Friday, April 11, 2025
Google search engine

Homeವಿದೇಶಜಪಾನ್ ನಲ್ಲಿ 6.6 ತೀವ್ರತೆಯ ಭೂಕಂಪ: ಸುನಾಮಿ ಎಚ್ಚರಿಕೆ

ಜಪಾನ್ ನಲ್ಲಿ 6.6 ತೀವ್ರತೆಯ ಭೂಕಂಪ: ಸುನಾಮಿ ಎಚ್ಚರಿಕೆ

ಜಪಾನ್: ಇಂದು ಬೆಳಗ್ಗೆ 11 ಗಂಟೆಗೆ ಜಪಾನ್ ​ನಲ್ಲಿ 6.6 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಸುನಾಮಿ ಎಚ್ಚರಿಕೆಯನ್ನೂ ನೀಡಲಾಗಿದೆ.

ಹವಾಮಾನ ಸಂಸ್ಥೆಯು ಜಪಾನ್‌ ನ ಇಜು ದ್ವೀಪದಲ್ಲಿ 1 ಮೀಟರ್ ಎತ್ತರದ ಅಲೆಗಳು ಏಳಬಹುದು ಎಂದು ಮುನ್ಸೂಚನೆ ನೀಡಿದೆ.

ಆದರೆ ಪೂರ್ವದಲ್ಲಿ ಚಿಬಾ ಪ್ರಿಫೆಕ್ಚರ್‌ ನಿಂದ ಪಶ್ಚಿಮದ ಕಾಗೋಶಿಮಾ ಪ್ರಿಫೆಕ್ಚರ್‌ ವರೆಗೆ 0.2 ಮೀಟರ್‌ ಗಳಷ್ಟು ಅಲೆಗಳನ್ನು ನಿರೀಕ್ಷಿಸಲಾಗಿದೆ. ಮುನ್ನೆಚ್ಚರಿಕೆಯಾಗಿ ಕರಾವಳಿ ಭಾಗದ ಜನರಿಗೆ ಎತ್ತರದ ಪ್ರದೇಶಗಳಿಗೆ ತೆರಳುವಂತೆ ಸೂಚಿಸಲಾಗಿದೆ.

ಜಪಾನ್ ಹೆಚ್ಚು ಭೂಕಂಪನ ಪೀಡಿತ ಪ್ರದೇಶಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಲಾಗಿದೆ. 2011 ರಲ್ಲಿ ಸಂಭವಿಸಿದ ಭಾರೀ ಭೂಕಂಪದಿಂದ ಉಂಟಾದ ಸುನಾಮಿ ಉತ್ತರ ಜಪಾನ್‌ ನ ಹೆಚ್ಚಿನ ಭಾಗಗಳನ್ನು ನಾಶಪಡಿಸಿತು ಮತ್ತು ಫುಕುಶಿಮಾ ಪರಮಾಣು ಸ್ಥಾವರಕ್ಕೆ ಭಾರಿ ಹಾನಿಯನ್ನುಂಟುಮಾಡಿತ್ತು.

RELATED ARTICLES
- Advertisment -
Google search engine

Most Popular