Saturday, April 19, 2025
Google search engine

Homeಅಪರಾಧವ್ಯಕ್ತಿಗೆ 6 ಲಕ್ಷ ರೂ. ವಂಚನೆ: ಮೂವರ ಬಂಧನ

ವ್ಯಕ್ತಿಗೆ 6 ಲಕ್ಷ ರೂ. ವಂಚನೆ: ಮೂವರ ಬಂಧನ

ನೆಲಮಂಗಲ: ಶಾದಿ ಡಾಟ್ ಕಾಮ್ ​ನಲ್ಲಿ ಯುವತಿಯ ನಕಲಿ ಫೋಟೋ ಹಾಕಿ ವ್ಯಕ್ತಿಗೆ 6 ಲಕ್ಷ ರೂ. ವಂಚಿಸಲಾಗಿದೆ.

ಪೀಣ್ಯಾದ ಶಿವಪುರದ ರಾಬರ್ಟ್ ವರ್ಗಿಸ್ ವಂಚನೆಗೊಳಗಾದ ವ್ಯಕ್ತಿ.

ಯುವತಿ ಅಲೋಶಿಯ, ಶಿವಮಧು, ಮುಜೀಬ್ ಎಂಬುವವರು ವಂಚಿಸಿದ್ದು, ಸದ್ಯ ಪೀಣ್ಯ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಯುವತಿ, ನಾನು ಕಾರು ಚಾಲನೆ ಮಾಡಿಕೊಂಡು ಬರುವಾಗ ಅಪಘಾತಕ್ಕೆ ಕಾರಣಳಾದೆ. ಅದ್ದರಿಂದ ಪೊಲೀಸರು ನನ್ನನ್ನ ಕಸ್ಟಡಿ ತೆಗೆದುಕೊಂಡಿದ್ದಾರೆ. ಪೊಲೀಸರಿಂದ ಕೇಸ್ ಮುಕ್ತಗೊಳಿಸಲು ಹಣದ ಅವಶ್ಯಕತೆ ಇದೆ. ಹೀಗಾಗಿ ನಾನು ತಿಳಿಸಿದ ವ್ಯಕ್ತಿಗಳ ಖಾತೆಗೆ ಹಣ ಹಾಕು ಎಂದು ರಾಬರ್ಟ್ ವರ್ಗಿಸ್ ಅವರಿಗೆ ಹೇಳಿದ್ದಾಳೆ.

ಅದರಂತೆ ರಾಬರ್ಟ್ ವರ್ಗಿಸ್ ಆರೋಪಿ ಮುಜೀಬ್ ​​ನ ಎಸ್ ಬ್ಯಾಂಕ್, ಐಡಿಬಿಐ ಬ್ಯಾಂಕ್ ಅಕೌಂಟ್​ ಗೆ 6 ಲಕ್ಷ ರೂ. ಹಾಕಿದ್ದರು. ಮತ್ತೊಬ್ಬ ಆರೋಪಿಯ ಯುನಿಯನ್ ಬ್ಯಾಂಕ್ ಅಕೌಂಟ್ ​​ಗೆ 25 ಸಾವಿರ ರೂ. ಹಣ ಹಾಕಿದ್ದಾರೆ. ಗುರುತನ್ನು ಮರೆಮಾಚಿ ಆರೋಪಿಗಳು ಹಣವನ್ನು ಆನ್ಲೈನ್ ಮೂಲಕ ಟ್ರಾನ್ಸ್‌ ಫರ್ ಮಾಡಿಸಿಕೊಂಡಿದ್ದಾರೆ.

ಪೀಣ್ಯಾ ಠಾಣೆಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯಿದೆ 2008 (U/s-66(D),66(C))ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular