ಮೈಸೂರು : ಟಂಡರ್ ಆಪ್ ಮೂಲಕ ಪರಿಚಯವಾಗಿದ್ದ ಆರೋಪಿಯೊಬ್ಬ ನಗರದ ಗ್ರಾಂಡ್ ಮರ್ಕೂರಿ ಹೋಟಲ್‌ನಲ್ಲಿ ಜ.೧೦ ರಂದು ವ್ಯಕ್ತಿಯೊಬ್ಬರ ಜತೆ ಉಳಿದುಕೊಂಡು ಅವರ ಬಳಿ ಇದ್ದ ೭.೨೫ ಲಕ್ಷ ರೂ. ಮೌಲ್ಯದ ೧೪೯ ಗ್ರಾಂ ಚಿನ್ನದ ಒಡವೆಗಳನ್ನು ಕಳುವು ಮಾಡಿದ್ದನ್ನು ಮಂಡಿ ಪೊಲೀಸರು ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸಿದ್ದಾರೆ.
ಡಿಸಿಪಿ ಎಸ್.ಜಾಹ್ನವಿ, ಎಸಿಪಿ ಆಶ್ವತ್‌ನಾರಾಯಣ ಮಾರ್ಗದರ್ಶನದಲ್ಲಿ ಪ್ರಕರಣ ನಡೆದ ಎರಡೇ ದಿನದಲ್ಲಿ ಆರೋಪಿಯನ್ನು ಪತ್ತೆ ಹಚ್ಚಿದ ಇನ್ಸ್‌ಪೆಕ್ಟರ್ ಎಸ್.ನಾಗೇಶ್, ಪಿ.ಎಸ್.ಐ ರೇವಣ್ಣ ಸಿದ್ದಪ್ಪಾ, ರಂಗಸ್ವಾಮಿ, ಎ.ಎಸ್.ಐ ಕೆ.ಎಸ್.ಗುರುಸ್ವಾಮಿ, ಸಿಬ್ಬಂದಿಯವರಾದ ರಾಜೇಂದ್ರ ಜಿ.ಸಿ, ಜನಾರ್ದನರಾವ್, ಮಹಮದ್ ಖಯ್ಯೂಂ, ರಾಜುಸಾಬ್, ಮೆಹಬೂಬ್ ಖಾನ್, ಜಯಕುಮಾರ್, ಇಸ್ಮಾಯಿಲ್, ಸಮೀರ್, ಕರಿಯಪ್ಪ, ಯೋಗೇಶ್, ಮತ್ತು ತಾಂತ್ರಿಕ ವಿಭಾಗದ ಕುಮಾರ್, ಮಂಜು ಹಾಗೂ ಶ್ಯಾಮ್ ಸುಂದರ್ ಅವರನ್ನು
ನಗರದ ಪೊಲೀಸ್ ಆಯುಕ್ತರಾದ ಬಿ. ರಮೇಶ್ ಪ್ರಶಂಸಿಸಿದ್ದಾರೆ.