Friday, April 11, 2025
Google search engine

Homeಸ್ಥಳೀಯಜೂ.೨೭ರಂದು ನಾಡಪ್ರಭು ಕೆಂಪೇಗೌಡ, ಹಡಪದ ಅಪ್ಪಣ್ಣನವರ ಜಯಂತಿ

ಜೂ.೨೭ರಂದು ನಾಡಪ್ರಭು ಕೆಂಪೇಗೌಡ, ಹಡಪದ ಅಪ್ಪಣ್ಣನವರ ಜಯಂತಿ


ಕೆ.ಆರ್.ನಗರ: ನಾಡಪ್ರಭು ಕೆಂಪೇಗೌಡ, ಹಡಪದ ಅಪ್ಪಣ್ಣನವರ ಜಯಂತಿಗಳನ್ನು ಜೂ.೨೭ರಂದು ಪಟ್ಟಣದ ಹೆಚ್.ಡಿ.ದೇವೇಗೌಡ ಸಮುದಾಯ ಭವನದಲ್ಲಿ ಆಚರಿಸಲು ನಿರ್ಧರಿಸಲಾಯಿತು. ಪಟ್ಟಣದ ತಾಲೂಕು ಕಛೇರಿ ಸಭಾಂಗಣದಲ್ಲಿ ಶಾಸಕ ಡಿ.ರವಿಶಂಕರ್ ಅಧ್ಯಕ್ಷತೆಯಲ್ಲಿ ನಡೆದ ಪೂರ್ವ ಭಾವಿ ಸಭೆಯಲ್ಲಿ ಹಲವು ಮುಖಂಡರು ಮಾತನಾಡಿ ಮಹನೀಯರ ಜಯಂತಿಗಳನ್ನು ಅರ್ಥ ಪೂರ್ಣವಾಗಿ ನಡೆಸುವಂತೆ ಹೇಳಿದರು.
ನಾಡಪ್ರಭು ಕೆಂಪೇಗೌಡ ಮತ್ತು ರಾಷ್ಟ್ರಕವಿ ಕುವೆಂಪುರವರ ಪುತ್ಥಳಿ ಸ್ಥಾಪನೆ ಮಾಡಲು ಬದ್ದನಾಗಿದ್ದು ಒಕ್ಕಲಿಗರ ಸಂಘ ಸೂಕ್ತ ಸ್ಥಳ ನಿಗಧಿ ಪಡಿಸಿದ್ದಲ್ಲಿ ಪುತ್ಥಳಿಗಳನ್ನು ವೈಯುಕ್ತಿಕವಾಗಿ ನಿರ್ಮಿಸಿಕೊಡುವುದಾಗಿ ಹೇಳಿದ ಶಾಸಕರು ಮುಂದಿನ ಬಾರಿಯಿಂದ ಒಂದು ಬಾರಿ ಕೆ.ಆರ್.ನಗರ ಮತ್ತೊಂದು ಬಾರಿ ಸಾಲಿಗ್ರಾಮ ತಾಲೂಕು ಕೇಂದ್ರದಲ್ಲಿ ಜಯಂತಿ ಆಚರಣೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು. ಜಯಂತಿ ಆಚರಣೆಯಲ್ಲಿ ಆಯಾ ಸಮಾಜದ ಜತೆಗೆ ಇತರ ಸಮುದಾಯದ ಮುಖಂಡು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಒಕ್ಕಲಿಗರ ಸಂಘದ ವತಿಯಿಂದ ಶಾಸಕ ಡಿ.ರವಿಶಂಕರ್ ಅವರನ್ನು ಸನ್ಮಾನಿಸಲಾಯಿತು. ತಹಶೀಲ್ದಾರ್‌ಗಳಾದ ಎಂ.ಜಿ.ಸಂತೋಷ್‌ಕುಮಾರ್, ತಿಮ್ಮಪ್ಪ, ಇಒ ಸತೀಶ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿಂಡಿಮಶಂಕರ್ ನೌಕರರ ಸಂಘದ ಅಧ್ಯಕ್ಷ ಸಿ.ಜೆ.ಅರುಣ್‌ಕುಮಾರ್, ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಟಿ.ಅಣ್ಣೇಗೌಡ, ಕಾರ್ಯದರ್ಶಿ ಅಣ್ಣಾಜಿಗೌಡ, ಖಜಾಂಚಿ ಹೆಚ್.ಪಿ.ಶಿವಣ್ಣ, ಸವಿತಾ ಸಮಾಜದ ಕೇಶಾಲಂಕಾರಿಗಳ ಸಂಘದ ಅಧ್ಯಕ್ಷ ಎಂ.ಎಸ್.ರಾಜೇಶ್, ಉಪಾಧ್ಯಕ್ಷ ಭಾಸ್ಕರ್, ಕಾರ್ಯದರ್ಶಿ ಕುಮಾರ್, ಕಾಂಗ್ರೆಸ್ ವಕ್ತಾರ ಸೈಯದ್‌ಜಾಬೀರ್, ಮುಖಂಡರಾದ ಯೋಗೀಶ್, ವ್ಯಾನ್‌ಸುರೇಶ್, ಕೆ.ಸಿ.ಹರೀಶ್, ಎ.ಟಿ.ಗೋವಿಂದೇಗೌಡ, ಶಾಂತಿರಾಜ್ ಮತ್ತಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular