Monday, September 22, 2025
Google search engine

Homeಸ್ಥಳೀಯಚಿಬುಕಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದಿಂದ 3.25 ಕೋಟಿ ಸಾಲ ವಿತರಣೆ: ಸಿ.ಎಂ.ಶಿವಕುಮಾರ್

ಚಿಬುಕಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದಿಂದ 3.25 ಕೋಟಿ ಸಾಲ ವಿತರಣೆ: ಸಿ.ಎಂ.ಶಿವಕುಮಾರ್

ವರದಿ:ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ಚಿಬುಕಹಳ್ಳಿ ಕೃಷಿಪತ್ತಿನ ಸಹಕಾರ ಸಂಘವು 2025-26ನೇ ಸಾಲಿನಲ್ಲಿ ಷೇರುದಾರ ರೈತರಿಗೆ 3.25 ಕೋಟಿ ವಿವಿಧ ಸಾಲವನ್ನು ವಿತರಿಸಿದೆ ಎಂದು ಸಂಘದ ಅಧ್ಯಕ್ಷ ಸಿ.ಎಂ.ಶಿವಕುಮಾರ್ ಹೇಳಿದರು.


ಸೋಮವಾರ ಸಂಘದ ಅವರಣಲ್ಲಿ ನಡೆದ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಂಘವು ಪ್ರಸಕ್ತ ಸಾಲಿನಲ್ಲಿ 4.36 ಲಕ್ಷ ರೂ ಲಾಭ ಗಳಿಗೆ ಎಂದು ತಿಳಿಸಿದರು.

ಸಂಘವು 2024-25 ಸಾಲಿನಲ್ಲಿ ನೀಡಲಾಗಿರುವ 6.26 ಕೋಟಿ ರೂಪಾಯಿಗಳ ವಿವಿಧ ಸಾಲದ ವಸೂಲಾತಿಯು ಶೇ.96 ರಷ್ಟು ಇದ್ದು ಸಂಘದ ಷೇರು ಬಂಡವಾಳ 70.25 ಲಕ್ಷ ಇದ್ದು ಇದರ ಗುರಿಯನ್ನು 1 ಕೋಟಿ ರೂಪಾಯಿಗೆ ಹೆಚ್ವಿಸುವ ಗುರಿ ಹೊಂದಲಾಗಿದೆ ಎಂದರು.

