Sunday, April 20, 2025
Google search engine

Homeರಾಜ್ಯಚನ್ನೇಗೌಡನಕೊಪ್ಪಲು ಡೈರಿಗೆ ಮೂರು ಲಕ್ಷ ನಿವ್ವಳ ಲಾಭ

ಚನ್ನೇಗೌಡನಕೊಪ್ಪಲು ಡೈರಿಗೆ ಮೂರು ಲಕ್ಷ ನಿವ್ವಳ ಲಾಭ

ಬೆಟ್ಟದಪುರ: ಬೆಟ್ಟದಪುರದ ಚನ್ನೇಗೌಡನಕೊಪ್ಪಲಿನ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘವು 2022-23ನೇ ಸಾಲಿನಲ್ಲಿ 3,73,035ರೂ ನಿವ್ವಳ ಲಾಭಗಳಿಸಿದೆ ಎಂದು ಮೈಮುಲ್ ವಿಸ್ತರಣಾಧಿಕಾರಿ ಸತೀಶ್ ಹೇಳಿದರು.
ಸಂಘದ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಸಂಘವು ಉತ್ತಮ ಲಾಭಾಂಶ ಪಡೆಯುವ ಮೂಲಕ ಸಾಗುತ್ತಿದೆ. ಸಂಘದ ಅಭಿವೃದ್ಧಿಗೆ ಪ್ರತಿಯೊಬ್ಬ ಸದಸ್ಯರ ಸಹಕಾರ ಪ್ರಮುಖವಾಗಿದೆ. ಗುಣಮಟ್ಟದ ಹಾಲು ಪೂರೈಕೆ ಮಾಡುವ ಮೂಲಕ ಹೆಚ್ಚಿನ ಆದಾಯಗಳಿಸಿ ಎಂದರು.
ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಹಾಲು ಸರಬರಾಜು ಮಾಡಿದ ಮೂರು ಜನರಿಗೆ ಸನ್ಮಾನಿಸಿ ಬಹುಮಾನ ನೀಡಲಾಯಿತು.
ಸಂಘದ ಅಧ್ಯಕ್ಷೆ ಸರಸ್ವತಿ, ಉಪಾಧ್ಯಕ್ಷೆ ರಾಜೇಶ್ವರಿ, ನಿರ್ದೇಶಕಿಯರಾದ ಭಾಗ್ಯಮ್ಮ, ವನಜಾಕ್ಷಿ, ಕೆ.ಎಸ್ ಅನಿತ, ಪೂರ್ಣಿಮಾ, ಲತಾ, ವೀಣಾ, ರೂಪ, ಕಾರ್ಯದರ್ಶಿ ಸವಿತಾ, ಸಿಬ್ಬಂದಿಗಳಾದ ಭಾರತಿ, ಪಂಕಜ ಸೇರಿದಂತೆ ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.

RELATED ARTICLES
- Advertisment -
Google search engine

Most Popular