ಮಂಡ್ಯ: ಮಂಡ್ಯದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಕಚೇರಿ ಆವರಣದಲ್ಲಿ ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಅವರ 75ನೇ ಜನ್ಮದಿನಾಚರಣೆಯನ್ನು ಕರ್ನಾಟಕ ರಾಜ್ಯ ರೈತ ಸಂಘ ತಾಲ್ಲೂಕು ಘಟಕದ ವತಿಯಿಂದ ಆಚರಿಸಲಾಯಿತು.
ರೈತ ದಿನದಂದು ಕೆ.ಎಸ್.ಪುಟ್ಟಣ್ಣಯ್ಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಜನ್ಮದಿನಾಚಾರಣೆ ಮಾಡಲಾಯಿತು.
ಕೆ.ಎಸ್.ಪುಟ್ಟಣ್ಣಯ್ಯ ಅವರು ಪುತ್ಥಳಿ ನಿರ್ಮಾಣಕ್ಕೆ ರೈತರು ಸಿಎಂ ಸಿದ್ದರಾಮಯ್ಯಗೆ ಆಗ್ರಹಿಸಿದ್ದಾರೆ.
ರೈತರ ನಾಯಕ ಅಂದ್ರೆ ಅದು ಪುಟ್ಟಣ್ಣಯ್ಯ ಮಾತ್ರ. ರೈತರ ರಕ್ತದ ಕಣ ಕಣದಲ್ಲಿ ಪುಟ್ಟಣ್ಣಯ್ಯ ಇದ್ದಾರೆ. ಅವರ ಋಣ ತೀರಿಸಲು ಅವರ ಪುತ್ಥಳಿ ನಿರ್ಮಾಣ ಮಾಡಬೇಕು ಎಂದರು.