ಬೆಂಗಳೂರು: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ Darshan) ಅವರ ಮನೆಯಲ್ಲಿ ಖದೀಮರು ಕಳ್ಳತನ ಮಾಡಿದ್ದು, ಬರೋಬ್ಬರಿ 3 ಲಕ್ಷ ರೂ. ದೋಚಿ ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ.
ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ವಾಸವಿರುವ ಹೊಸಕೆರೆಹಳ್ಳಿಯ ಅಪಾರ್ಟ್ ಮೆಂಟ್ ನಲ್ಲಿ ಈ ಕಳ್ಳತನದ ಘಟನೆ ನಡೆದಿದ್ದು, 3 ಲಕ್ಷ ರೂಪಾಯಿ ಹಣವನ್ನ ಕಳ್ಳತನ ಮಾಡಲಾಗಿದೆ ಎನ್ನುಬ ಮಾಹಿತಿ ಇದೆ. ಸದ್ಯಕ್ಕೆ ಈ ಘಟನೆಗೆ ಸಂಬಂಧಪಟ್ಟಂತೆ ಚೆನ್ನಮ್ಮನ್ನ ಅಚ್ಚುಕಟ್ಟ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದ್ದು, ಈ ಘಟನೆಯ ಹಿಂದೆ ಮನೆ ಕೆಲಸದವರ ಕೈವಾಡ ಇದೆ ಎನ್ನುವ ಅನುಮಾನ ಬಂದಿದ್ದು, ಈ ಆಧಾರ ಮೇಲೆ ದೂರು ದಾಖಲು ಮಾಡಲಾಗಿದೆ.
ಇನ್ನು ಈ ಘಟನೆ ವಿಜಯಲಕ್ಷ್ಮಿ ಮನೆಯಲ್ಲಿ ಇಲ್ಲದಿದ್ದಾಗ ನಡೆದಿದೆ. ವಿಜಯಲಕ್ಷ್ಮಿ ಅವರು ಸೆಪ್ಟೆಂಬರ್ 4 ರಂದು ಮೈಸೂರಿಗೆ ಹೋಗಿದ್ದರು. ಈ ಸಮಯದಲ್ಲಿ ಅವರ ಮ್ಯಾನೇಜರ್ ಸ್ವಲ್ಪ ಹಣ ಕೇಳಿದ್ದಾರೆ. ಹಾಗಾಗಿ ಕಬೋರ್ಡ್ ನಲ್ಲಿ ಇದ್ದ ಹಣದಿಂದ ಸ್ವಲ್ಪ ಅವರಿಗೆ ಕೊಟ್ಟು, ಉಳಿದ ಹಣವನ್ನು ಅದೇ ಕಬೋರ್ಡ್‌ನಲ್ಲಿ ಇಟ್ಟಿದ್ದರು. ನಂತರ ಅವರು ಕಬೋರ್ಡ್ ಬೀಗವನ್ನ ಅವರ ತಾಯಿಗೆ ಕೊಟ್ಟು ಹೋಗಿದ್ದರು. ನಂತರ ಅವರು ಸೆಪ್ಟೆಂಬರ್ 7 ರಂದು ಮೈಸೂರಿನಿಂದ ವಿಜಯಲಕ್ಷ್ಮೀ ವಾಪಾಸ್ ಬಂದಿದ್ದಾರೆ. ನಂತರ ನೋಡಿದಾಗ ಹಣ ಕಳ್ಳತನ ಆಗಿರುವುದು ಪತ್ತೆಯಾಗಿದೆ. ಹಾಗಾಗಿ ಸೆ.8 ರಂದು ಹಣ ಕಳ್ಳತನವಾಗಿದೆ ಎಂದು ದೂರು ಸಲ್ಲಿಸಿದ್ದಾರೆ.