Monday, April 21, 2025
Google search engine

Homeರಾಜ್ಯಯತ್ನಾಳ್ ವಿರುದ್ಧ 5 ಕೋಟಿ ರೂ. ಮಾನನಷ್ಟ : ಎಚ್ಚರಿಕೆ ನೀಡಿದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ

ಯತ್ನಾಳ್ ವಿರುದ್ಧ 5 ಕೋಟಿ ರೂ. ಮಾನನಷ್ಟ : ಎಚ್ಚರಿಕೆ ನೀಡಿದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ

ಕಲಬುರಗಿ : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ೫ ಕೋಟಿ ರೂ. ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಿಸುತ್ತೇನೆ ಎಂದು ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಎಚ್ಚರಿಕೆ ನೀಡಿದ್ದಾರೆ.

ನಾನು ವಕ್ಫ್ ಆಸ್ತಿ ಕಬಳಿಸಿದ್ದೇನೆ ಎಂದು ಯತ್ನಾಳ್ ಆರೋಪಿಸಿದ್ದಾರೆ, ಅವರು ನನಗೆ ಬೇಷರತ್ತಾಗಿ ಕ್ಷಮೆ ಕೇಳಬೇಕು ಎಂದು ಇಬ್ರಾಹಿಂ ಆಗ್ರಹಿಸಿದ್ದಾರೆ.
ನಾನು ಎಲ್ಲಿ ಎಷ್ಟು ವಕ್ಫ್ ಬೋರ್ಡ್ ಆಸ್ತಿ ತಗೆದುಕೊಂಡಿದ್ದೇನೆ ಎಂದು ಹೇಳಬೇಕು. ಇಲ್ಲ ಅಂದರೆ ಕೂಡಲೇ ಬೇಷರತ್ತಾಗಿ ನನಗೆ ಕ್ಷಮೆ ಕೇಳಬೇಕು. ನಾನು ಇದುವರೆಗೆ ದಾನ ಕೊಟ್ಟಿದ್ದೇನೆಯೇ ಹೊರತು, ದಾನ ಪಡೆದುಕೊಂಡಿಲ್ಲ. ಒಂದು ವೇಳೆ ಕ್ಷಮೆ ಕೊರದಿದ್ದರೆ ಮಾನನಷ್ಟ ಮೊಕದ್ದಮೆ ಹಾಕುವೆ” ಎಂದು ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ವಕ್ಫ್ ಬೋರ್ಡ್ ವಿಚಾರದಲ್ಲಿ ಈ ಸರಕಾರ ಬೇಡದೇ ಇರುವ ವಿವಾದ ಮಾಡಿಕೊಂಡಿದೆ. ವಕ್ಫ್ ಬೋರ್ಡ್ ಅದಾಲತ್ ಒಂದು ರೂಟೀನ್ ಪ್ರೊಸೆಸ್. ಆದರೆ ಇದನ್ನು ಈ ಸರಕಾರ ತಿಪ್ಪೆ ಕಸ ಮೈ ಮೇಲೆ ಎಳೆದುಕೊಂಡಂತೆ ಮಾಡಿಕೊಂಡಿದೆ. ಈ ಹಿಂದೆ ಸಿಎಂ ಬಸವರಾಜ ಬೊಮ್ಮಾಯಿ ಕಾಲದಲ್ಲೂ ೨೪೦ ನೋಟಿಸ್ ಜನರಿಗೆ ಕೊಡಲಾಗಿತ್ತು. ಈಗ ಸರಕಾರ ಎಲ್ಲಾ ನೋಟಿಸ್ ರದ್ದು ಮಾಡುವ ಮೂಲಕ ಸ್ವತಃ ಗೊಂದಲದಲ್ಲಿದೆ ಎಂದರು.

RELATED ARTICLES
- Advertisment -
Google search engine

Most Popular