ತುಮಕೂರು: ಜಾತ್ರಾ ಮಹೋತ್ಸವದಲ್ಲಿ ದೇವರ ಕೊಂಡ ಹಾಯುವಾಗ ನೂಕು ನುಗ್ಗಲಿನಿಂದಾಗಿ 30 ಮಂದಿ ಗಾಯಗೊಂಡಿರುವ ಘಟನೆ ತುಮಕೂರು ಜಿಲ್ಲೆ, ತುರುವೇಕೆರೆ ತಾಲ್ಲೂಕಿನ ಮಾವಿನಕೆರೆ ಗ್ರಾಮದಲ್ಲಿ ನಡೆದಿದೆ.
ಬರೋಬ್ಬರಿ 35 ವರ್ಷಗಳ ಬಳಿಕ ನಿನ್ನೆ ನಡೆದ ರಾಮಲಿಂಗೇಶ್ವರ ಮತ್ತು ಚೌಡೇಶ್ವರಿ ಜಾತ್ರಾ ಮಹೋತ್ಸವದಲ್ಲಿ ಈ ದುರಂತ ಸಂಭವಿಸಿದೆ.
ಸಾವಿರಾರು ಮಂದಿ ಜನರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ದೇವರ ಕೊಂಡ ಹಾಯುವಾಗ ನೂಕು ನುಗ್ಗಲು ಏರ್ಪಟ್ಟಿದೆ. ಈ ವೇಳೆ 30 ಕ್ಕೂ ಹೆಚ್ಚು ಮಂಡಿ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನ ಕೂಡಲೇ ತುರುವೇಕೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.