Friday, April 18, 2025
Google search engine

Homeಅಪರಾಧತುಮಕೂರು ರಸ್ತೆ ಅಪಘಾತದಲ್ಲಿ 6 ಸಾವು: ಸ್ಥಳಕ್ಕೆ ಎಡಿಜಿಪಿ ಅಲೋಕ್​ ಕುಮಾರ್, ಕೇಂದ್ರ ವಲಯ ಐಜಿಪಿ...

ತುಮಕೂರು ರಸ್ತೆ ಅಪಘಾತದಲ್ಲಿ 6 ಸಾವು: ಸ್ಥಳಕ್ಕೆ ಎಡಿಜಿಪಿ ಅಲೋಕ್​ ಕುಮಾರ್, ಕೇಂದ್ರ ವಲಯ ಐಜಿಪಿ ಲಾಬೂರಾಮ್​ ಭೇಟಿ

ತುಮಕೂರು: ಗೌರಿ ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದವರು ಕಾರಿನಲ್ಲಿ ಧವಸ‌ ಧಾನ್ಯ, ಅಕ್ಕಿ, ಶೇಂಗಾ ಬೀಜ ಸೇರಿದಂತೆ ಹಲವು ಸಾಮಗ್ರಿಗಳನ್ನು ತುಂಬಿಕೊಂಡು ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದರು. ಆದರೆ ವಿಧಿ ಬೇರೆಯೇ ಇತ್ತು. ಮಾರ್ಗಮಧ್ಯೆ ಎರಡು ಕಾರುಗಳ ನಡುವೆ ಡಿಕ್ಕಿಯಾಗಿ ಒಟ್ಟು ಆರು ಜನರು ಸಾವನ್ನಪ್ಪಿದ್ದು ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕೆರೆಗಳಪಾಳ್ಯ ಗ್ರಾಮದ ಬಳಿ ಘಟನೆ ನಡೆದಿದ್ದು ಅಪಘಾತ ನಡೆದ ಸ್ಥಳಕ್ಕೆ ಎಡಿಜಿಪಿ ಅಲೋಕ್​ ಕುಮಾರ್ ಹಾಗೂ ಕೇಂದ್ರ ವಲಯ ಐಜಿಪಿ ಲಾಬೂರಾಮ್​ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಲೋಕ್​ ಕುಮಾರ್ ಅವರು ಅಪಘಾತದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಅಪಘಾತ ಸಂಬಂಧ ಮಾತನಾಡಿದ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ವೆಂಕಟ್, ಕೊರಟಗೆರೆ ಕಡೆಗೆ ಮಾರುತಿ ಸಿಯಾಜ್ ಕಾರು ಹೊರಟಿತ್ತು. ಮಧುಗಿರಿ ಕಡೆಗೆ ಟಾಟಾ ಟಿಯಾಗೋ ತೆರಳುತ್ತಿತ್ತು. ಓವರ್​ಟೇಕ್ ವೇಳೆ ಸಿಯಾಜ್ ಕಾರು ಬಲಬದಿ ಲೇನ್​ಗೆ ನುಗ್ಗಿ ಅಪಘಾತ ಸಂಭವಿಸಿದೆ. ಸಿಯಾಜ್ ಕಾರಿನಲ್ಲಿ ಚಾಲಕ ಸಮೇತ ಒಟ್ಟು 7 ಜನ ಪ್ರಯಾಣಿಸುತ್ತಿದ್ದರು.

ಹಬ್ಬ ಮುಗಿಸಿಕೊಂಡು ವಾಪಸ್​ ಬೆಂಗಳೂರಿಗೆ ಹಿಂದಿರುಗುತ್ತಿದ್ದರು. ಎದುರಿಗೆ ಬರ್ತಿದ್ದ ಟಾಟಾ ಟಿಯಾಗೋ ಕಾರಿನಲ್ಲಿದ್ದ ಇಬ್ಬರು ಮೃತಪಟ್ಟಿದ್ದಾರೆ. ಮಧುಗಿರಿ ಕಡೆಗೆ ಹೋಗ್ತಿದ್ದ ನಾಗರಾಜ್, ಸಿದ್ದಗಂಗಾ ಮೃತಪಟ್ಟಿದ್ದಾರೆ. ಬೆಂಗಳೂರಿಗೆ ಹೋಗ್ತಿದ್ದ ಸಿಂಧೂ, ಜನಾರ್ಧನ್ ಸೇರಿ ನಾಲ್ವರು ಮೃತಪಟ್ಟಿದ್ದಾರೆ. ಉಳಿದ ಗಾಯಾಳುಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ವೆಂಕಟ್ ಮಾಹಿತಿ ನೀಡಿದರು.

