ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ಡೇಂಘಿ ಪ್ರಕರಣಗಳು ಹೆಚ್ಚಾಗ್ತಿವೆ. ಜಿಲ್ಲೆಯಲ್ಲಿ ಇದುವರೆಗೆ 297 ಡೇಂಘಿ ಪ್ರಕರಣ ವರದಿಯಾಗಿದೆ.
ಮಂಡ್ಯ-ಮದ್ದೂರು ತಾಲ್ಲೂಕು ಹೆಚ್ಚು ಡೇಂಘಿ ವರದಿಯಾಗಿದೆ.
ಮಂಡ್ಯ ನಗರ, 37 ಪ್ರಕರಣ ಮಂಡ್ಯ ಗ್ರಾಮೀಣ ಭಾಗ 119 ಪ್ರಕರಣ ದಾಖಲಾಗಿದೆ.
ಮದ್ದೂರು ತಾಲ್ಲೂಕು 40, ಮಳವಳ್ಳಿ ತಾಲ್ಲೂಕು 18, ಪಾಂಡವಪುರ ತಾಲ್ಲೂಕು 16, ನಾಗಮಂಗಲ ತಾಲ್ಲೂಕು 16, ಶ್ರೀರಂಗಪಟ್ಟಣ 34, ಹಾಗೂ ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ 17 ಪ್ರಕರಣ ಪಾಸಿಟಿವ್ ಆಗಿದೆ.
ಸೇರಿದಂತೆ ಜಿಲ್ಲೆಯಲ್ಲಿ ಈವರೆಗೆ 1893 ಡೇಂಘಿ ಪ್ರಕರಣ ಟೆಸ್ಟ್ ಮಾಡಲಾಗಿದೆ ಎಂದು ಮಂಡ್ಯದಲ್ಲಿ ರೋಗ ನಿಯಂತ್ರಣಾಧಿಕಾರಿ ಡಾ.ಕಾಂತರಾಜ್ ಮಾಹಿತಿ ನೀಡಿದ್ದಾರೆ.
ಸಾರ್ವಜನಿಕರು ಎಚ್ಚರ ವಹಿಸುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ.