ಕಾಶ್ಮೀರ : ಕಾಶ್ಮೀರ ಕಣಿವೆಯಲ್ಲಿ ಗುರುವಾರ ಭೂಕಂಪ ಸಂಭವಿಸಿದ್ದು, ವರದಿಗಳ ಪ್ರಕಾರ, ರಿಕ್ಟರ್ ಮಾಪಕದಲ್ಲಿ 4.9 ತೀವ್ರತೆ ದಾಖಲಾಗಿದೆ. ಈ ಭೂಕಂಪವು ಇಂದು 4.19ರ ಸುಮಾರಿಗೆ ಕಾಶ್ಮೀರ ಕಣಿವೆಯಲ್ಲಿ ಸಂಭವಿಸಿದೆ.
ಶ್ರೀನಗರ ಮತ್ತು ಕಾಶ್ಮೀರದ ಕೆಲವು ಭಾಗಗಳಲ್ಲಿ ಕೆಲವು ಸೆಕೆಂಡುಗಳ ಕಾಲ ಭೂಕಂಪನದ ಅನುಭವವಾಗಿದೆ.
ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿಗೆ ಹಾನಿಯಾದ ಬಗ್ಗೆ ವರದಿಯಾಗಿಲ್ಲ.