Sunday, April 20, 2025
Google search engine

Homeಅಪರಾಧಸಮೋಸಾ ತಿಂದು ೪ಅನಾಥ ಮಕ್ಕಳು ಸಾವು

ಸಮೋಸಾ ತಿಂದು ೪ಅನಾಥ ಮಕ್ಕಳು ಸಾವು

ವಿಜಯವಾಡ : ವಿಷಪೂರಿತ ಆಹಾರ ಸೇವಿಸಿ ನಾಲ್ವರು ಅನಾಥ ಮಕ್ಕಳು ಮೃತಪಟ್ಟ ಘಟನೆ ಆಂಧ್ರಪ್ರದೇಶದ ಅನಾಕಪಲ್ಲಿ ಜಿಲ್ಲೆಯಲ್ಲಿ ಸೋಮವಾರ ವರದಿಯಾಗಿದೆ.

ಆರಾಧಾನಾ ಟ್ರಸ್ಟ್ ಕೊಟಾರಟ್ಲಾ ಮಂಡಲದ ಕೈಲಾಸಪಟ್ಟಣಂನಲ್ಲಿ ನಡೆಸುತ್ತಿದ್ದ ಅನಾಥಾಲಯದಲ್ಲಿ ಸಮೋಸಾ, ಚಾಕೋಲೇಟ್ ತಿಂದ ೨೭ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗಿದ್ದರು. ವಾಂತಿ, ವಿಪರೀತ ಸುಸ್ತು ಕಾಣಿಸಿಕೊಂಡಿದ್ದ ಮಕ್ಕಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೋಶುವಾ, ಭವಾನಿ, ಶ್ರದ್ಧಾ ಹಾಗೂ ನಿತ್ಯಾ ಮೃತಪಟ್ಟರು’ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಉಳಿದ ಮಕ್ಕಳನ್ನು ವಿಶಾಖಪಟ್ಟಣದ ಕಿಂಗ್ ಜಾರ್ಜ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಉತ್ತಮ ಚಿಕಿತ್ಸೆ ಕಲ್ಪಿಸುವಂತೆ ಅನಾಕಪಲ್ಲಿ ಜಿಲ್ಲಾಧಿಕಾರಿ ವಿಜಯಾ ಕೃಷ್ಣನ್ ಅವರಿಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಸೂಚನೆ ನೀಡಿದ್ದಾರೆ. ಘಟನೆ ಕುರಿತಂತೆ ಸಮಗ್ರ ವರದಿ ಸಲ್ಲಿಸುವಂತೆ ಆದೇಶಿಸಲಾಗಿದೆ ಎಂದು ತಿಳಿದು ಬಂದಿದೆ.

RELATED ARTICLES
- Advertisment -
Google search engine

Most Popular