ಬೆಂಗಳೂರು : ರಾಜ್ಯದ ೧೪ ಲೋಕಸಭಾ ಕ್ಷೇತ್ರಗಳಿಗೆ ೨ನೇ ಹಂತದಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಶೇ ೬೬.೦೫ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗದ ಪ್ರಕಟನೆ ತಿಳಿಸಿದೆ.
ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ೫ ಗಂಟೆ ವೇಳೆಗೆ ೭೨.೭೫ಶೇ ಮತದಾನವಾಗಿದೆ. ಅದೇರೀತಿ, ಬೆಳಗಾವಿಯಲ್ಲಿ೬೫.೬೭ ಶೇ., ಬಾಗಲಕೋಟೆಯಲ್ಲಿ೬೫.೫೫ ಶೇ., ವಿಜಯಪುರದಲ್ಲಿ೬೦.೯೫ ಶೇ., ಕಲಬುರಗಿಯಲ್ಲಿ ೫೭.೨೦ ಶೇ., ರಾಯಚೂರಿನಲ್ಲಿ ೫೯.೪೮ ಶೇ., ಬೀದರ್ ನಲ್ಲಿ ೬೦.೧೭ ಶೇ., ಕೊಪ್ಪಳದಲ್ಲಿ ೬೬.೦೫ ಶೇ., ಬಳ್ಳಾರಿಯಲ್ಲಿ ೬೮.೯೪ ಶೇ., ಹಾವೇರಿಯಲ್ಲಿ ೭೧.೯೦ ಶೇ., ಧಾರವಾಡದಲ್ಲಿ ೬೭.೧೫ ಶೇ., ಉತ್ತರ ಕನ್ನಡದಲ್ಲಿ ೬೯.೫೭ ಶೇ., ದಾವಣಗೆರೆಯಲ್ಲಿ ೭೦.೯೦ ಶೇ. ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ೭೨.೦೭ ಶೇ. ಮತದಾನವಾಗಿದೆ ಎಂದು ಚುನಾವಣಾ ಆಯೋಗ ಪ್ರಕಟನೆಯ ಮೂಲಕ ಮಾಹಿತಿ ನೀಡಿದೆ.