ವರದಿ:ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : 72ವರ್ಷದಿಂದ ಸಾವಿರಾರು ಮಂದಿಗೆ ಶಿಕ್ಷಣ ನೀಡಿದ ಚುಂಚನಕಟ್ಟೆ ಸರ್ಕಾರಿ ಪ್ರೌಡಶಾಲೆಯಿಂದ ಸಾವಿರಾರು ಮಂದಿ ಸರ್ಕಾರಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ದೊಡ್ಡಸ್ವಾಮೇಗೌಡ ಹೇಳಿದರು.
ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆಯಲ್ಲಿ ಸರ್ಕಾರಿ ಪ್ರೌಡಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಆಯೋಜಿಸಿದ್ದ ಗುರುವಂದನಾ ಮತ್ತು ಸ್ನೇಹ ಬಂಧನ ಕಾರ್ಯಕ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಯಲ್ಲಿ ಓದಿದವರು ಉನ್ನತ ಸ್ಥಾನ ಪಡೆಯಲು ಸಾಧ್ಯವೇ ಎಂಬ ಪ್ರಶ್ನೆಗೆ ಐ.ಎ.ಎಸ್.ಅಧಿಕಾರಿ ದಯಾನಂದ್ ಮತ್ತು ಯುಪಿಸ್ಸಿ ಸಾಧಕಿ ಎ.ಸಿ.ಪ್ರೀತಿ ಅವರ ಸಾಧನೆಯನ್ನ ನೋಡಿದಾಗ ಉತ್ತರ ಸಿಗಲಿದೆ ಎಂದ ಅವರು ಸರ್ಕಾರಿ ಶಾಲೆಗಳಿಂದಲೇ ಇಂದು ಗ್ರಾಮಾಂತರ ಪ್ರದೇಶದವರಿಗೆ ಉತ್ತಮ ಶಿಕ್ಷಣ ದೊರೆಯಲು ಸಾಧ್ಯವಾಗಿದೆ ಎಂದರು.
ಈ ಶಾಲೆಯಲ್ಲಿ ಓದಿದವರು ಮತ್ತೆ ಒಂದು ಕಡೆ ಸೇರಿಸುವ ದೃಷ್ಠಿಯಿಂದ ಹಳೆಯ ವಿದ್ಯಾರ್ಥಿಗಳ ಸಂಘದವರು ಈ ಕಾರ್ಯಕ್ರಮ ಆಯೋಜಿಸುವ ಮೂಲಕ ಸಾಧಕರನ್ನು ಗೌರವಿಸುವ ಕೆಲಸ ಮಾಡುತ್ತಿದ್ದು ಇಂತಹ ಕೆಲಸ ನಿರಂತವಾಗಿ ನಡೆಯಲಿ ಇದಕ್ಕೆ ತಮ್ಮ ಸಂಪೂರ್ಣವಾಗಿ ಸಹಕಾರ ಇರುತ್ತದೆ ಎಂದರು.
ಸನ್ಮಾನ ಸ್ವೀಕರಿಸಿ ಯುಪಿಎಸ್ಸಿ ಸಾಧಕಿ ಅಂಕನಹಳ್ಳಿ.ಸಿ.ಪ್ರೀತಿ ಮಾತನಾಡಿದ ಸಾಧನೆಗಳನ್ನು ಮಾಡುವಾಗ ಪೋಷಕರು ಶಿಕ್ಷಕರ ಪ್ರೋತ್ಸಾಹದ ಜತಗೆ ಶಿಕ್ಷಣವೇ ಕಾರಣವಾಗಿದ್ದು ವಿದ್ಯಾರ್ಥಿಗಳು ಸಾಧನೆಗಳ ಬಗ್ಗೆ ಗುರಿ ಇಟ್ಟು ಕೊಂಡು ಬೆನ್ನುಹತ್ತಿದಾಗ ಮಾತ್ರ ಯಶಸ್ಸುಗಳಿಸಲು ಸಾಧ್ಯ ಎಂದ ಅವರು ವಿದ್ಯಾರ್ಥಿ ಸಂಘಗಳ ಮೂಲಕ ವಿಧ್ಯಾರ್ಥಿಗಳ ಬದುಕಿಗೆ ಸದಾ ಪ್ರೋತ್ಸಾಹ ಜತಗೆ ಸಹಕಾರ ಇರಲಿ ಎಂದರು.

