Friday, April 11, 2025
Google search engine

Homeರಾಜ್ಯಬೆಂಗಳೂರಿನಲ್ಲಿ ಪಟಾಕಿ ಸಿಡಿದು 29 ಮಂದಿಗೆ ಗಾಯ : ಆಸ್ಪತ್ರೆಗೆ ದಾಖಲು!

ಬೆಂಗಳೂರಿನಲ್ಲಿ ಪಟಾಕಿ ಸಿಡಿದು 29 ಮಂದಿಗೆ ಗಾಯ : ಆಸ್ಪತ್ರೆಗೆ ದಾಖಲು!

ಬೆಂಗಳೂರು : ಬೆಂಗಳೂರಿನಲ್ಲಿ ಸಾಲು ಸಾಲು ಪಟಾಕಿ ಅವಘಡಗಳು ಸಂಭವಿಸಿದ್ದು, ನಿನ್ನೆ ರಾತ್ರಿಯಿಂದ ಪಟಾಕಿ ಅವಘಢದಿಂದ ಗಾಯಗೊಂಡವರ ಸಂಖ್ಯೆ 29 ಕ್ಕೆ ಏರಿಕೆಯಾಗಿದೆ.

ಪಟಾಕಿ ಹಚ್ಚಲು ಹೋಗಿ ಮಕ್ಕಳು ಸೇರಿದಂತೆ 29 ಮಂದಿ ಗಾಯಗೊಂಡಿದ್ದು, ಕಣ್ಣು ಸೇರಿ ದೇಹದ ಹಲವು ಭಾಗಗಳಿಗೆ ಗಾಯಗಳಾಗಿದೆ. ಗಾಯಗೊಂಡವರಿಗೆ ಮಿಂಟೋ ಸೇರಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದೆ.

ಬೆಂಗಳೂರು ನಗರದಲ್ಲಿ ಪಟಾಕಿ ಸಿಡಿದು ಈವರೆಗೆ 29 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಪಟಾಕಿ ಸಿಡಿಸುವಾಗ ಹಾಗೂ ಬೇರೆಯವರು ಪಟಾಕಿ ಸಿಡಿಸುವುದನ್ನು ಸಮೀಪದಲ್ಲಿ ನಿಂತು ಹಲವರ ಕಣ್ಣಿಗೆ ಗಾಯಗಳಾಗಿವೆ. ಗಾಯಗೊಂಡ ಮೂವರು ಮಕ್ಕಳ ನಾರಾಯಣ ನೇತ್ರಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಮಿಂಟೋ ಆಸ್ಪತ್ರೆಯಲ್ಲಿ 5 ವರ್ಷದ ಬಾಲಕ ಮತ್ತು 18 ವರ್ಷದ ಯುವಕ ಸೇರಿ ಇಬ್ಬರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದಂತೆ 3 ವರ್ಷದ ಹೆಣ್ಣು ಮಗುವಿನ ಕಣ್ಣಿಗೆ ತಾಗಿ ಕಾರ್ನಿಯಾಗೆ ಹಾನಿಯಾಗಿದೆ ಎನ್ನಲಾಗಿದೆ.

ಪಟಾಕಿ ಸಿಡಿಸುವ ಮುನ್ನ ಯಾವುದೇ ಅನಾಹುತ ಆಗದಂತೆ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳೋದು ಒಳ್ಳೆಯದು. ಇದಕ್ಕೆ ಬೆಳಕಿನ ಹಬ್ಬ ದೀಪಾವಳಿ ಭವಿಷ್ಯ ಬೆಳಗುವ ಹಬ್ಬವಾಗಲಿ. ರಾಸಾಯನಿಕ ಪಟಾಕಿಗಳನ್ನು ತ್ಯಜಿಸಿ, ಹಸಿರು ಪಟಾಕಿಗಳನ್ನು ಮಾತ್ರವೇ ಬಳಸಿ. ಪಟಾಕಿ ಸಿಡಿಸುವಾಗ ಜಾಗರೂಕರಾಗಿರಿ. ಪರಿಸರ ಸ್ನೇಹಿ ಹಬ್ಬ ನಮ್ಮ ಆದ್ಯತೆಯಾಗಲಿ ಎಂದು ವೈದ್ಯರು ಹಲವು ಸಲಹೆಗಳನ್ನು ನೀಡಿದ್ದಾರೆ.

ಹೀಗಿವೆ ವೈದ್ಯರ ಸಲಹೆಗಳು

  • ಪಟಾಕಿ ಖರೀದಿಸುವಾಗ ಐಎಸ್‌ಐ ಪ್ರಮಾಣೀಕರಣದ ಗುರುತಿನ ಹಸಿರು ಪಟಾಕಿಗಳನ್ನು ಖರೀದಿಸಿ.
  • ಪಟಾಕಿ ಬಾಕ್ಸ್‌ ಮೇಲಿರುವ ಎಚ್ಚರಿಕೆ, ಸೂಚನೆಗಳನ್ನು ಅನುಸರಿಸಿ.
  • ಕನಿಷ್ಠ 2-3 ಅಡಿ ದೂರ ನಿ೦ತು ಪಟಾಕಿ ಹಚ್ಚಿ.
  • ಪಟಾಕಿ ಹಚ್ಚಲು ಉದ್ದನೆಯ ಕೋಲು ಬಳಸಿ.
  • ಮೈದಾನ, ಖಾಲಿ ಜಾಗಗಳಲ್ಲಷ್ಟೇ ಪಟಾಕಿ ಹಚ್ಚಿ.
  • ಬೆಂಕಿ ಹಾಗೂ ಥಟ್ಟನೆ ಹೊತ್ತಿಕೊಳ್ಳುವ ವಸ್ತುಗಳ ಬಳಿ ಪಟಾಕಿ ಸಂಗ್ರಹಿಸಿಡಬೇಡಿ.
  • ಪಟಾಕಿ ಸುಡುವುದಕ್ಕೆ ಗಾಜಿನ ಬಾಟಲಿಗಳನ್ನು ಬಳಸಬೇಡಿ. ಇದರಿ೦ದ ಸಿಡಿಯುವ ಗಾಜಿನ ಚೂರುಗಳು ಕಣ್ಣಿಗೆ ಹಾನಿ ಮಾಡಬಹುದು.
  • ಮಕ್ಕಳು ಒ೦ಟಿಯಾಗಿ ಪಟಾಕಿ ಸಿಡಿಸುವುದಕ್ಕೆ ಅವಕಾಶ ನೀಡಬೇಡಿ. ಜೊತೆಗೆ ಪೋಷಕರು ಇರಲಿ.
  • ಪಟಾಕಿ ಸಿಡಿದಾಗ ಕಿಡಿ ಬಿದ್ದರೆ ಕಣ್ಣನ್ನು ಉಜ್ಜಿಕೊಳ್ಳಬೇಡಿ.
  • ಅರೆಬರೆ ಸುಟ್ಟಪಟಾಕಿ ತುಣುಕನ್ನು ಗಾಳಿಯಲ್ಲಿ ಎಸೆಯಬೇಡಿ.
  • ಕೈಯಲ್ಲೇ ಪಟಾಕಿ ಸಿಡಿಸುವ ಸಾಹಸ ಬೇಡ.
  • ಅರೆಬರೆ ಸುಟ್ಟಪಟಾಕಿಯನ್ನು ಕೈಯಿಂದ ಹೊಸಕಿ ನಂದಿಸಲು ಯತ್ನಿಸಬೇಡಿ.
RELATED ARTICLES
- Advertisment -
Google search engine

Most Popular