ಮೈಸೂರು: 2023ರ ಏಪ್ರಿಲ್ ನಿಂದ ನವೆಂಬರ್ ವರೆಗೆ ಒಟ್ಟು 7.242 ದಶಲಕ್ಷ ಟನ್ (MT) ಗಳಷ್ಟು ಸರಕನ್ನು ವಿಭಾಗದ ವ್ಯಾಪ್ತಿಯಲ್ಲಿ ಲೋಡಿಂಗ್ ನಡೆಸಿ ಸರಕು ಸಾಗಣೆಯಲ್ಲಿ ಮೈಸೂರು ವಿಭಾಗವು ಗಮನಾರ್ಹ ಸಾಧನೆ ಸಾದಿಸಿದೆ.
ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 1.700 MT ನ ಗಣನೀಯ ಹೆಚ್ಚಳವನ್ನು ಸೂಚಿಸುತ್ತದೆ. ಇದು ವಿಭಾಗವು ದಕ್ಷತೆ ಮತ್ತು ಬೆಳವಣಿಗೆ ಕಡೆಗೆ ತೋರಿಸುವ ತನ್ನ ಬದ್ಧತೆಯ ಪ್ರತೀಕವಾಗಿದೆ.
ಪ್ರಭಾವಶಾಲಿ ಬೆಳವಣಿಗೆ: ವಿಭಾಗವು ಸರಕು ಸಾಗಣೆಯಲ್ಲಿ 1.700 MT ನ ಗಣನೀಯ ಬೆಳವಣಿಗೆಯನ್ನು ತೋರಿಸಿದೆ. ಇದು ನವೆಂಬರ್ 2022 ರವರೆಗಿನ ಕಳೆದ ಹಣಕಾಸು ವರ್ಷದ ಅಂಕಿಅಂಶಗಳಿಗಿಂತ 30.68% ಹೆಚ್ಚಳವಾಗಿದೆ.

ಆದಾಯ ಹೆಚ್ಚಳ: ವಿಭಾಗವು 2023ರ ಏಪ್ರಿಲ್ ನಿಂದ ನವೆಂಬರ್ ವರೆಗೆ ಸರಕು ಸಾಗಾಣೆಯಿಂದ ಶ್ಲಾಘನೀಯವಾದ 620.20 ಕೋಟಿ ರೂಪಾಯಿಗಳನ್ನು ಸಂಪಾದಿಸಿರುವುದು ಆದಾಯ ಗಳಿಕೆಯ ಬಗ್ಗೆ ತಿಳಿಸುತ್ತದೆ. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ರೂ. 171.54 ಕೋಟಿಗಳ ಗಮನಾರ್ಹ ಹೆಚ್ಚಳವನ್ನು ಪ್ರತಿಬಿಂಬಿಸುತ್ತದೆ ಮತ್ತು ದೃಢವಾದ ಆರ್ಥಿಕ ಪ್ರಗತಿಯನ್ನು ತೋರಿಸುತ್ತದೆ.
ಮಾಸಿಕ ಸಾಧನೆಗಳು: ನವೆಂಬರ್ 2023 ರಲ್ಲಿ ವಿಭಾಗವು 1.029 MT ಸರಕು ಸಾಗಣೆಯನ್ನು ಸಾಧಿಸಿದ್ದೂ, ಹಿಂದಿನ ವರ್ಷದ ಅದೇ ಅವಧಿಗೆ ಹೋಲಿಸಿದರೆ ಗಮನಾರ್ಹವಾದ 53.13% ರಷ್ಟು ಹೆಚ್ಚಳವಾಗಿದೆ. ಇದರಿಂದ ಸರಕು ಸಾಗಣೆ ಆದಾಯ 79.88 ಕೋಟಿ ರೂಪಾಯಿಗಳಾಗಿದ್ದೂ, ನವೆಂಬರ್ 2022 ಕ್ಕಿಂತ 29.68% ಹೆಚ್ಚು ಬೆಳವಣಿಗೆಯನ್ನು ಕಂಡಿದೆ.
ವಿವಿಧ ಸರಕು ವಿಭಜನೆ: ಮೈಸೂರು ವಿಭಾಗದಲ್ಲಿ 2023 ರ ನವೆಂಬರ್ ನಲ್ಲಿ ವಿವಿಧ ತರಹದ ಸರಕುಗಳ ಸಾಗಾಣೆ ಉತ್ತಮವಾಗಿದ್ದು, ಇದರಲ್ಲಿ ಕಬ್ಬಿಣದ ಅದಿರು 0.830 MT, ಖನಿಜ ತೈಲದಲ್ಲಿ 0.163 MT, ಆಹಾರಧಾನ್ಯಗಳಲ್ಲಿ 0.003 MT, ಆಟೋಮೊಬೈಲ್‌ಗಳಲ್ಲಿ 0.006 MT, ಮತ್ತು ಇತರೆ ಸರಕುಗಳಲ್ಲಿ 0.033 MT ಸಾಗಾಟವಾಗಿವೆ.
ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶಿಲ್ಪಿ ಅಗರ್ವಾಲ್ ರವರು ಈ ಅತ್ಯುತ್ತಮ ಕಾರ್ಯಕ್ಷಮತೆಗೆ ತೃಪ್ತಿ ವ್ಯಕ್ತಪಡಿಸಿ “ಈ ಸಾಧನೆಯು ಕಾರ್ಯಾಚರಣೆ ಶ್ರೇಷ್ಠತೆ ಮತ್ತು ಗ್ರಾಹಕರ ತೃಪ್ತಿಯ ಕಡೆಗೆ ನಮ್ಮ ಬದ್ಧತೆಯನ್ನು ತೋರಿಸುತ್ತದೆ. ಈ ಮೇಲ್ಮುಖ ಪಥವನ್ನು ಕಾಪಾಡಿಕೊಳ್ಳಲು ನಾವು ನಾವೀನ್ಯತೆ ಮತ್ತು ದಕ್ಷತೆಯತ್ತ ಗಮನ ಹರಿಸುವುದನ್ನು ಮುಂದುವರಿಸುತ್ತೇವೆ.” ಎಂದು ಹೇಳಿದರು