Sunday, April 20, 2025
Google search engine

HomeUncategorizedರಾಷ್ಟ್ರೀಯಮಣಿಪುರದಲ್ಲಿ 5,457 ಅಕ್ರಮ ವಲಸಿಗರು ಪತ್ತೆ: ಗಡಿಪಾರಿಗೆ ಕ್ರಮ- ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್

ಮಣಿಪುರದಲ್ಲಿ 5,457 ಅಕ್ರಮ ವಲಸಿಗರು ಪತ್ತೆ: ಗಡಿಪಾರಿಗೆ ಕ್ರಮ- ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್

ಇಂಫಾಲ್(ಮಣಿಪುರ): ಮಣಿಪುರದ ಕಾಮ್‌ ಜೋಂಗ್ ಜಿಲ್ಲೆಯಲ್ಲಿ 5,457 ಅಕ್ರಮ ವಲಸಿಗರನ್ನು ಸರ್ಕಾರ ಗುರುತಿಸಿದ್ದು, ಅವರನ್ನು ಗಡಿಪಾರು ಮಾಡಲು ಬೇಕಾದ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಹೇಳಿದ್ಧಾರೆ.

5,173 ಮಂದಿಯ ಬಯೋಮೆಟ್ರಿಕ್ ಡೇಟಾವನ್ನು ರದ್ದು ಮಾಡಲಾಗಿದೆ ಎಂದು ಅವರು ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಫೈಕೋವ್, ಹುಯಾಮಿ, ಥಾನಾದ ನಿರಾಶ್ರಿತ ಶಿಬಿರಗಳಲ್ಲಿ ತಂಗಿದ್ದ ಅವರ ಬಯೊಮೆಟ್ರಿಕ್ ಡೇಟಾವನ್ನು ಈ ಹಿಂದೆ ದಾಖಲು ಮಾಡಲಾಗಿತ್ತು  ಎಂದು ಅಧಿಕಾರಿ ತಿಳಿಸಿದ್ದಾರೆ.

ಎಲ್ಲ ಅಕ್ರಮ ವಲಸಿಗರಿಗೆ ನಮ್ಮ ಸರ್ಕಾರವು ಮಾನವೀಯ ನೆರವನ್ನು ನೀಡುತ್ತಿದೆ. ಈ ವಿಚಾರವನ್ನು ನಾವು ಅತ್ಯಂತ ಸೂಕ್ಷ್ಮವಾಗಿ ನಿರ್ವಹಿಸುತ್ತಿದ್ದೇವೆ ಎಂದು ಸಿಎಂ ಹೇಳಿದ್ದಾರೆ.

ಈ ತಿಂಗಳ ಆರಂಭದಲ್ಲಿ  ಮ್ಯಾನ್ಮಾರ್ ಗಡಿ ದಾಟಿ ಮಣಿಪುರಕ್ಕೆ ಬಂದಿದ್ದ ಕನಿಷ್ಠ 38 ಅಕ್ರಮ ವಲಸಿಗರನ್ನು ತೆಂಗ್‌ನೌಪಾಲ್ ಜಿಲ್ಲೆ ಮೊರೆಹ್ ಪಟ್ಟಣದಿಂದ ಗಡಿಪಾರು ಮಾಡಲಾಗಿದೆ ಎಂದೂ ಸಿಂಗ್ ತಿಳಿಸಿದ್ದಾರೆ.

ಈವರೆಗೆ, ಮೊದಲ ಹಂತದಲ್ಲಿ 77 ಅಕ್ರಮ ವಲಸಿಗರನ್ನು ಗಡಿಪಾರು ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

RELATED ARTICLES
- Advertisment -
Google search engine

Most Popular