ಘಟನೆ ಹಿನ್ನೆಲೆ

ಶುಕ್ರವಾರ, ಶನಿವಾರ ಗೌರಿ ಗಣೇಶ ಹಬ್ಬವಿದ್ದ ಕಾರಣ ಸಾಕಷ್ಟು ಮಂದಿ ಬೆಂಗಳೂರಿನಿಂದ ತಮ್ಮ ತಮ್ಮ ಊರುಗಳಿಗೆ ತೆರಳಿದ್ರು. ಹಬ್ಬ ಮುಗಿಸಿ ನಿನ್ನೆ ಭಾನುವಾರ ಆಗಿದ್ದ ಕಾರಣ ವಾಪಸ್‌ಆಗ್ತಿದ್ರು. ಹೀಗೆ ತುಮಕೂರಿನಲ್ಲಿ ಕುಟುಂಬವೊಂದು ಬೆಂಗಳೂರಿಗೆ ವಾಪಸ್ ಆಗ್ತಿದ್ದಾಗ ಘೋರ ದುರಂತವೇ ಸಂಭವಿಸಿದೆ. ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಎತ್ತಿನಹಳ್ಳಿ ಗ್ರಾಮದಿಂದ ಸಿಂಧೂ ಅವ್ರ ಪುತ್ರ ವೇದಾಸ್ ರೆಡ್ಡಿ, ಜನಾರ್ದನ್ ರೆಡ್ಡಿ, ಕಾರು ಚಾಲಕ ಆನಂದ್ ಹಾಗೂ ಗೀತಾ ಯೋದಾ ಮತ್ತು ಟ್ರಯಾಂಗ್ ದೇವ್ ಸೇರಿ ಒಟ್ಟು 7 ಮಂದಿ ಹಬ್ಬ ಮುಗಿಸ್ಕೊಂಡು ಬೆಂಗಳೂರಿನ ಜೆಪಿ ನಗರ ಕಡೆ ಪ್ರಯಾಣ ಬೆಳೆಸಿದ್ರು. ಮತ್ತೊಂದ್ಕಡೆ ನಾಗರಾಜ್ ಹಾಗೂ ಸಿದ್ಧಗಂಗಾ ಅನ್ನೋರು ಟಿಯಾಗೋ ಕಾರಿನಲ್ಲಿ ಬೆಂಗಳೂರು ಕಡೆಯಿಂದ ಮಧುಗಿರಿ ಕಡೆಗೆ ತೆರಳುತ್ತಿದ್ರು. ಆದ್ರೆ ಮಧುಗಿರಿ ತಾಲೂಕಿನ ಕಾಟಗಾನಹಟ್ಟಿ ಬಳಿ ಎರಡು ಕಾರ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.

ಅಪಘಾತದ ರಭಸಕ್ಕೆ ಮಾರುತಿ ಸಿಯಾಜ್‌ಕಾರ್‌ನಲ್ಲಿದ್ದ 33 ವರ್ಷದ ಸಿಂಧೂ ಅವರ ಪುತ್ರ 12 ವರ್ಷದ ವೇದಾಸ್‌ ರೆಡ್ಡಿ, 30 ವರ್ಷದ ಆನಂದ್, 60 ವರ್ಷದ ಜನಾರ್ದನ ರೆಡ್ಡಿ ಸಾವನಪ್ಪಿದ್ದಾರೆ. ಇನ್ನು ಟಿಯಾಗೋ ಕಾರಿನಲ್ಲಿದ ಪಿಗ್ಮಿ ಕಲೆಕ್ಟರ್ ನಾಗರಾಜ್ ಮತ್ತು ಸಿದ್ಧಗಂಗಾ ಅನ್ನೋರು ಸಾವನಪ್ಪಿದ್ದಾರೆ.

RELATED ARTICLES
- Advertisment -
Google search engine

Most Popular