Sunday, April 20, 2025
Google search engine

Homeಸ್ಥಳೀಯಜಂಬೂ ಸವಾರಿ ಮೆರವಣಿಗೆಯಲ್ಲಿ ಸಾಗಿದ 49 ಸ್ತಬ್ಧಚಿತ್ರ: ಕಣ್ಮನ ಸೆಳೆದ ವಿವಿಧ ಜಿಲ್ಲೆಗಳ ಸ್ತಬ್ಧಚಿತ್ರಗಳು

ಜಂಬೂ ಸವಾರಿ ಮೆರವಣಿಗೆಯಲ್ಲಿ ಸಾಗಿದ 49 ಸ್ತಬ್ಧಚಿತ್ರ: ಕಣ್ಮನ ಸೆಳೆದ ವಿವಿಧ ಜಿಲ್ಲೆಗಳ ಸ್ತಬ್ಧಚಿತ್ರಗಳು

ಮೈಸೂರು:  ವಿಶ್ವ ವಿಖ್ಯಾತ ಮೈಸೂರು ದಸರಾ  ಪ್ರಮುಖ ಆಕರ್ಷಣೆ ಜಂಬೂ ಸವಾರಿ ಮೆರವಣಿಗೆಗೆ ಸಂಜೆ 4.40ರಿಂದ 5 ಗಂಟೆ ನಡುವೆ ಸಲ್ಲುವ ಶುಭ ಲಗ್ನದಲ್ಲಿ ಸಿಎಂ ಸಿದ್ಧರಾಮಯ್ಯ ಸೇರಿದಂತೆ ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ.

ಅದಕ್ಕೂ ಮುನ್ನ ಕಲಾತಂಡಗಳ ಹಾಗೂ ಸ್ತಬ್ದಚಿತ್ರಗಳ ಮೆರವಣಿಗೆ ಆರಂಭವಾಗಿದೆ.

ವಿವಿಧ ಜಿಲ್ಲೆಗಳ ವಿವಿಧ ಇಲಾಖೆಯ 49 ಸ್ತಬ್ದಚಿತ್ರಗಳು ಜಂಬೂ ಸವಾರಿ ಮೆರವಣಿಗೆಯಲ್ಲಿ ಪ್ರದರ್ಶನಗೊಳ್ಳುತ್ತಿದ್ದು, ಎಲ್ಲರ ಕಣ್ಮನ ಸೆಳೆಯುತ್ತಿವೆ.  ಈ ಬಾರಿ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಯ ಯೋಜನೆ ಮತ್ತು ಬೆಂಗಳೂರು ಜಿಲ್ಲೆಯ  ಚಂದ್ರಯಾನ-3 ಸ್ತಬ್ಧಚಿತ್ರ ಪ್ರಮುಖ ಆಕರ್ಷಣೆಯಾಗಿದೆ.

49 ಸ್ತಬ್ದಚಿತ್ರಗಳ ಪಟ್ಟಿ ಇಲ್ಲಿದೆ

ಬಾಗಲಕೋಟೆ-ಬಾದಾಮಿ ಚಾಲುಕ್ಯರ ರಾಜವಂಶ&ಬನಶಂಕರಿ ದೇವಿ ಟ್ಯಾಬ್ಲೋ

ಬಳ್ಳಾರಿ-ಕುಮಾರಸ್ವಾಮಿ ದೇವಸ್ಥಾನ, ಪಾರ್ವತಿ ದೇವಾಲಯ ಟ್ಯಾಬ್ಲೋ

ಬೆಳಗಾವಿ-ಮಹಾಲಿಂಗೇಶ್ವರ ದೇವಸ್ಥಾನ, ಗೋಕಾಕ್​ ಫಾಲ್ಸ್​, ಸುವರ್ಣಸೌಧ, ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಸ್ತಬ್ಧಚಿತ್ರ

ಬೆಂಗಳೂರು ಗ್ರಾಮಾಂತರ-ದಕ್ಷಿಣ ಕಾಶಿ ಶಿವಗಂಗೆ ದೇವಸ್ಥಾನ ಟ್ಯಾಬ್ಲೋ

ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ-ಚಂದ್ರಯಾನ-3 ಸ್ತಬ್ಧಚಿತ್ರ

ಬೀದರ್-ಕೃಷ್ಣಮೃಗ ಸಂರಕ್ಷಣಾಧಾಮದ ಅರಣ್ಯ ಪ್ರದೇಶ ಟ್ಯಾಬ್ಲೋ

ಚಾಮರಾಜನಗರ-ಜಾನಪದ, ಭಕ್ತಿಯ ಬೀಡು ಹುಲಿ, ಆನೆಗಳ ಸಂತೃಪ್ತಿಯ ಕಾಡು

ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ-ಏಕತೆಯಲ್ಲಿ ಅನೇಕತೆ ಸ್ತಬ್ಧಚಿತ್ರ

ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ-ಬೆಟ್ಟದಿಂದ ಬಟ್ಟಲಿಗೆ ಸ್ತಬ್ಧಚಿತ್ರ

