ವರದಿ: ಸ್ಟೀಫನ್ ಜೇಮ್ಸ್
ಬೆಳಗಾವಿ : ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಹೋರಾಟ ಯಾವ ಕಾರಣಕ್ಕೂ ನಿಲ್ಲುವುದಿಲ್ಲ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಹಾರೂಗೇರಿಯಲ್ಲಿ ಸೆಪ್ಟೆಂಬರ್ 22 ರಂದು ನಡೆದ ಸಾರ್ವಜನಿಕ ಸಭೆ ನಡಿದಿದೆ. ಸಭೆಯಲ್ಲಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಘೋಷಣೆ ಮಾಡಿದ್ದಾರೆ.
ಹಾರೂಗೇರಿಯಲ್ಲಿ ಎಂಟನೇ ಹಂತದ ಮೀಸಲಾತಿ ಹೋರಾಟಕ್ಕೆ ಸೆಪ್ಟೆಂಬರ್ 22 ರಂದು ಅಧಿಕೃತ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿದ್ದಾರೆ. ಪಂಚಮಸಾಲಿ ಸಮಾಜ ಸಂವಿಧಾನಬದ್ಧ ರೀತಿಯಲ್ಲಿ ತನ್ನ ಹಕ್ಕನ್ನು ಸಂಪಾದಿಸಿಕೊಳ್ಳಲಿದೆ. ಎಂದು ಸ್ಪಷ್ಟಪಡಿಸಿದರು.
ಸ್ವಾಮೀಜಿ ಮಾತನಾಡುತ್ತಾ, ಮಹಾರಾಷ್ಟ್ರದ ಮರಾಠ ಮೀಸಲಾತಿ ಹೋರಾಟ ನಮ್ಮೆದುರಿಗೆ ಮಾದರಿಯಾಗಿದೆ. ಕರ್ನಾಟಕದಲ್ಲಿ ಈಗಾಗಲೇ ಒಳಮೀಸಲಾತಿಗೆ ಸಂಬಂಧಿಸಿದಂತೆ ಹಲವಾರು ಹೋರಾಟಗಳು ನಡೆದಿವೆ. ಅದೇ ಮಾದರಿಯಲ್ಲಿ ಪಂಚಮಸಾಲಿ ಸಮಾಜಕ್ಕೂ 2ಎ ಮೀಸಲಾತಿ ಸಿಗಲೇಬೇಕು ಎಂದು ತಮ್ಮ ಉಗ್ರ ನಿಲುವು ತೋರಿಸಿದರು.
ನಮ್ಮ ಹಕ್ಕಿಗೆ ನ್ಯಾಯ ಸಿಗೋದು ಯಾರ ಸಿಎಂ ನೇತೃತ್ವದಲ್ಲಿ ಎಂಬುದು ದೈವ ಇಚ್ಛೆ. ಆದರೆ ನಾವು ಹೋರಾಟದಿಂದ ಹಿಂದೆ ಸರಿಯೋಲ್ಲ ಎಂದೂ ಅವರು ಖಡಕ್ ಎಚ್ಚರಿಕೆ ನೀಡಿದರು.