ಕೆ.ಆರ್.ಪೇಟೆ:ತಾಲ್ಲೋಕಿನ ಸಾರಂಗಿ ಪ್ರೌಢಶಾಲೆಯಲ್ಲಿ ನಾಡಪ್ರಭು ಕೆಂಪೇಗೌಡರ 514ನೇ ಜಯಂತಿಯನ್ನು ಆಚರಿಸಲಾಯಿತು
ಶಾಲಾ ಮುಖ್ಯ ಶಿಕ್ಷಕರಾದ ಇಂದ್ರಮ್ಮ ಮಾತನಾಡಿ ಕೆಂಪೇಗೌಡರ
ಆಡಳಿತದ ಫಲವಾಗಿ ವಿಶ್ವಮಾನ್ಯ ಬೆಂಗಳೂರು ಮಹಾನಗರ ನಿರ್ಮಾಣವಾಗಿದೆ. ಮಾನವನ ವೃತ್ತಿ ಕಸುಬುಗಳಿಗೆ ಅನುಸಾರವಾಗಿ ಒಂದೊಂದು ಪೇಟೆಗಳನ್ನು ನಿರ್ಮಿಸಿರುವ ಕೆಂಪೇಗೌಡರು ಸರ್ವ ಜನಾಂಗದ ಶಾಂತಿಯ ತೋಟದ ಹೊಂಗನಸಿನ ಆಧಾರದ ಮೇಲೆ ಬೆಂಗಳೂರು ಮಹಾನಗರವನ್ನು ನಿರ್ಮಿಸಿದ್ದಲ್ಲದೆ ದಕ್ಷ ಪ್ರಾಮಾಣಿಕ ಆಡಳಿತವನ್ನು ನಾಡಿನ ಜನತೆಗೆ ನೀಡಿದ್ದಾರೆ ಎಂದು ಅಭಿಪ್ರಾಯಪಟ್ಟರು
ಸಹ ಶಿಕ್ಷಕರಾದ ವೈಕೆ ಸುಧಾಮಣಿ ಮಾತನಾಡಿ ವಿಜಯನಗರದ ಅರಸರ ಸಾಮಂತರಾಗಿದ್ದ ಕೆಂಪೇಗೌಡರು ನೀಡಿದ ಜನಪರವಾದ ಆಡಳಿತ ಹಾಗೂ ಬದ್ಧತೆಯಿಂದಾಗಿ ವಿಜಯನಗರದ ಚಕ್ರವರ್ತಿ ಕೃಷ್ಣದೇವರಾಯರ ವಿಶ್ವಾಸಕ್ಕೆ ಭಾಜನರಾಗಿದ್ದರು ನಾಲ್ವಡಿ ಕೃಷ್ಣರಾಜ ಒಡೆಯರ್ ಬಹದ್ದೂರ್ ಅವರು ಜನಪರವಾದ ಆಡಳಿತವನ್ನು ನೀಡಲು ನಾಡಪ್ರಭುಗಳಾದ ಕೆಂಪೇಗೌಡರು ಪ್ರೇರಕ ಶಕ್ತಿಯಾಗಿದ್ದರು ತಿಳಿಸಿದರು ನಂತರ ಮಾತಾನಾಡಿದ ಸಹಶಿಕ್ಷಕಿ ಎನ್ ಪುಷ್ಪಲತಾರವರು ಮಹಿಳಾ ಸಮಾನತೆ ಶಿಕ್ಷಣ ಹಾಗೂ ಗುಡಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸಿದ್ದ ಮೈಸೂರು ಅರಸರು ಧರ್ಮಪ್ರಭುಗಳಾದ ಕೆಂಪೇಗೌಡರ ಆಡಳಿತವನ್ನು ಅನುಸರಿಸಿ ಕಾರ್ಯನಿರ್ವಹಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು.ಸರ್ವ ಜನಾಂಗಗಳಿಗೂ ಸಾಮಾಜಿಕ ನ್ಯಾಯವನ್ನು ನೀಡಿ ಅವರ ವೃತ್ತಿ ಕಸುಬುಗಳಿಗೆ ಅನುಸಾರವಾಗಿ ಪೇಟೆಗಳನ್ನು ನಿರ್ಮಿಸಿ ಕೊಡುವ ಮೂಲಕ ಜನಸಾಮಾನ್ಯರ ದೊರೆಗಳಾಗಿ ಹೊರಹೊಮ್ಮಿದ್ದ ಕೆಂಪೇಗೌಡರು ಸರ್ವ ಶ್ರೇಷ್ಠ ದಾರ್ಶನಿಕರಾಗಿದ್ದರಲ್ಲದೆ ಅಪ್ರತಿಮ ಆಡಳಿತಗಾರರಾಗಿದ್ದರು ಎಂದು ಕೆಂಪೇಗೌಡರನ್ನು ಗುಣಗಾನ ಮಾಡಿದರು ಸಹ
ಶಿಕ್ಷಕರಾದ ಚಂದ್ರುರವರು ಮಾತಾನಾಡಿ ವಿಜಯನಗರದ ಅರಸರ ಮೇಲೆ ಅಪಾರವಾದ ಪ್ರೀತಿ ಮತ್ತು ನಿಷ್ಠೆಯನ್ನು ಹೊಂದಿದ್ದ ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯದ ಉಳಿವಿಗಾಗಿ ಯುದ್ಧಕ್ಕೆ ಶತ್ರುಗಳ ಸಂಹಾರಕ್ಕೆ ತಮ್ಮ ಪುತ್ರ ಮತ್ತು ಸಹೋದರನನ್ನು ಕಳಿಸಿದ್ದರು ಎಂದು ತಿಳಿಸಿದರು ಸಹ ಶಿಕ್ಷಕರಾದ ಲಕ್ಷ್ಮಿಕಾಂಬಳೆ ಮಾತನಾಡಿ ಧರ್ಮ ಪ್ರಭು ಕೆಂಪೇಗೌಡರ ದೂರದರ್ಶಿತ್ವದ ಆಡಳಿತ,ಸಾಮಾಜಿಕ ಬದ್ಧತೆ ಹಾಗೂ ದಕ್ಷ ಆಡಳಿತವು ಇಂದಿನ ರಾಜಕಾರಣಿಗಳಿಗೆ ಹಾಗೂ ಯುವ ಜನರಿಗೆ ಮಾದರಿಯಾಗಿದೆ ಎಂದು ತಿಳಿಸಿದರು ವೃತ್ತಿಶಿಕ್ಷಣ ಶಿಕ್ಷಕರಾದ ಸುರೇಶ್ ಮಾತನಾಡಿ
ವಿಶಿಷ್ಟವಾದ ಬೆಂಗಳೂರು ಮಹಾನಗರದ ನಿರ್ಮಾತೃಗಳಾದ ಧರ್ಮಪ್ರಭು ಕೆಂಪೇಗೌಡರ ದೂರದೃಷ್ಟಿಯ ಆಡಳಿತದ ಫಲವಾಗಿ ಶ್ರೀಸಾಮಾನ್ಯರು ಹಾಗೂ ರೈತರಿಗೆ ಬೇಕಾದ ಕೆರೆಕಟ್ಟೆಗಳು, ದೇವಾಲಯಗಳು ಮಾರುಕಟ್ಟೆಗಳು ಹಾಗೂ ಕೋಟೆ ಕೊತ್ತಲಗಳನ್ನು ನಿರ್ಮಿಸಿ ವಿಜಯನಗರದ ಅರಸರ ಸಾಮಂತ ರಾಜರಾಗಿ ಕೆಂಪೇಗೌಡರು ಆಡಳಿತ ನಡೆಸಿದರೂ ಸ್ವತಂತ್ರ ರಾಜರಾಗಿ ಜನಪರವಾದ ಆಡಳಿತವನ್ನು ನೀಡಿ ಇತಿಹಾಸದ ಪುಟಗಳಲ್ಲಿ ದಾಖಲಾಗಿದ್ದಾರೆ ದಕ್ಷ ಆಡಳಿತವನ್ನು ಸ್ಮರಣೆ ಮಾಡಿದರು.ಸಂದರ್ಭದಲ್ಲಿ ಸಾರಂಗಿ ಗ್ರಾಮ ಪಂಚಾಯತಿ ಸದಸ್ಯರಾದ ಎನ್ ರಮೇಶ್, ಪ್ರಥಮ ದರ್ಜೆ ಸಹಾಯಕರಾದ ಕಾರ್ತಿಕ್, ರಮ್ಯ,ಸೌಮ್ಯ,ವಿಧ್ಯಾರ್ಥಿಗಳು ಅಡುಗೆ ಸಿಬ್ಬಂದಿ ವರ್ಗದವರು ಹಾಜರಿದ್ದರು