Friday, April 4, 2025
Google search engine

HomeUncategorizedರಾಷ್ಟ್ರೀಯತಮಿಳುನಾಡಿನ ವಿಮಾನ ನಿಲ್ದಾಣದಲ್ಲಿ 6,850 ಜೀವಂತ ಆಮೆಗಳು ವಶ: ಇಬ್ಬರ ಬಂಧನ

ತಮಿಳುನಾಡಿನ ವಿಮಾನ ನಿಲ್ದಾಣದಲ್ಲಿ 6,850 ಜೀವಂತ ಆಮೆಗಳು ವಶ: ಇಬ್ಬರ ಬಂಧನ

ತಿರುಚಿರಾಪಳ್ಳಿ : ತಮಿಳುನಾಡಿನ ಕಸ್ಟಮ್ ಏರ್ ಇಂಟೆಲಿಜೆನ್ಸ್ ಯುನಿಟ್ (ಎಐಯು) ಅಧಿಕಾರಿಗಳು ಶುಕ್ರವಾರ 6,850 ಜೀವಂತ ಕೆಂಪು ಇಯರ್ಡ್ ಸ್ಲೈಡರ್‌ ಗಳು, ಒಂದು ಜಾತಿಯ ಆಮೆಯನ್ನು ವಶಪಡಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ.

ಕೌಲಾಲಂಪುರದಿಂದ ತಮಿಳುನಾಡಿನ ತಿರುಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಇಬ್ಬರು ಬಂಧಿತರು.

ಗುಪ್ತಚರದ ಮಾಹಿತಿಯ ಮೇರೆಗೆ, ತಿರುಚ್ಚಿಯ AIU ಅಧಿಕಾರಿಗಳು ವಿಮಾನ ನಿಲ್ದಾಣದ ನಿರ್ಗಮನ ಗೇಟ್‌ ನಲ್ಲಿ ಇಬ್ಬರು ಪ್ರಯಾಣಿಕರನ್ನು ತಡೆದಿದ್ದಾರೆ. ಅವರ ಚೆಕ್-ಇನ್ ಲಗೇಜ್‌ಗಳನ್ನು ಪರಿಶೀಲಿಸಿದಾಗ ಪ್ರಯಾಣಿಕರ ಸ್ಟ್ರಾಲರ್ ಬ್ಯಾಗ್‌ ನೊಳಗೆ ಸಣ್ಣ ಪೆಟ್ಟಿಗೆಗಳಲ್ಲಿ ಸಣ್ಣ ಗಾತ್ರದ ಜೀವಂತ ಆಮೆಗಳನ್ನು ಇರುವುದನ್ನು ಪತ್ತೆ ಮಾಡಿದ್ದಾರೆ.

ಇದರ ಒಬ್ಬನಿಂದ 57,441ರೂ. (ಭಾರತೀಯ ರೂಪಾಯಿ ಸಮಾನವಾದ) ವಿದೇಶಿ ಕರೆನ್ಸಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಯಾವ ದೇಶದಿಂದ ಕೆಂಪು ಇಯರ್ಡ್ ಸ್ಲೈಡರ್ ಆಮೆಗಳನ್ನು ತರಲಾಗಿದೆ ಅದನ್ನು ಮತ್ತೆ ಆ ದೇಶಕ್ಕೆ ಕಳುಹಿಸುವ ಪ್ರಕ್ರಿಯೆ ನಡೆಯುತ್ತಿದೆ.

ಅಧಿಕಾರಿಗಳು ಕಸ್ಟಮ್ಸ್ ಆಕ್ಟ್, 1962ರ ನಿಬಂಧನೆಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ ಮತ್ತು ಬಂಧಿತ ಇಬ್ಬರನ್ನು ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗುವುದು ಎಂದು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular