ಉಡುಪಿ: 68ನೇ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಆಚರಣಾ ಸಮಿತಿ ಉಡುಪಿ ಜಿಲ್ಲಾ ವತಿಯಿಂದ ಇಂದು ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮ ಆರ್ ಹೆಬ್ಬಾಳ್ಕರ್ ಧ್ವಜಾರೋಹಣ ನೆರವೇರಿಸಿ ಕರ್ನಾಟಕ ರಾಜ್ಯೋತ್ಸವ ಸಂದೇಶ ನೀಡಿದರು.

ಕನ್ನಡ ರಾಜ್ಯೋತ್ಸವ ದಿನದ ಮೆರವಣಿಗೆಯಲ್ಲಿ ಭಾಗವಹಿಸಿದ ಚಿತ್ರಗಳಲ್ಲಿ ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ಪ್ರಥಮ ಹಾಗೂ ಕೃಷಿ ಇಲಾಖೆ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಮೆರವಣಿಗೆಯಲ್ಲಿ ಭಾಗವಹಿಸಿದ ಕಾಲೇಜು ವಿದ್ಯಾರ್ಥಿನಿಯರ ತಂಡದಲ್ಲಿ ಉಡುಪಿ ಬಾಲಕಿಯರ ಪದವಿ ಪೂರ್ವ ಕಾಲೇಜು ಪ್ರಥಮ, ಇಂಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆ ದ್ವಿತೀಯ ಹಾಗೂ ಉಡುಪಿ ಸರಕಾರಿ ಪ್ರೌಢಶಾಲೆ (ಬೋರ್ಡ್ ಹೈಸ್ಕೂಲ್) ತೃತೀಯ ಸ್ಥಾನ ಪಡೆದರು. ರಸ್ತೆ ಸಂಚಾರದಲ್ಲಿ ವಿವಿಧ ಇಲಾಖೆ ಹಾಗೂ ಶಾಲೆಗಳ 14 ಭಾಗಗಳು ಭಾಗವಹಿಸಿದ್ದು, ಕಾಲೇಜು ವಿಭಾಗದ ಎನ್. ಸಿ ನಾವೆಲ್ ವಿಭಾಗದ ಪುರಗ್ಯ ಕಾಲೇಜಿನಲ್ಲಿ ಸಿ ಪ್ರಥಮ ಸ್ಥಾನ, ಸಿ ಕಾದಂಬರಿ ವಿಭಾಗದ ಎನ್ ಸಿ ಎಂ. ಜಿಎ ಎಎ ಕಾಲೇಜು ದ್ವಿತೀಯ, ಸಿ ಆರ್ಮಿ ವಿಭಾಗದ ಎನ್.ಸಿ.ಪೂರಪ್ರಜ್ಞಾ ಕಾಲೇಜು ತೃತೀಯ ಸ್ಥಾನ ಪಡೆದರು.
ಪ್ರಾಥಮಿಕ ಪ್ರೌಢಶಾಲಾ ವಿಭಾಗದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಂತೆಕಟ್ಟೆ ಕಲತ್ತೂರು ಪ್ರಥಮ, ಸರಕಾರಿ ಪ್ರೌಢಶಾಲೆ ಮೇಲ್ವಿಚಾರಣಾ ವಿಭಾಗದಲ್ಲಿ ದ್ವಿತೀಯ, ಸೈಂಟ್ ಸೆಸಿಲೀಸ್ ಪ್ರೌಢಶಾಲೆ ಉಡುಪಿ ತೃತೀಯ ಸ್ಥಾನ ಪಡೆದರು. ಸರಕಾರಿ ಪ್ರೌಢಶಾಲೆ ಅಂಕಾಡು ಆಂಗ್ಲ ಮಾಧ್ಯಮ ಶಾಲೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದ್ವಿತೀಯ ಸ್ಥಾನ ಪಡೆದಿದೆ. ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ವಿವಿಧ ಕ್ಷೇತ್ರಗಳಲ್ಲಿ 29 ಜನರನ್ನು ಹಾಗೂ 5 ಸಂಸ್ಥೆಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಬೋರ್ಡ್ ಪ್ರೌಢಶಾಲೆಯಿಂದ ಅಜ್ಜರಕಾಡು ಮಹಾತ್ಮಗಾಂಧಿü ಜಿಲ್ಲಾ ಕ್ರೀಡಾಂಗಣದವರೆಗೆ ನಡೆದ ಭುವನೇಶ್ವರಿ ದೇವಿ ಮೆರವಣಿಗೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮ ಆರ್ ಹೆಬ್ಬಾಳ್ಕರ್ ಚಾಲನೆ ನೀಡಿದರು.
