Saturday, April 19, 2025
Google search engine

HomeUncategorizedರಾಷ್ಟ್ರೀಯಮಹಾರಾಷ್ಟ್ರದ ಹಿಂಗೋಲಿಯಲ್ಲಿ 4.5 ತೀವ್ರತೆಯ ಭೂಕಂಪ

ಮಹಾರಾಷ್ಟ್ರದ ಹಿಂಗೋಲಿಯಲ್ಲಿ 4.5 ತೀವ್ರತೆಯ ಭೂಕಂಪ

ಮಹಾರಾಷ್ಟ್ರ: ಹಿಂಗೋಲಿಯಲ್ಲಿ ಇಂದು ಬೆಳಗ್ಗೆ ರಿಕ್ಟರ್ ಮಾಪಕದಲ್ಲಿ 4.5 ತೀವ್ರತೆಯ ಭೂಕಂಪದ ಅನುಭವವಾಗಿದೆ.

ಬೆಳಗ್ಗೆ 7.14ಕ್ಕೆ ಈ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಈ ಮಾಹಿತಿಯನ್ನು ನೀಡಿದೆ.

ಪರ್ಭಾನಿ ಮತ್ತು ನಾಂದೇಡ್‌ ನಲ್ಲಿಯೂ ಭೂಕಂಪನದ ಅನುಭವವಾಗಿದೆ. ಯಾವುದೇ ಪ್ರಾಣ ಅಥವಾ ಆಸ್ತಿ ನಷ್ಟದ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಈ ಹಿಂದೆ ಮಾರ್ಚ್ 21 ರಂದು ಕೂಡ ಹಿಂಗೋಲಿಯಲ್ಲಿ ಭೂಕಂಪ ಸಂಭವಿಸಿತ್ತು . 10 ನಿಮಿಷಗಳ ಅವಧಿಯಲ್ಲಿ ಭೂಮಿ ಎರಡು ಬಾರಿ ಕಂಪಿಸಿತ್ತು.

ಬೆಳಗ್ಗೆ 6.08ಕ್ಕೆ ಮೊದಲ ಭೂಕಂಪನ ಸಂಭವಿಸಿದ್ದು, 6.19ಕ್ಕೆ ಎರಡನೇ ಕಂಪನದ ಅನುಭವವಾಗಿದೆ. ಮೊದಲ ಭೂಕಂಪದ ತೀವ್ರತೆ 4.5 ದಾಖಲಾಗಿದ್ದರೆ, ಎರಡನೇ ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 3.6 ಎಂದು ಅಳೆಯಲಾಗಿದೆ. ಭೂಕಂಪನದ ಅನುಭವವಾದಾಗ ಹೆಚ್ಚಿನ ಜನರು ಮಲಗಿದ್ದರು.

ಭೂಮಿಯಲ್ಲಿ 4 ಮುಖ್ಯ ಪದರಗಳಿವೆ, ಹೊರಗಿನ ಕೋರ್, ಒಳ ಕೋರ್, ಕ್ರಸ್ಟ್ ಮತ್ತು ಮ್ಯಾಂಟಲ್ ಎಂದು ಕರೆಯಲಾಗುತ್ತದೆ. ಈ ಫಲಕಗಳು ಭೂಮಿಯ ಕೆಳಗೆ ತಿರುಗುತ್ತಲೇ ಇರುತ್ತವೆ. ಈ ಫಲಕಗಳು ಒಂದಕ್ಕೊಂದು ಡಿಕ್ಕಿ ಹೊಡೆದಾಗ ಭೂಮಿಯ ಅಡಿಯಲ್ಲಿ ಕಂಪನ ಉಂಟಾಗುತ್ತದೆ ಮತ್ತು ಈ ಫಲಕಗಳು ಜಾರಿದಾಗ ಭೂಕಂಪನದ ಅನುಭವವಾಗುತ್ತದೆ.

ಈ ಸ್ಥಳದಲ್ಲಿ ಭೂಕಂಪಗಳು ಹೆಚ್ಚು ಪ್ರಭಾವ ಬೀರುತ್ತವೆ ಮತ್ತು ಭೂಕಂಪದ ತೀವ್ರತೆಯು ಅಧಿಕವಾಗಿದ್ದರೆ ನಂತರ ಕಂಪನವು ಬಹಳ ದೂರದವರೆಗೆ ಅನುಭವವಾಗುತ್ತದೆ.

RELATED ARTICLES
- Advertisment -
Google search engine

Most Popular