ಪೇಜಾವರ ಶ್ರೀ ವಿಶ್ವೇಶ್ವರ ತೀರ್ಥ ಶ್ರೀಪಾದರ 5ನೇ ವರ್ಷದ ಪುಣ್ಯ ಸಂಸ್ಮರಣೆ
ಮೈಸೂರು: ನಗರದ ಕೃಷ್ಣಮೂರ್ತಿ ಪುರಂ ನಲ್ಲಿರುವ ಶಾರದಾ ನೆಲೆಯಲ್ಲಿ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಹಾಗೂ ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗ ವತಿಯಿಂದ ಯತಿ ಶ್ರೇಷ್ಠ ಬೃಂದಾವನಸ್ಥ ಪೇಜಾವರ ಶ್ರೀ ವಿಶ್ವೇಶ್ವರ ತೀರ್ಥ ಶ್ರೀಪಾದರ 5ನೇ ವರ್ಷದ ಸಂಸ್ಮರಣೆ ಅಂಗವಾಗಿ ಹೆಣ್ಣು ಮಕ್ಕಳಿಗೆ ಹಣ್ಣು ಹಂಪಲು ಹಾಗೂ ಓದುವ ಸಾಮಗ್ರಿಗಳನ್ನು ವಿತರಿಸುವ ಮೂಲಕ ಶ್ರೀಗಳನ್ನು ಸ್ಮರಿಸಲಾಯಿತು.
ಇದೇ ಸಂದರ್ಭದಲ್ಲಿ ಹಿರಿಯ ಸಮಾಜ ಸೇವಕರಾದ ಡಾ. ಕೆ. ರಘುರಾಮ್ ವಾಜಪೇಯಿ ಮಾತನಾಡಿ
ಪೇಜಾವರ ಸ್ವಾಮೀಜಿ ಎಲ್ಲರ ಪ್ರೀತಿ ಪಡೆದಿದ್ದರು. ಪೇಜಾವರ ಸ್ವಾಮೀಜಿ ಯಾವುದೇ ಜಾತಿಗೆ ಸೀಮಿತ ಸ್ವಾಮೀಜಿ ಎನಿಸದೇ ಎಲ್ಲ ವರ್ಗದ ಜನರ ಪ್ರೀತಿಗೆ ಪಾತ್ರರಾಗಿದ್ದವರು. ಯತಿಗಳು ಸಾಮರಸ್ಯ ನಡಿಗೆ ಮೂಲಕ ಸಮಾಜದ ಒಗ್ಗಟ್ಟಿಗೆ ಶ್ರಮಿಸುವ ಕೆಲಸವನ್ನು ಮಾಡುವ ಜತೆಗೆ ಪ್ರಕೃತಿ ಸಂಕಷ್ಟ ಸಂದರ್ಭದಲ್ಲಿ ಅವರ ಸೇವೆಗೆ ಸದಾ ಸಿದ್ಧರಾಗಿ ಪಾದಯಾತ್ರೆ ನಡೆಸಿ ಜನರ ಬದುಕಿಗೆ ಚೈತನ್ಯ ತುಂಬುವ ಕೆಲಸ ಮಾಡುತ್ತಿದ್ದರು. ಯಾವುದೇ ಸಮಸ್ಯೆ ಎದುರಾದರೂ ಅದಕ್ಕೆ ಸೂಕ್ತ ಪರಿಹಾರ ಕೊಡುವ ಶಕ್ತಿ ಹೊಂದಿದ್ದರು ಎಂದು ಬಣ್ಣಿಸಿದರು.
ಈ ಸಂದರ್ಭದಲ್ಲಿ ಹಿರಿಯ ಸಮಾಜ ಸೇವಕರಾದ ಕೆ.ರಘುರಾಮ ವಾಜಪೇಯಿ, ಮಾಜಿ ನಗರ ಪಾಲಿಕಾ ಸದಸ್ಯರಾದ ಮಾ.ವಿ. ರಾಮ್ ಪ್ರಸಾದ್ ಡಾ: ಬಿ. ಎಸ್. ಪ್ರೇಮ ಕುಮಾರಿ, ಮೈಸೂರು ನಗರ ಜೆ.ಡಿ.ಎಸ್. ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ನಿರೂಪಕ ಅಜಯ್ ಶಾಸ್ತ್ರಿ, ವಕೀಲ ಪಿ ಜೆ ರಾಘವೇಂದ್ರ,ಸುಚಿಂದ್ರ, ಮಿರ್ಲೆ ಪಣೀಶ್, ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್, ನಿಲಯ ಪಾಲಕಿ ರೇವತಿ ,ವೀರಭದ್ರ ಸ್ವಾಮಿ, ಮಹದೇವ್, ಶ್ರೀಧರ್ ,ಮಹೇಶ್, ರಾಜೇಶ್ ಕುಮಾರ್, ನವನೀತ್ ಕುಮಾರ್, ಜಯಮ್ಮ , ಎಸ್ ಪಿ ಅಕ್ಷಯ್ ಪ್ರಿಯಾದರ್ಶನ್, ಹರ್ಷಿತ್ ಎಸ್ ನಾಗೇಶ್ ಇತರರು ಹಾಜರಿದ್ದರು.