ವರದಿ: ಎಡತೊರೆ ಮಹೇಶ್
ಎಚ್ ಡಿ ಕೋಟೆ : ತಾಲೂಕಿನ ಮಿನಿ ವಿಧಾನಸೌಧದಲ್ಲಿ ನಾಡಪ್ರಭು ಕೆಂಪೇಗೌಡರ 515 ನೇ ಜಯಂತೋತ್ಸವವನ್ನು ಸರಳವಾಗಿ ಆಚರಣೆ ಮಾಡಲಾಯಿತು. ಮುಖ್ಯ ಭಾಷಣಕಾರ ಶಿಕ್ಷಕ ಆನಂದ್ ಮಾತನಾಡಿ, ನಾಡಪ್ರಭು ಕೆಂಪೇಗೌಡ ಕೆಂಪನಂಜೇಗೌಡ ಹಾಗೂ ಲಿಂಗಾಂಬೆ ದಂಪತಿಗಳಿಗೆ 1510ರಲ್ಲಿ ಮೊದಲನೆಯ ಮಗು . ಕುಲದೇವತೆಯಾದ ಕೆಂಪಮ್ಮ ಹಾಗೂ ಭೈರವರ ಅನುಗ್ರಹದಿಂದ ಜನಿಸಿದ ಕಾರಣ ಕೆಂಪನಂಜೇಗೌಡ ದಂಪತಿಗಳು ಈ ಮಗುವಿಗೆ ಕೆಂಪ, ಕೆಂಪಯ್ಯ, ಕೆಂಪಣ್ಣ ಎಂಬ ಹೆಸರಿನಿಂದ ಕರೆಯುವುದು ವಾಡಿಕೆಯಾಗಿತ್ತು. ಈ ಬಾಲಕನನ್ನು ನಾಡಿನ ಪ್ರಜೆಗಳು ಗೌರವಾದರದಿಂದ ಚಿಕ್ಕರಾಯ, ಕೆಂಪರಾಯ ಎಂದು ಸಂಬೋಧಿಸುತ್ತಿದ್ದರು. 1509 ರಲ್ಲಿ ವಿಜಯನಗರದ ಸಿಂಹಾಸನವನ್ನೇರಿದ ಕೃಷ್ಣದೇವರಾಯರು ಹಲವು ವಿಧಗಳಲ್ಲಿ ತಮ್ಮ ಸೈನ್ಯದ ಅಸಾಧಾರಣ ಸಾಮರ್ಥ್ಯ, ವಿಜಯನಗರ ಸಾಮ್ರಾಜ್ಯದ ವೈಭೋಗವನ್ನು ಅನಾವರಣ ಮಾಡಲೆಂದು 1515ರಲ್ಲಿ ಬೆಂಗಳೂರು ನಗರವನ್ನು ಕಟ್ಟಲು ಸರಿಸುಮಾರು ಐದಾರು ಶತಮಾನದ ಹಿಂದೆಯೇ ಅಡಿಪಾಯ ಹಾಕಿದ ದಕ್ಷ ಆಡಳಿತಗಾರ, ನಾಡಪ್ರಭು ಕೆಂಪೇಗೌಡರು ಎಂದು ತಿಳಿಸಿದರು.

ತಾಲೂಕು ದಂಡಾಧಿಕಾರಿ ಶ್ರೀನಿವಾಸ್ ಮಾತನಾಡಿ ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯದ ರಾಜ್ಯವಾಗಿದ್ದ ಯಲಹಂಕ ಭಾಗದ ಪಾಳೇಗಾರರಾಗಿದ್ದರು. ಹಂಪಿಯ ಗತ ವೈಭವವನ್ನು ಕಂಡು ಬೆರಗಾಗಿದ್ದ ಕೆಂಪೇಗೌಡರ ದೂರದೃಷ್ಟಿಯಲ್ಲಿ ಬೆಂಗಳೂರನ್ನು ನಿರ್ಮಿಸಲಾಗಿದೆ. ಇದು ಕರ್ನಾಟಕದ ರಾಜಧಾನಿಯಾಗಿದೆ. ಭಾರತದ ಪ್ರಮುಖ ನಗರಗಳಲ್ಲಿ ಬೆಂಗಳೂರು ಒಂದಾಗಿದೆ ಎಂದು ತಿಳಿಸಿದರು.
ಒಕ್ಕಲಿಗ ಸಮಾಜದ ತಾಲೂಕು ಅಧ್ಯಕ್ಷ ಡಿ, ಸುರೇಂದ್ರಗೌಡ ಮಾತನಾಡಿ, ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಇಂದು ಸರಳವಾಗಿ ಆಚರಣೆ ಮಾಡಿದ್ದೇವೆ ಮುಂದಿನ ದಿನದಲ್ಲಿ ದಿನಾಂಕ ನಿಗದಿಪಡಿಸಿ ರಾಜ್ಯ ಮತ್ತು ಕೇಂದ್ರ ಹಾಗೂ ಜಿಲ್ಲೆನಾಯಕರನ್ನು ಸಂಪರ್ಕ ಮಾಡಿ ಅದ್ದೂರಿ ಕಾರ್ಯಕ್ರಮವನ್ನು ಮುಂದಿನ ದಿನದಲ್ಲಿ ಮಾಡುತ್ತೇವೆ ಎಂದು ತಿಳಿಸಿದ್ದರು.

ಕಾರ್ಯಕ್ರಮದಲ್ಲಿ ಒಕ್ಕಲಿಗ ಸಮಾಜದ ಗೌರವಾಧ್ಯಕ್ಷ ಕೃಷ್ಣೆಗೌಡ, ಸಣ್ಣರಾಮಪ್ಪ,ಇ, ಒ, ಧರಣೇಶ್, ಟಿ ರವಿಕುಮಾರ್, ಹಿರಿಯ ಮುಖಂಡ ನರಸಿಂಹಗೌಡ, ಹಿರಹಳ್ಳಿ ಸೋಮೇಶ್, ಜಿಯರ ಇಂಜಿನಿಯರ್ ನಾಗರಾಜ್ ನಾಗನಾಯಕ, ಪ್ರಕಾಶ್, ಡ್ರಿಪ್ ಗುರುಸ್ವಾಮಿ, ಜೀವಿಕ ಬಸವರಾಜ್, ಚೆಲುವ, ರೈತ ಮುಖಂಡ ಓಕೆ ಮಹೇಂದರ್, ನವೀನಗೌಡ, ಹೈರಿಗೆ ಉಮೇಶ್,ಸತೀಶ್, ಡಿ, ಸಿ, ಸ್ವಾಮಿ, ನಾಗರಾಜ್, ಮಟಕೆರೆ ರಾಜೇಶ್, ಮೀನ್ ರಾಜಣ್ಣ, ಸಾಗರೆ ಮಹೇಂದ್ರ, ರಾಮಸ್ವಾಮಿ, ಶ್ರೀಧರ್, ವಕೀಲ ರವಿಕುಮಾರ್, ಗುಂಡತ್ತೂರು ಮಹೇಶ್, ಅಂಗಡಿ ಸತೀಶ, ವಕೀಲ ರವಿ,ಪ್ರಕಾಶ್, ಶಿವಯ್ಯ, ಎಡತೊರೆ ಕುಮಾರ್, ಮತ್ತು ಇನ್ನು ಅನೇಕ ಮುಖಂಡರು ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಮುಖಂಡರು ಇದ್ದರು.