ಕಲಬುರಗಿ: ಯುವಕರಲ್ಲಿ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ಜ್ಞಾನದ ಕೌಶಲ ವೃದ್ಧಿಗಾಗಿ ರಾಜ್ಯದ ೪೫ ಕಾಲೇಜುಗಳಲ್ಲಿ ನಾಲ್ಕು ಹೊಸ ಕೋರ್ಸ್‌ಗಳು ಪ್ರಸಕ್ತ ವರ್ಷದಿಂದ ಆರಂಭವಾಗಲಿದ್ದು, ೧,೫೦೦ ವಿದ್ಯಾರ್ಥಿಗಳಿಗೆ ಪ್ರವೇಶ ಸಿಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.
`ಕೇಂದ್ರದ ಸ್ಕಿಲ್ ಸೆಕ್ಟರ್ ಕೌನ್ಸಿಲ್ ಅಡಿ ಬಿ.ಕಾಂ ಇನ್ ಲಾಜಿಸ್ಟಿಕ್, ಬಿ.ಕಾಂ ಇನ್ ಇ-ಕಾಮರ್ಸ್, ಬಿ.ಕಾಂ ಇನ್ ರಿಟೇಲ್ ಹಾಗೂ ಬ್ಯಾಂಕಿಂಗ್ ಆಂಡ್ ಫೈನಾನ್ಸ್ ಕೋರ್ಸ್‌ಗಳು ಶುರುವಾಗಲಿವೆ. ಎರಡು ವರ್ಷ ಸೈದ್ಧಾಂತಿಕ ಹಾಗೂ ಕೊನೆಯ ವರ್ಷ ಸ್ಟೈಫಂಡ್ ಸಹಿತ ಇಂಟರ್ನ್‌ಶಿಪ್ ಇರಲಿದೆ. ಇದಕ್ಕಾಗಿ ಸ್ಕಿಲ್ ಸೆಕ್ಟರ್ ಕೌನ್ಸಿಲ್ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗುವುದು’ ಎಂದರು.