Wednesday, April 9, 2025
Google search engine

Homeರಾಜ್ಯಮುಡಾದಲ್ಲಿ 700 ಕೋಟಿ ಅವ್ಯವಹಾರ : ಬಡವರಿಗೆ ಕೊಡಬೇಕಿದ್ದ ನಿವೇಶನಗಳು ಶ್ರೀಮಂತರ ಪಾಲು: ವಿಜಯೇಂದ್ರ ಕಿಡಿ

ಮುಡಾದಲ್ಲಿ 700 ಕೋಟಿ ಅವ್ಯವಹಾರ : ಬಡವರಿಗೆ ಕೊಡಬೇಕಿದ್ದ ನಿವೇಶನಗಳು ಶ್ರೀಮಂತರ ಪಾಲು: ವಿಜಯೇಂದ್ರ ಕಿಡಿ

ಕಲಬುರ್ಗಿ: ಕದ್ದ ಮಾಲನ್ನು ವಾಪಸ್ ಕೊಟ್ಟರೂ..ಮುಡಾದಲ್ಲಿ ಹಗರಣವೇ ಆಗಿಲ್ಲವೆಂದು ಮುಖ್ಯಮಂತ್ರಿಗಳು ಹೇಳಿದ್ದರು. ಬಿಜೆಪಿ- ಜೆಡಿಎಸ್ ಪಾದಯಾತ್ರೆಯ ಬಳಿಕ ಸಿಎಂ ಪತ್ನಿಗೆ ಅಚಾನಕ್ಕಾಗಿ ಜ್ಞಾನೋದಯವಾಗಿ ನಿವೇಶನ ವಾಪಸ್ ಕುರಿತ ಅರ್ಜಿ ಸಲ್ಲಿಕೆ ಮಾಡಿದ್ದರು. ಇ.ಡಿ. ನಿಷ್ಪಕ್ಷಪಾತ ತನಿಖೆ ಮಾಡಿದೆ. ೭೦೦ ಕೋಟಿಗೂ ಹೆಚ್ಚು ಮೌಲ್ಯದ ನಿವೇಶನಗಳು ಇದರಡಿ ಇವೆ ಎಂದು ಮೊದಲ ಹಂತದಲ್ಲಿ ಇ.ಡಿ. ತಿಳಿಸಿದೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಾಗ್ದಾಳಿ ನಡೆಸಿದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಇಂದು ಮಾತನಾಡಿದ ಅವರು, ೧೪ ನಿವೇಶನ ನೀಡಿಕೆ ವಿಚಾರದಲ್ಲಿ ಅಕ್ರಮಗಳು, ಫೋರ್ಜರಿ ಆಗಿದೆ. ವೈಟ್ನರ್ ಹಚ್ಚಿ ಅರ್ಜಿ ತಿದ್ದಿದ ಕುರಿತು ತಿಳಿಸಿದ್ದಾರೆ ಎಂದರು. ಕದ್ದ ಮಾಲನ್ನು ವಾಪಸ್ ಕೊಟ್ಟರೂ ಆರೋಪ ಮುಕ್ತರಾಗಲು ಸಾಧ್ಯವಿಲ್ಲ. ಇ.ಡಿ ತನಿಖೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಸತ್ಯ ಇನ್ನಷ್ಟು ಹೊರಕ್ಕೆ ಬರಲಿದೆ ಎಂದು ವಿಜಯೇಂದ್ರ ಅವರು ನುಡಿದರು.

ಇಡಿಯವರು ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಯನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂಬ ಹೇಳಿಕೆಯನ್ನು ಇವತ್ತು ಅಥವಾ ನಾಳೆ ಮುಖ್ಯಮಂತ್ರಿಗಳಿಂದ ಅಥವಾ ಡಿಕೆ.ಶಿವಕುಮಾರರಿಂದ ನೀವು ನಿರೀಕ್ಷಿಸಬಹುದು ಎಂದು ಅವರು ಮುಡಾ ಅಕ್ರಮ, ಇಡಿ ವರದಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರ ನೀಡಿದರು.

