ಮಡಿಕೇರಿ: ಅಪ್ರಾಪ್ತ ಮಗನಿಗೆ ದ್ವಿಚಕ್ರ ವಾಹನ ಚಾಲನೆ ಮಾಡಲು ಕೊಟ್ಟ ತಪ್ಪಿಗೆ ಬಾಲಕನ ತಂದೆ ಬರೋಬ್ಬರಿ 25 ಸಾವಿರ ರೂ. ದಂಡ ತೆತ್ತಿದ್ದಾನೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ರೇಂಜರ್ ಬ್ಲಾಕಿನ ಬಿ.ಎಸ್ ಮಂಜುನಾಥ ಎಂಬುವವರು ತಮ್ಮ ಅಪ್ರಾಪ್ತ ಮಗನಿಗೆ ದ್ವಿಚಕ್ರ ವಾಹನ ಚಾಲನೆ ಮಾಡಲು ನೀಡಿದ್ದರು. ಈ ಸಂಬಂಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮ್ಮೆ ಸಂಖ್ಯೆ 116/24 ರಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಸೋಮವಾರಪೇಟೆ ಜೆಎಂಎಫ್‌ಸಿ ಕೋರ್ಟ್ ಮಂಜುನಾಥ್ ಅವರಿಗೆ 25,000 ರೂ. ದಂಡ ವಿಧಿಸಿದೆ. ಇದರೊಂದಿಗೆ ದ್ವಿಚಕ್ರ ವಾಹನದ ಎಫ್‌ಸಿ ನವೀಕರಿಸದಕ್ಕೆ ಹೆಚ್ಚುಬರಿ 2,000 ರೂ. ಸೇರಿ ಒಟ್ಟು 27,000 ರೂ. ದಂಡ ವಿಧಿಸಿದೆ.