ಚಿತ್ರದುರ್ಗ-ಶ್ರೀಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನ ಟ್ಯಾಬ್ಲೋ

ದ.ಕನ್ನಡ-ಪಿಲಕುಳ ಗುತ್ತಿನಮನೆ, ವಿವೇಕಾನಂದ ತಾರಾಲಯ, ಬೀಚ್ ಸರ್ಫಿಂಗ್

ದಾವಣಗೆರೆ-ಸಂತ ಸೇವಾಲಾಲ ಹುಟ್ಟೂರು ಮತ್ತು ಬಂಜಾರ ಸಂಪ್ರದಾಯ

ಧಾರವಾಡ-ಧಾರವಾಡ ಪೇಡಾ, ಧಾರವಾಡಿ ಎಮ್ಮೆ ನಮ್ಮ ಹೆಮ್ಮೆ ಟ್ಯಾಬ್ಲೋ

ಗದಗ ಜಿಲ್ಲೆ-ಸಬರಮತಿ ಆಶ್ರಮ ಸ್ತಬ್ಧಚಿತ್ರ ಮೆರವಣಿಗೆ

ಹಾಸನ- ಹಾಸನಾಂಬ ದೇವಾಲಯ, ಹಲ್ಮಡಿ ಈಶ್ವರ ದೇವಸ್ಥಾನ ಟ್ಯಾಬ್ಲೋ

ಹಾವೇರಿ-ಶಂಕನಾದ ಮೊಳಗಿಸುತ್ತಿರುವ ಕನಕದಾಸರು & ಗದ್ದಿಗೆ ಕಾಗಿನೆಲೆ

ಕಲಬುರಗಿ-ರಾಜವಂಶಸ್ಥರ ಕೋಟೆ, ಚಿಂಚೋಳಿ ಅರಣ್ಯ ಪ್ರದೇಶ ವನ್ಯಜೀವಿ ಧಾಮ ಬುದ್ಧನ ಸ್ತೂಪ, ತೊಗರಿ ಕಣಜ, ಸಿಮೆಂಟ್‌ ಕಾರ್ಖಾನೆ

ಕೊಡಗು ಜಿಲ್ಲಾ ಪಂಚಾಯಿತಿ-ಕೊಡಗಿನ ಪ್ರೇಕ್ಷಣೀಯ ಸ್ಥಳ ಸ್ತಬ್ಧಚಿತ್ರ

ಕೋಲಾರ-ನರೇಗಾ ಯೋಜನೆಯಡಿ ವೀರಗಲ್ಲುಗಳ ಉತ್ಖನನ ಮತ್ತು ಮರುಸ್ಥಾಪನೆ

ಕೊಪ್ಪಳ-ಕಿನ್ನಾಳ ಕಲೆ ಹಾಗೂ ಕೈಮಗ್ಗ ಸ್ತಬ್ಧಚಿತ್ರ

ಮಂಡ್ಯ-ಸಾಂಪ್ರದಾಯಿಕ ಉದ್ಯಮ ಆಲೆಮನೆ ಸ್ತಬ್ಧಚಿತ್ರ

ಮೈಸೂರು-ನಾಲ್ವಡಿ ಕೃಷ್ಣರಾಜ ಒಡೆಯರ್​ ಕೊಡುಗೆಗಳ ಸ್ತಬ್ಧಚಿತ್ರ

ರಾಯಚೂರು-ನವರಂಗ ದರ್ವಾಜ ಹಾಗೂ ಆರ್​ಟಿಪಿಎಸ್​ ಟ್ಯಾಬ್ಲೋ

ರಾಮನಗರ-ಚನ್ನಪಟ್ಟಣದ ಚೆಂದದ ಗೊಂಬೆಗಳು ಇತ್ಯಾದಿ ಕಲೆಗಳು

ಶಿವಮೊಗ್ಗ-ಕುವೆಂಪು ಪ್ರತಿಮೆ, ಕುಪ್ಪಳ್ಳಿ, ಗುಡವಿ ಪಕ್ಷಿಧಾಮ, ನಗರ ಕೋಟೆ, ಹುಲಿ ಸಿಂಹಧಾಮ, ಶಿವಪ್ಪ ನಾಯಕ ಪ್ರತಿಮೆ ಟ್ಯಾಬ್ಲೋ

