Friday, April 11, 2025
Google search engine

Homeರಾಜ್ಯಸರ್ಕಾರಿ ಶಾಲೆಗಳಲ್ಲಿ 6ದಿನ ಮೊಟ್ಟೆ ಪೂರೈಕೆ: ಅಜೀಂ ಪ್ರೇಮ್‌ಜಿ ಫೌಂಡೇಷನ್ 1,500 ಕೋಟಿ ನೆರವು

ಸರ್ಕಾರಿ ಶಾಲೆಗಳಲ್ಲಿ 6ದಿನ ಮೊಟ್ಟೆ ಪೂರೈಕೆ: ಅಜೀಂ ಪ್ರೇಮ್‌ಜಿ ಫೌಂಡೇಷನ್ 1,500 ಕೋಟಿ ನೆರವು

ಬೆಂಗಳೂರು: ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳಿಗೆ ವಾರದಲ್ಲಿ ಆರು ದಿನ ಬೇಯಿಸಿದ ಮೊಟ್ಟೆ ಪೂರೈಸಲು ಶಾಲಾ ಶಿಕ್ಷಣ ಇಲಾಖೆಯೊಂದಿಗೆ ಅಜೀಂ ಪ್ರೇಮ್‌ಜೀ ಫೌಂಡೇಷನ್’ ಕೈಜೋಡಿಸಿದೆ. ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಣೆಗಾಗಿ ಒಂದರಿಂದ ಹತ್ತನೇ ತರಗತಿ ಮಕ್ಕಳಿಗೆ ವಾರಕ್ಕೆ ಎರಡು ದಿನ ಮೊಟ್ಟೆ ವಿತರಣೆ ಮಾಡಲಾಗುತ್ತಿದೆ. ಕಳೆದ ಶೈಕ್ಷಣಿಕ ಸಾಲಿನಲ್ಲಿ 38.37 ಲಕ್ಷ ಮಕ್ಕಳು ಮೊಟ್ಟೆಗೆ ಬೇಡಿಕೆ ಸಲ್ಲಿಸಿದ್ದರು.

ಉಳಿದ ಮಕ್ಕಳಿಗೆ ಶೇಂಗಾ ಚಿಕ್ಕಿ, ಬಾಳೆ ಹಣ್ಣು ನೀಡಲಾಯಿತು. ಪ್ರಸಕ್ತ ಶಿಕ್ಷಣ ಪಡೆದ ರಜಾ ದಿನಗಳನ್ನು ಎಲ್ಲಾ ಶಾಲಾ ದಿನದಲ್ಲಿ ಮೊಟ್ಟೆ ವಿತರಿಸಲು ಶಾಲಾ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಈ ಯೋಜನೆಗೆ ಹಣಕಾಸಿನ ನೆರವು ನೀಡಲು ವಿಪ್ರೊ ಸಂಸ್ಥಾಪಕ ಅಜೀಂ ಪ್ರೇಮ್‌ಜಿ ಮುಂದೆ ಬಂದಿದ್ದಾರೆ. ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ನೆರವು ನೀಡುತ್ತಿರುವ ತಮ್ಮ ಅಜೀಂ ಪ್ರೇಮ್‌ಜೀ ಫೌಂಡೇಶನ್ ಮೂಲಕ 1,500 ಕೋಟಿ ದೇಣಿಗೆ ನೀಡುತ್ತಿದ್ದಾರೆ.

ವಾರದಲ್ಲಿ ಎರಡು ದಿನಗಳ ಮೊಟ್ಟೆ ವೆಚ್ಚವನ್ನು ಸರ್ಕಾರ ಹಾಗೂ ನಾಲ್ಕು ದಿನಗಳ ವೆಚ್ಚವನ್ನು ಫೌಂಡೇಶನ್ ಭರಿಸಲಿವೆ. ಪ್ರಸ್ತುತ ಶೈಕ್ಷಣಿಕ ವರ್ಷದ ಜೂನ್ ನಿಂದ ಸುಮಾರು 42.57 ಲಕ್ಷ ಮಕ್ಕಳಿಗೆ ಮೊಟ್ಟೆ ನೀಡಲಾಗುತ್ತಿದೆ. ಪ್ರತಿ ಮಗುವಿಗೆ ವಾರಕ್ಕೆ ಎರಡು ಬಾರಿಯಂತೆ ವರ್ಷಕ್ಕೆ ಸರಾಸರಿ 1000 ಮೊಟ್ಟೆಗಳು ಸಿಗುತ್ತವೆ. ಸರ್ಕಾರದ ನಿರ್ಧಾರ ಜಾರಿಯಾದ ನಂತರ ಪ್ರತಿ ಮಗುವಿಗೂ ವರ್ಷಕ್ಕೆ 300 ಮೊಟ್ಟೆಗಳು ದೊರೆಯಲಿವೆ. ಒಂದು ಮೊಟ್ಟೆಗೆ 6 ನಿಗದಿ ಮಾಡಲಾಗಿದೆ. ಈ ಹಣವನ್ನು ಶಾಲಾ ಶಿಕ್ಷಣ ಇಲಾಖೆ ಆಯಾ ಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಜಂಟಿ ಖಾತೆಗೆ ಹಾಕುತ್ತದೆ.

ಅದರಲ್ಲಿ ಮೊಟ್ಟೆ ಬೇಯಿಸಲು ಇಂಧನ ವೆಚ್ಚ 30 ಪೈಸೆ, ಮೊಟ್ಟೆಯ ಗಟ್ಟಿಪದರ(ವೋಡು) ಸುಲಿದು ಕೊಡುವ ಬಿಸಿಯೂಟ ತಯಾರಕರು ಮತ್ತು ಸಹಾಯಕರಿಗೆ 30 ಪೈಸೆ, ಸಾಗಣೆ ವೆಚ್ಚ 20 ಪೈಸೆ ನೀಡಲಾಗುತ್ತಿದೆ. ಮೊಟ್ಟೆಗೆ ತಗುಲುವ ಒಟ್ಟು ವೆಚ್ಚದಲ್ಲಿ ಇನ್ನು ಮುಂದೆ ಮೂರನೇ ಎರಡು ಭಾಗ ಅಜೀಂ ಪ್ರೇಮ್‌ಜಿ ಫೌಂಡೇಶನ್ ಭರಿಸಲಿದೆ.

ಮೊಟ್ಟೆ ವಿತರಣೆಗೆ ನೆರವು ನೀಡುವ ಕುರಿತು ಸರ್ಕಾರದ ಜೊತೆ ಜುಲೈ ೨೦ರಂದು ಒಪ್ಪಂದ ಮಾಡಿಕೊಳ್ಳಲಾ ಗುತ್ತಿದೆ. ಆಗಸ್ಟ್ ೧ರಿಂದ ಯೋಜನೆ ಜಾರಿಯಾಗಲಿದ್ದು, ಈ ಒಪ್ಪಂದ ಮೂರು ವರ್ಷಗಳವರೆಗೆ ಜಾರಿಯಲ್ಲಿರುತ್ತದೆ’ ಎಂದು ಫೌಂಡೇಷನ್‌ನ ಪ್ರಮುಖರು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular