಗೆ ಒಪ್ಪಂದಗಳನ್ನು ಸರ್ಕಾರಿ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಿದರೆ, ಅವರ ನಿಜವಾದ ಆದಾಯ ಗೊತ್ತಾಗುತ್ತದೆ ಎಂದು ಭಾವಿಸಿದ್ದಾರೆ. ಅದರ ಮೇಲೆ ಹೆಚ್ಚುವರಿ ತೆರಿಗೆಗಳನ್ನು ಅವರಿಗೆ ವಿಧಿಸಲಾಗುತ್ತದೆ ಎಂದು ಬಾಡಿಗೆದಾರರೊಬ್ಬರು ಹೇಳಿರುವುದಾಗಿ ತಿಳಿಸಿದೆ. ಬಹುತೇಕ ಭೂಮಾಲೀಕರು ಬಾಡಿಗೆಯನ್ನು ನಗದು ರೂಪದಲ್ಲಿ ಸಂಗ್ರಹಿಸುತ್ತಾರೆ. ಯೋಜನೆಗೆ ಸಂಬಂಧಿಸಿದ ದಾಖಲೆಗಳನ್ನು ಬಹಿರಂಗಪಡಿಸುವುದರಿಂದ ಬಾಡಿಗೆ ನೀಡಿರುವ ಅನೇಕ ಮನೆ ಮಾಲೀಕರ ಆದಾಯ ಸಿಕ್ಕಿಬೀಳುವ ಭಯವಿದೆ. ನಾನು ನನ್ನ ಎಲ್ಲಾ ಐದು ಮನೆಗಳನ್ನು ಬಾಡಿಗೆಗೆ ನೀಡಿದಿದ್ದೇನೆ ಮತ್ತು ಬಾಡಿಗೆಗಳನ್ನು ಮಾಸಿಕ ಅಥವಾ ದ್ವೈಮಾಸಿಕ ಹಣದ ರೂಪದಲ್ಲಿ ಸಂಗ್ರಹಿಸುತ್ತೇನೆ. ಪ್ಯಾನ್ ಮತ್ತು ಆಧಾರ್ ಕಾರ್ಡ್ ಸಂಖ್ಯೆಗಳ ಲಿಂಕ್ ಮಾಡುವುದರೊಂದಿಗೆ ನಮ್ಮ ಆಸ್ತಿ ವಿವರಗಳನ್ನು ಪ್ಯಾನ್ ಸಂಖ್ಯೆಗಳೊಂದಿಗೆ ಬಹಿರಂಗಪಡಿಸಿದರೆ ಐ-ಟಿ ಅಧಿಕಾರಿಗಳಿಗೆ ಪರಿಶೀಲಿಸಲು ಸುಲಭವಾಗುತ್ತದೆ. ತೆರಿಗೆ ವಂಚನೆ ಮತ್ತು ನಾವು ಬಹಿರಂಗಪಡಿಸದ ಆದಾಯಕ್ಕಾಗಿ ಸಿಕ್ಕಿಬೀಳುತ್ತೇವೆ ಎಂದು ಮನೆ ಮಾಲೀಕರೊಬ್ಬರು ಬಹಿರಂಗವಾಗಿ ಹೇಳಿದ್ದಾರೆ. ಗೃಹಜ್ಯೋತಿ ಯೋಜನೆಯನ್ನು ಬಳಸಿಕೊಳ್ಳಲು ಗ್ರಾಹಕ ಐಡಿ ಅಥವಾ ಖಾತೆ ಐಡಿಗೆ ಆಧಾರ್ ಲಿಂಕ್ ಮಾಡಬೇಕೆಂದು ಸರ್ಕಾರ ಒತ್ತಾಯಿಸಿದೆ. ಬಾಡಿಗೆದಾರರ ಸಮಸ್ಯೆಗೆ ಸಂಬಂಧಿಸಿದಂತೆ ನಿರ್ದಿಷ್ಟ ವಿಳಾಸದಲ್ಲಿ ಅವರ ವಾಸಸ್ಥಳವನ್ನು ದೃಢೀಕರಿಸುವ ಯಾವುದೇ ದಾಖಲೆಗಳು ಸರ್ಕಾರಕ್ಕೆ ಅಗತ್ಯವಿದೆ ಎಂದು ವಿದ್ಯುತ್ ಸಚಿವ ಕೆ ಜೆ ಜಾರ್ಜ್ ಹೇಳಿದ್ದಾರೆ.
ಬಾಡಿಗೆದಾರರು ರೆವಿನ್ಯೂ ರಿಜಿಸ್ಟರ್ (RR) ಸಂಖ್ಯೆಯ ಜೊತೆಗೆ ಅವರು ನಿರ್ದಿಷ್ಟ ವಿಳಾಸದಲ್ಲಿ ತಮ್ಮ ನಿವಾಸವನ್ನು ತೋರಿಸುವ ಯಾವುದೇ ದಾಖಲೆಯನ್ನು ಒದಗಿಸಬೇಕೆಂದು ನಾವು ಬಯಸುತ್ತೇವೆ. ಅದು ಮತದಾರರ ಐಡಿ, ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಇತ್ಯಾದಿ ಆಗಿರಬಹುದು ಎಂದು ಜಾರ್ಜ್ ಹೇಳಿದ್ದಾರೆ. ಈ ಸಂಬಂಧ ಸೋಮವಾರವೂ ಸಚಿವರು ಅಧಿಕಾರಿಗಳ ಜತೆ ಸಭೆ ನಡೆಸಲಿದ್ದಾರೆ. ಗ್ರಾಹಕರ ವಾರ್ಷಿಕ ಬಳಕೆ ಸರಾಸರಿ ಮತ್ತು 10 ಪ್ರತಿಶತ ಯುನಿಟ್ ವಿದ್ಯುತ್ ಯೋಜನೆಯ ಮೂಲ ನಿಯತಾಂಕವಾಗಿದೆ. ಅವರ ಒಟ್ಟು ಬಳಕೆ 200 ಯೂನಿಟ್‌ಗಿಂತ ಕಡಿಮೆಯಿದ್ದರೆ, ಅವರು ಹಣವನ್ನು ಪಾವತಿಸುವ ಅಗತ್ಯವಿಲ್ಲ.