ತುಮಕೂರು-ಮೂಡಲಪಾಯ ಯಕ್ಷಗಾನ, ತವರು ಸ್ತಬ್ದಚಿತ್ರ

ಉಡುಪಿ-ತ್ಯಾಜ್ಯ ಮುಕ್ತ ಮತ್ಸ್ಯಸ್ನೇಹಿ ಸಮುದ್ರ ಸ್ತಬ್ದಚಿತ್ರ

ಉತ್ತರ ಕನ್ನಡ- ಶರಾವತಿ ಮಡಿಲಲ್ಲಿ ವನ್ಯಜೀವಿ ಹಾಗೂ ಸಿಂಹದ ಬಾಲದ ಸಂಗಳಿಕ ಸಂರಕ್ಷಣೆ

ವಿಜಯಪುರ-ಜ್ಞಾನ ಯೋಗಾಶ್ರಮದ ಪೂಜ್ಯಶ್ರೀ ಸಿದ್ದೇಶ್ವರ ಸ್ವಾಮೀಜಿ

ವಿಜಯನಗರ- ವಿಠಲ ದೇವಸ್ಥಾನ ಸ್ತಬ್ದಚಿತ್ರ

ಯಾದಗಿರಿ-ವೇಣುಗೋಪಾಲಸ್ವಾಮಿ ದೇವಸ್ಥಾನ ಸ್ತಬ್ದಚಿತ್ರ

ಸ್ತಬ್ದಚಿತ್ರ ಉಪಸಮಿತಿ- ಅರಮನೆ ವಾದ್ಯಗೋಷ್ಠಿ ಸ್ತಬ್ದಚಿತ್ರ

ಸ್ತಬ್ದಚಿತ್ರ ಉಪಸಮಿತಿ-ಹೊಯ್ಸಳ ದೇವಸ್ಥಾನ, ಬೇಲೂರು ಹಳೇಬೀಡು ಸೋಮನಾಥಪುರ ದೇಗುಲ

ಸಮಾಜಕಲ್ಯಾಣ ಇಲಾಖೆ-ಸಂವಿಧಾನ ಪೀಠಿಕೆ, ಇಲಾಖೆ ಯೋಜನೆಗಳು

ವಾರ್ತಾ ಮತ್ತು ಪ್ರಚಾರ ಇಲಾಖೆ- ಸರ್ಕಾರದ ಗ್ಯಾರಂಟಿ ಯೋಜನೆಗಳು ಟ್ಯಾಬ್ಲೋ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ-ಗೃಹಲಕ್ಷ್ಮೀ ಯೋಜನೆ&ಇತರೆ ಯೋಜನೆಗಳು

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ-ವಾಲ್ಮಿಕಿ ಪುತ್ಥಳಿ& ಇಲಾಖೆಯ ಯೋಜನೆ

ಆಹಾರ ಇಲಾಖೆ-ಹಸಿವಿನಿಂದ ಯಾರೂ ಬಳಲಬಾರದು ಅದಕ್ಕಾಗಿ ಅನ್ನಭಾಗ್ಯ

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ-ಶೌರ್ಯ-ನ್ಯಾಯ-ರಕ್ಷೆ ಸ್ತಬ್ದಚಿತ್ರ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ-ಅಂಗಾಂಗ ದಾನ, STEMI, ಆಶಾಕಿರಣ

ಸಹಕಾರಿ ಹಾಲು ಉತ್ಪಾದಕರ ಮಹಲಾ ಮಂಡಳಿ ನಿಯಮಿತ-ಕ್ಷೀರಭಾಗ್ಯ ಯೋಜನೆ

ಚೆಸ್ಕಾಂ-ಗೃಹಜ್ಯೋತಿ, ಕೃಷಿ ಸೋಲಾರ ಸೆಟ್​, ಗ್ರಾಹಕರ ಸಲಹಾ ಸಮಿತಿ

ವೈದ್ಯಕೀಯ ಕಾಲೇಜು&ಸಂಶೋಧನಾ ಸಂಸ್ಥೆ-ಮೈಸೂರು ವೈದ್ಯಕೀಯ ಮಹಾವಿದ್ಯಾಲಯ

ಪ್ರವಾಸೋದ್ಯಮ ಇಲಾಖೆ-ಲಕ್ಕುಂಡಿ ಬ್ರಹ್ಮ ದೇವಾಲಯ

ಕಾವೇರಿ ನೀರಾವರಿ ನಿಗಮ-ಸಹಭಾಗಿತ್ವದ ನೀರಾವರಿ ನಿರ್ವಹಣಾ ಪದ್ಧತಿ

ವಾಕ್​ ಶ್ರವಣ ಸಂಸ್ಥೆ-ವಾಕ್ ಶ್ರವಣ ದೋಷದಿಂದ ಉತ್ತಮ ಜೀವನದೆಡೆಗೆ ಆಯುಷ್​ನ ಕೊಡುಗೆ

ಜಗಜೀವನ ರಾಮ್ ಚರ್ಮ ಕೈಗಾರಿಕ ಅಭಿವೃದ್ಧಿ ನಿಗಮ-ಲಿಡ್​ಕರ್ ಅಪ್ಪಟ ಚರ್ಮ ಉತ್ಪನ್ನಗಳ ಆಗರ ಮತ್ತು ಚರ್ಮ ಕುಶಲಕರ್ಮಿಗಳ ಅಭಿವೃದ್ಧಿ ಆಶಾಕಿರಣ

ಸಮಾಜ ಕಲ್ಯಾಣ ಇಲಾಖೆ-ಭಾರತೀಯ ಸಂವಿಧಾನ ಮತ್ತು ಡಾ.ಬಿ.ಆರ್.ಅಂಬೇಡ್ಕರ್,

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ- ಸಂವಿಧಾನ ಪೀಠಿಕೆ ಓದು ಕಡ್ಡಾಯ ಟ್ಯಾಬ್ಲೋ

RELATED ARTICLES
- Advertisment -
Google search engine

Most Popular