ಹುಣಸೂರು: ನಗರದ ಕಲ್ಕುಣಿಕೆಯ ಕೆ.ಆರ್.ನಗರದ ಮುಖ್ಯರಸ್ತೆಯಲ್ಲಿರುವ ಶ್ರಿ ಶನೈಶ್ವರ ಸ್ವಾಮಿ ದೇವ ಸನ್ನಿಧಿಯಲ್ಲಿ ಶಿವ, ವಿನಾಯಕ, ದುರ್ಗಾಪರಮೇಶ್ವರಿ, ಹಾಗೂ ನಾಗದೇವರಿಗೆ 50 ಕೇಜಿ ನಂದಿನಿ ಬೆಣ್ಣೆಯಿಂದ ಅಲಾಂಕಾರ ಮಾಡಲಾಗಿತ್ತು.
ಕಳೆದ ಮೂರು ವಾರವು ಇದೇ ರೀತಿ ಅಲಾಂಕಾರ ಗೊಂಡು ಶ್ರೀ ಶನೈಶ್ಚರ ಭಕ್ತಾಧಿಗಳ ಭಕ್ತಿಗೆ ಪಾತ್ರರಾಗಿದ್ದಾರೆ. ಮುಂದಿನ ಕೊನೆಯ ಶ್ರಾವಣ ಮಾಸವಾದ ಕಾರಣ. ಬೆಳಿಗ್ಗೆಯಿಂದ ಸಂಜೆಯವರೆಗೆ ಅಭಿಷೇಕ, ಆರತಿ, ಪೂಜೆ, ಅನ್ನದಾನದ ಪ್ರಸಾದ ಬಂದ ಭಕ್ತರಿಗೆ ವಿನಿಯೋಗವಿರುತ್ತದೆ.
ಐದುವಾರವೂ ಶ್ರೀ ಶನೈಶ್ಚರ ಭಕ್ತರು ತಾವೇ ಖುದ್ದು ನಿಂತು. ಶನಿಕತೆ, ಸೂರ್ಯಪುತ್ರನ ನೈಜಕತೆಯ ಬಗ್ಗೆ ತಿಳಿಸಿದರು. ಬೆಳಿಗ್ಗೆಯಿಂದ ಎಳ್ಳುಡಿ,ಸಂಜೆಯವರೆಗೂ ಪುಳಿಯೊಗರೆ, ಮೊಸರನ್ನ, ರೈಸ್ ಬಾತು ಪ್ರಸಾದ ನೀಡುವ ಮೂಲಕ ದೇವರ ಕೃಪೆಗೆ ಕಾರಣರಾದ ಶನಿದೇವರ ಭಕ್ತ ದಾನಿಗಳಿಗೆ. ಟ್ರಸ್ಟನ ಅಧ್ಯಕ್ಷೆ ಕಲಾವತಿ ಬಸಪ್ಪ ಧನ್ಯವಾದ ತಿಳಿಸಿದ್ದಾರೆ.