ಮಂಡ್ಯ: 25ನೇ ಕಾರ್ಗಿಲ್ ವಿಜಯೋತ್ಸವ ದಿವಸ ಹಿನ್ನಲೆ ಆಕಾಶ್ ಬುಟ್ಟಿಯನ್ನು ಹಾರಿಸುವ ಮೂಲಕ ನಮನ ಸಲ್ಲಿಸಲಾಯಿತು.
ಜೀವಧಾರೆ ಟ್ರಸ್ಟ್ ವತಿಯಿಂದ ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹುತಾತ್ಮ ಯೋಧರಿಗೆ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ನಮನ ಸಲ್ಲಿಸಿದರು.
ಬಳಿಕ ಜ್ಯೋತಿ ಬೆಳಗುವ ಮೂಲಕ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
524 ಆಕಾಶ್ ಬುಟ್ಟಿಯನ್ನು ಹಾರಿಸುವ ಮೂಲಕ ನಮನ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಡಿಸಿ ಡಾ.ಕುಮಾರ, ಜೀವಧಾರ ಟ್ರಸ್ಟ್ ನ ನಟರಾಜ್, ಸೇರಿ ಹಲವರು ಭಾಗಿಯಾಗಿದ್ದರು.