ಅಖಿಲ ಭಾರತದ 72ನೇ ಸಪ್ತಾಹವು ರವಿವಾರ ಮಂಗಳೂರಲ್ಲಿ ನಡೆಯಲಿದೆ ಎಂದು ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದ್ದಾರೆ. ಅವರು ಶನಿವಾರ ಸಂಜೆ ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ನಡೆದ ಪ್ರೆಸ್ ಮೀಟ್ ನಲ್ಲಿ ಈ ಕುರಿತು ಮಾಹಿತಿ ನೀಡಿದರು. ಕಳೆದ 30 ವರ್ಷಗಳಿಂದ ನಡಿತಾ ಇರುವ ಸಹಕಾರ ಸಪ್ತಾಹ ಜನರಿಗೆ ತಲುಪುವಲ್ಲಿ ಯಶಸ್ವಿಯಾಗಿದೆ. ಸಹಕಾರಿಗಳ ಮೆರವಣಿಗೆ ನಡೆಯಲಿದ್ದು ಇದರಲ್ಲಿ ಟ್ಯಾಬ್ಲೋ ಜೊತೆಗೆ ಕರ್ನಾಟಕದ ವಿವಿಧ ಡೊಳ್ಳುಕುಣಿತ ಸೇರಿದಂತೆ ಜಾನಪದ ನೃತ್ಯಗಳ ಪ್ರದರ್ಶನ ಇರಲಿದೆ ಅಂದರು.
ಉಡುಪಿ, ಮಂಗಳೂರು ಜಿಲ್ಲೆಯ ಸಹಕಾರಿಗಳಿಗೆ ಸಹಕಾರ ಮಾಣಿಕ್ಯ ಪ್ರಶಸ್ತಿ ನೀಡಲಿದ್ದೇವೆ. ಅದರ ಜೊತೆಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ವಿಭಾಗಗಳಿಂದ ಗುರುತಿಸಿ ಸನ್ಮಾನಿಸಲಿದ್ದೇವೆ. ಮಹಿಳೆಯರ ಸ್ವಸಹಾಯ ಗುಂಪುಗಳನ್ನು ಗುರುತಿಸಲಿದ್ದೇವೆ ಎಂದ ಅವರು, ಕೆಎಂಎಫ್ ನಿಂದ ನಾಳೆ ಎರಡು ಹೊಸ ಉತ್ಪನ್ನಗಳು ಬಿಡುಗಡೆ ಆಗಲಿದೆ ಎಂದ ಅವರು, ಸುಮಾರು 15,000 ಜನರು ಭಾಗವಹಿಸಲಿದ್ದು ಎಲ್ಲರಿಗೂ ಊಟೋಪಚಾರ ಇರಲಿದೆ ಅಂದರು.
ಸುದ್ದಿಗೋಷ್ಟಿಯಲ್ಲಿ ವಿನಯ್ ಕುಮಾರ್ ಸೂರಿಂಜೆ, ಪ್ರಸಾದ್, HM ರಮೇಶ್, ರವಿರಾಜ ಹೆಗ್ಡೆ, ರವೀಂದ್ರ ಕಂಬಳಿ, ಗೋಪಾಲಕೃಷ್ಣ ಭಟ್, ಸದಾಶಿವ ಉಳ್ಳಾಲ್, ಎ ರಘು, ಜಯರಾಜ ರೈ, ಮೋನಪ್ಪ ಶೆಟ್ಟಿ ಎಕ್ಕಾರು, ಐಕಳ ಬಾವಾ ದೇವಿಪ್ರಸಾದ್ ಶೆಟ್ಟಿ, ಜಯರಾಜ ರೈ, ಭಾಸ್ಕರ ಎಸ್ ಕೋಟ್ಯಾನ್ ಸೇರಿ ಅನೇಕರು ಉಪಸ್ಥಿತರಿದ್ದರು.
ಮಂಗಳೂರಲ್ಲಿ 72ನೇ ಅಖಿಲ ಭಾರತ ಸಹಕಾರ ಸಪ್ತಾಹ: ಎಂ.ಎನ್. ರಾಜೇಂದ್ರ ಕುಮಾರ್ ಹೇಳಿಕೆ
RELATED ARTICLES