ಈ ಸಂದರ್ಭದಲ್ಲಿ ನಿವೃತ್ತ ಹೈಕೋರ್ಟ್ ನ್ಯಾಯದೀಶ ಚಂದ್ರಶೇಖಯ್ಯ, ನಿವೃತ್ತ ರಿಜಿಸ್ಟರ್ ಎಂ.ಬಿ.ಶ್ರೀನಿವಾಸ್, ಬೆಂಗಳೂರು ಭಾಷಾಂತರ ಸಹ ನಿರ್ದೇಶಕ ಕೆ.ಎ.ಗುರುರಾಜ್, ಒಕ್ಕಲಿಗರ ಸಂಘದ ಅಧ್ಯಕ್ಷ ಶಿವರಾಮ್, ನಿರ್ದೇಶಕ ಕೆ.ಬಿ.ಪ್ರಕಾಶ್, ನಿವೃತ್ತ ಶಿಕ್ಷಕರಾದ ಎಚ್.ಎಸ್.ನಾಗೇಂದ್ರ , ರಾಮೇಗೌಡ, ಲಕ್ಷ್ಮಣ್, ಮತ್ತು ಸಾಧಕ ವಿಧ್ಯಾರ್ಥಿಗಳು ಸೇರಿದಂತೆ ಮತ್ತಿತರರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯ ಪರ್ವದ ಗೌರವಾಧ್ಯಕ್ಷ ಜೆ.ಎಂ.ಕುಮಾರ್,ಪಿರಿಯಾಪಟ್ಟಣ ಕ್ಷೇತ್ರದ ಬಿಇಓ ರವಿಪ್ರಶನ್ನ, ಕುಪ್ಪೆ ಗ್ರಾ.ಪಂ.ಅಧ್ಯಕ್ಷೆ ಶಾರಮ್ಮ, ಮಾಜಿ ಅಧ್ಯಕ್ಷರಾದ ಗೌರಮ್ಮ, ಮಂಜುನಾಥ್, ಜೆಡಿಎಸ್ ರೈತ ಘಟಕದ ಅಧ್ಯಕ್ಷ ಜಿ.ಪಿ.ಮಂಜು, ಅಧ್ಯಕ್ಷ ಕೆ.ಎಚ್. ಜಯರಾಮೇಗೌಡ,ಉಪಾಧ್ಯಕ್ಷ ಎಸ್.ಎಸ್.ಶಿವಸ್ವಾಮಿ, ಪ್ರಧಾನಕಾರ್ಯದರ್ಶಿ ರಾಮಕೃಷ್ಣೇಗೌಡ, ಸಂಚಾಲಕ ಚಿಕ್ಕಕೊಪ್ಪಲು.ಟಿ. ಧರ್ಮಪಾಲ, ಸಂಘಟನಾ ಕಾರ್ಯದರ್ಶಿ ವೈ.ಎ.ಮಹದೇವ್, ಖಜಾಂಚಿ ಕೆಂಪರಾಜು, ಪರುಶುರಾಮ್, ಎಸ್.ಟಿ.ಪುರುಷೋತ್ತಮ್, ವಿಜಯಕುಮಾರ್,ಹಳೆಯ ವಿದ್ಯಾರ್ಥಿಗಳಾದ ಪೊಲೀಸ್ ರಾಚಯ್ಯ, ಸ್ಟೂಡಿಯೋ ಲೋಕೇಶ್, ಮಿಲ್ ದಿವಾಕರ್, ಪಂಜು, ಭಾಗ್ಯಮ್ಮ, ಆನಂದ್, ಶ್ರೀನಿವಾಸ್, ಶೈಲಜಾ, ಅನಿತಾ, ರೇಣುಕಾ,ಜಯಶ್ರೀ, ಹೇಮ,ಸವಿತಾ, ಜ್ಯೋತಿ, ವಿಶ್ವನಾಥ್, ಡೋಲ್ ಮಂಜ, ಶಿವಮರ್ತಿ, ಬಾಲರಾಜ್, ಬೈರನಾಯಕ, ಬಾಬು,ಮಧು,ಸ್ವಾಮೀಗೌಡ, ಗೀತಾ, ಹೇಮಾವತಿ, ಹೊಸೂರು ಹೇಮಣ್ಣ,ಚಿಕ್ಕಕೊಪ್ಪಲು ಸಿ.ಟಿ.ಸ್ವಾಮಿ, ಬಿಜಿಎಸ್ ಮುಖ್ಯ ಶಿಕ್ಷಕಿ ಚಾಂದಿನಿ, ಸರ್ಕಾರಿ ಪ್ರೌಡಶಾಲೆ ಮುಖ್ಯಶಿಕ್ಷಕ ರಘು, ಸೇರಿದಂತೆ ಮತ್ತಿತರು ಹಾಜರಿದ್ದರು.