ಸಂಘದ ಬಜೆಟ್ ಮಂಡಿಸಿದ ಸಂಘದ ಸಿಇಓ ಎಚ್.ಎಸ್.ಕೃಷ್ಣೇಗೌಡ ಮಾತನಾಡಿ ಕೆಸಿಸಿ ಬೆಳೆ ಸಾಲವನ್ನು 8 ಕೋಟಿ ರೂಪಾಯಿಗಳಿಗೆ ಹೆಚ್ಚಿಸುವುದು,ರಸಗೊಬ್ಬರ ಮಾರಾಟಕ್ಕೆ ಮತ್ತು ಸಂಘದ ಕಟ್ಟಡಕ್ಕೆ ನಿರ್ಮಾಣಕ್ಕೆ ಮುಂದಾಗುವರ ಜತಗೆ ಟ್ಯಾಕ್ಟರ್, ಹೈನುಗಾರಿಕೆ ಸಾಲವನ್ನು ನೀಡುವು ಅಲ್ಲದೇ ಷೇರುದಾರ ರೈತರು ಮೃತಪಟ್ಟರೇ ಮರಣ ನಿದಿಯಾಗಿ 5 ಸಾವಿರ ನೀಡಲು ಸಂಘದ ಆಡಳಿತ ಮಂಡಳಿ ಮುಂದಾಗಲಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಜಿ.ಪಂ.ಮಾಜಿ ಅಧ್ಯಕ್ಷ ಎಚ್.ಸುಬ್ಬಯ್ಯ, ಟಿಎಪಿಸಿಎಂ ಮಾಜಿ ನಿರ್ದೇಶಕ ಅಶೋಕ್ ನಾಮದಾರಿ, ಹೊಸಕೋಟೆ ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಬಸವರಾಜು, ನಿಂಗರಾಜು, ಪಿಡಿಓ ಸಿ.ಎ.ಕುಮಾರ್, ಸಂಘದ ಮಾಜಿ ಅಧ್ಯಕ್ಷ ಪ್ರೇಮಕುಮಾರ್, ಹೊಸಕೋಟೆ ಡೈರಿ ಅಧ್ಯಕ್ಷ ಪಾಂಡು ರೈತರಾದ ಚೆಲುವರಾಜು, ರಾಮೇಗೌಡ , ಮಂಜುನಾಥ್, ಮಹೇಶ್, ಸೇರಿದಂತೆ ಮತ್ತಿತರರು ಸಂಘಕ್ಕೆ ಹೊಸ ಕಟ್ಟಡ ನಿರ್ಮಾಣ ಅಗದೇ ಇರಲು ಕಾರಣ, ಹೊಸ ಸದಸ್ಯರಿಗೆ ಸಾಲ ವಿತರಣೆ ಮಾಡದಿರುವುದು ಲಾಭ- ನಷ್ಟ ಸೇರಿದಂತೆ ಮತ್ತಿತರ ವಿಷಯಗಳನ್ನ ಚರ್ಚಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಎಂಡಿಸಿಸಿ ಹಳಿಯೂರು ಶಾಖೆಯ ವ್ಯವಸ್ಥಾಪಕ ಪ್ರತಾಪ್ ಆಯಿರಹಳ್ಳಿ, ಜಿಲ್ಲಾ ಬ್ಯಾಂಕಿನ ಮೇಲ್ವಿಚಾರಕ ದಿನೇಶ್ ಮೂಡಲಕೊಪ್ಪಲು ಸಂಘದ ಉಪಾಧ್ಯಕ್ಷ ನಂಜೇಗೌಡ, ನಿರ್ದೇಶಕರಾದ ಎಚ್.ಎಸ್‌.ವೆಂಕಟೇಶ್, ಬಿ.ಜಿ.ಪ್ರಶನ್ನ ಕುಮಾರ್, ಬಿ.ಸಚಿನ್, ಮಂಜುಳಾ,ವೀಣಾ, ಸ್ವಾಮಯ್ಯ, ನಿಂಗರಾಜು, ಸಂಘದ ಗುಮಾಸ್ತ ಎಚ್.ಎಸ್.ನಾಗರಾಜು, ಸಿಬ್ಬಂದಿ ಸಿ.ಎಸ್.ಕುಮಾರ್ ಇದ್ದರು.

ಮುಖಂಡರ ಬಡಿದಾಟ : ಚಿಬುಕಹಳ್ಳಿ ಸಹಕಾರ ಸಂಘದ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಚರ್ಚೆ ಮಾಡುತ್ತಿದ್ದ ವೇಳೆ ಟಿಎಪಿಸಿಎಂಎಸ್ ಮಾಜಿ ನಿರ್ದೇಶಕರಾದ ಹೊಸಕೋಟೆ ಅಶೋಕ್ ರವರು ಏರು ಧ್ವನಿಯಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಹೊಸಕೋಟೆ ಗ್ರಾ.ಪಂ.ಮಾಜಿ ಅಧ್ಯಕ್ಷ ಚಿಬಕಹಳ್ಳಿ ಬಸವರಾಜ್ ರವರು ಧ್ವನಿ ತಗ್ಗಿಸುವಂತೆ ಹೇಳಿದಾಗ ಇಬ್ಬರು ಕೈ ಕೈ ಮಿಲಾಯಿಸಿಕೊಂಡರು ಈ ಸಂದರ್ಭದಲ್ಲಿ ವ್ಯವಸ್ಥಾಪಕರು ಮತ್ತು ಅಧ್ಯಕ್ಷರು ಇಬ್ಬರನ್ನು ಸಭಾಧಾನಪಡಿಸಿದರು ಆದರೆ ಹೊಸಕೋಟೆ ಗ್ರಾಮದ ಸಂಘದ ಸದಸ್ಯರು ಸಭೆಯಿಂದ ಹೊರ ನಡೆದರು

RELATED ARTICLES
- Advertisment -
Google search engine

Most Popular