Monday, April 21, 2025
Google search engine

Homeಅಪರಾಧಅಂದರ್-ಬಾಹರ್ ಆಡುತ್ತಿದ್ದ ೨೭ ಜೂಜುಕೋರರು ಅಂದರ್: ಸಿಸಿಬಿ ಕಾರ್ಯಾಚರಣೆ : ೩.೧೫ ಲಕ್ಷ ನಗದು ವಶ

ಅಂದರ್-ಬಾಹರ್ ಆಡುತ್ತಿದ್ದ ೨೭ ಜೂಜುಕೋರರು ಅಂದರ್: ಸಿಸಿಬಿ ಕಾರ್ಯಾಚರಣೆ : ೩.೧೫ ಲಕ್ಷ ನಗದು ವಶ

ಮೈಸೂರು : ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಹಣ ಪಣಕ್ಕೊಡ್ಡಿ ಅಂದರ್-ಬಾಹರ್ ಆಡುತ್ತಿದ್ದ ಒಟ್ಟು ೨೭ ಜೂಜುಕೋರರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ಅವರಿಂದ ೩,೧೫,೪೭೦ ರೂ. ನಗದು ವಶಕ್ಕೆ ಪಡೆದಿದ್ದಾರೆ.

ಮೇ,೫ ರಂದು ವಿದ್ಯಾರಣ್ಯಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀರಾಂಪುರ ೨ನೇ ಹಂತ ನಿರ್ಮಲ ಸ್ಕೂಲ್ ಹಿಂಭಾಗ ಸರ್ವೆ ನಂ.೬೦ಕ್ಕೆ ಸೇರಿದ ಖಾಲಿ ಜಾಗದಲ್ಲಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ವಿದ್ಯಾರಣ್ಯಪುರಂ ಪೊಲೀಸರ ಜತೆ ಜಂಟಿ ದಾಳಿ ನಡೆಸಿ ೧೮ ಜನರನ್ನು ವಶಕ್ಕೆ ಪಡೆದು ಅವರಿಂದ ಒಟ್ಟು ೨,೦೨,೭೨೦ ರೂ. ನಗದು ಹಣವನ್ನು ವಶಪಡಿಸಿಕೊಂಡಿದ್ದು, ಈ ಸಂಬಂಧ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅದೇ ರೀತಿ ಮೇ,೫ ರಂದು ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಚೌಡೇಶ್ವರಿ ದೇವಸ್ಥಾನದ ಹತ್ತಿರ ವಾಟರ್ ಟ್ಯಾಂಕ್ ರಸ್ತೆಯ ಪಕ್ಕದ ಖಾಲಿ ಜಾಗದಲ್ಲಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಆಲನಹಳ್ಳಿ ಪೊಲೀಸರ ಜತೆ ಜಂಟಿ ದಾಳಿ ನಡೆಸಿ ಜೂಜಾಟದಲ್ಲಿದ್ದ ೯ ಜನರನ್ನು ವಶಕ್ಕೆ ಪಡೆದು ಅವರಿಂದ ೧,೧೨,೭೫೦ ರೂ, ನಗದು ಹಣವನ್ನು ವಶಕ್ಕೆ ಪಡೆಯಲಾಗಿದ್ದು, ಈ ಬಗ್ಗೆ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಳಿ ಕಾರ್ಯವನ್ನು ಮೈಸೂರು ನಗರದ ಪೊಲೀಸ್ ಆಯುಕ್ತರಾದ ಬಿ. ರಮೇಶ್ ಪ್ರಶಂಸಿಸಿದ್ದಾರೆ.

RELATED ARTICLES
- Advertisment -
Google search engine

Most Popular