ಮುಡಾ ಹಗರಣ ಕುರಿತು ಬಿಜೆಪಿ ಸದನದಲ್ಲಿ ಚರ್ಚಿಸಲು ಮುಂದಾಗಿತ್ತು. ದೇಸಾಯಿ ಕಮಿಟಿ ರಚಿಸಿದ್ದು, ಚರ್ಚೆಗೆ ಅವಕಾಶ ಕೊಡುವುದಿಲ್ಲ ಎಂದು ಕಾನೂನು ಸಚಿವ ಎಚ್‌ಕೆ ಪಾಟೀಲರು ಸದನದಲ್ಲಿ ಹೇಳಿ, ಚರ್ಚೆಗೆ ಅವಕಾಶ ಕೊಡಲಿಲ್ಲ ಎಂದು ಗಮನ ಸೆಳೆದರು.ಮೈಸೂರು ಮುಡಾ ಹಗರಣವು ಕೇವಲ ಮುಖ್ಯಮಂತ್ರಿಗಳ ಕುಟುಂಬಕ್ಕೆ ೧೪ ನಿವೇಶನ ನೀಡಿಕೆಗಷ್ಟೇ ಸೀಮಿತವಾಗಿಲ್ಲ ಎಂದು ಬಿಜೆಪಿ ಆರಂಭದಲ್ಲೇ ತಿಳಿಸಿದೆ. ೧೪ ನಿವೇಶನ ವಾಪಸಾತಿಗೆ ೬೨ ಕೋಟಿ ಪರಿಹಾರ ಕೊಡಬೇಕೆಂದೂ ಮುಖ್ಯಮಂತ್ರಿಯವರು ಹೇಳಿದ್ದರು. ಬಡವರಿಗೆ ಕೊಡಬೇಕಿದ್ದ ಸಾವಿರಾರು ಕೋಟಿ ಮೊತ್ತದ ನಿವೇಶನಗಳು ಬ್ರೋಕರ್‍ಗಳ, ರಿಯಲ್ ಎಸ್ಟೇಟ್‌ನವರ ಪಾಲಾಗಿದೆ ಎಂದು ನಾನು ಹೇಳಿದ್ದೆ ಎಂದು ಗಮನಕ್ಕೆ ತಂದರು.

ಆರ್.ಅಶೋಕ್ ಅವರ ದೆಹಲಿ ಭೇಟಿ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ವಿರೋಧ ಪಕ್ಷದ ನಾಯಕರಿದ್ದಾರೆ. ಕೇಂದ್ರ ವರಿಷ್ಠರನ್ನು ಭೇಟಿ ಮಾಡಲು ಹೋಗಿರಬಹುದು ಎಂದು ತಿಳಿಸಿದರು.

ಪಕ್ಷವಿರೋಧಿ ಚಟುವಟಿಕೆ- ಕೋರ್ ಕಮಿಟಿಯಲ್ಲಿ ಚರ್ಚಿಸಿ ದೆಹಲಿಗೆ ವರದಿ
ಇದೇ ೭ರಂದು ರಾಜ್ಯ ಕೋರ್ ಕಮಿಟಿ ಸಭೆ ನಡೆಯಲಿದೆ. ಎಸ್.ಟಿ.ಸೋಮಶೇಖರ್ ವಿಚಾರವೂ ಸೇರಿ ಎಲ್ಲ ವಿಚಾರಗಳನ್ನು ಚರ್ಚಿಸಿ ನಿರ್ಧರಿಸುತ್ತೇವೆ. ಪಕ್ಷದಲ್ಲಿ ಯಾರೆಷ್ಟೇ ದೊಡ್ಡ ಮುಖಂಡರಿದ್ದರೂ ಪಕ್ಷವಿರೋಧಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂಬ ಅಪೇಕ್ಷೆ ಹಿರಿಯರದು. ೭ರಂದು ಚರ್ಚಿಸಿ ದೆಹಲಿಗೆ ವರದಿ ನೀಡುತ್ತೇವೆ ಎಂದು ಸ್ಪಷ್ಟಪಡಿಸಿದರು.

RELATED ARTICLES
- Advertisment -
Google search engine

Most Popular