Tuesday, April 22, 2025
Google search engine

Homeಸ್ಥಳೀಯಸಮರ್ಥನಂ ವಿಶೇಷ ಮಕ್ಕಳಿಂದ ೭೫ನೇ ಗಣರಾಜ್ಯೋತ್ಸವ ಆಚರಣೆ

ಸಮರ್ಥನಂ ವಿಶೇಷ ಮಕ್ಕಳಿಂದ ೭೫ನೇ ಗಣರಾಜ್ಯೋತ್ಸವ ಆಚರಣೆ

ಮೈಸೂರು: ವಿಜಯನಗರ ೨ನೇ ಹಂತದಲ್ಲಿರುವ ಸಮರ್ಥನಂ ಅಂಗವಿಕಲರ ಸಂಸ್ಥೆಯ ಆವರಣದಲ್ಲಿ ೭೫ನೇ ಗಣರಾಜ್ಯೋತ್ಸವ ಆಚರಣೆ ಮಾಡಲಾಯಿತು. ಸಮರ್ಥನಂ ಸಂಸ್ಥೆಯ ಹಿತೈಷಿ ಹಾಗೂ ನಿವೃತ್ತ ಮುಖ್ಯೋಪಾಧ್ಯಾಯರಾದ ಪುಟ್ಟವೀರಪ್ಪ, ಮೈಸೂರು ವಿಭಾಗದ ಮುಖ್ಯಸ್ಥರಾದ ಶಿವರಾಜು, ವಿಶೇಷ ಶಿಕ್ಷಕರಾದ ಭ್ರಮಾರಂಬ, ಬೃಂದಾ ಬಾಯಿ, ಹೆಚ್.ವಿದ್ಯಾವತಿ, ಜಿ.ಬಿ.ಶಿವಕುಮಾರ್ ಧ್ವಜಾರೋಹಣ ನೆರೆವೇರಿಸಿದರು.

ಸಮರ್ಥನಂ ಸಂಸ್ಥೆಯ ಹಿತೈಷಿ ಹಾಗೂ ನಿವೃತ್ತ ಮುಖ್ಯೋಪಾಧ್ಯಾಯರಾದ ಪುಟ್ಟವೀರಪ್ಪ ಮಾತನಾಡಿ, ‘ಸಂವಿಧಾನದ ಮೂಲ ಆಶಯ ಸಾಮಾಜಿಕ ನ್ಯಾಯವಾಗಿದೆ. ಇತರೆ ದೇಶಗಳ ಸಂವಿಧಾನಕ್ಕೆ ಹೋಲಿಸಿದರೆ ನಮ್ಮ ಸಂವಿಧಾನ ಒಕ್ಕೂಟ ವ್ಯವಸ್ಥೆಯಲ್ಲಿನ ಸಾಮರಸ್ಯದಿಂದಾಗಿ ಭಿನ್ನವಾಗಿ ನಿಲ್ಲುವುದು. ಸಂವಿಧಾನ ಜಾರಿಯ ಪ್ರಾರಂಭದಲ್ಲೇ ಪುರು? ಮತ್ತು ಮಹಿಳೆ ಇಬ್ಬರಿಗೂಮತದಾನದ ಹಕ್ಕು ನೀಡಿದೆ’ ಎಂದರು. ‘ಭಾರತದ ಸಂವಿಧಾನವು ಜಾತಿ, ಮತ, ಲಿಂಗ, ಸಂಸ್ಕೃತಿಯ ಆಧಾರದ ಮೇಲೆ ಯಾವುದೇ ತಾರತಮ್ಯವಿಲ್ಲದೇ ಸಮ ಸಮಾಜ ನಿರ್ಮಾಣದ ಆಶಯವನ್ನು ಹೊಂದಿದೆ.

ಈ ನಿಟ್ಟಿನಲ್ಲಿ ಸಂವಿಧಾನದ ಸಾರ್ಥಕತೆ ಮತ್ತು ಪ್ರಜಾಪ್ರಭುತ್ವದ ಯಶಸ್ಸು, ಕಾನೂನುಗಳ ಮತ್ತು ಜನ ಸಾಮಾನ್ಯರ ಭಾಗವಹಿಸುವಿಕೆಯನ್ನು ಅವಲಂಬಿಸಿದೆ’ ಎಂದು ತಿಳಿಸಿದರು. ನಮ್ಮ ಸ್ವಾತಂತ್ರ್ಯ ಹೋರಾಟಗಾರರು, ನಮ್ಮ ನಾಯಕರು ಮತ್ತು ನಮ್ಮ ಸಂವಿಧಾನದ ರಚನೆಗೆ ಕೊಡುಗೆ ನೀಡಿದ ಪ್ರತಿಯೊಬ್ಬ ವ್ಯಕ್ತಿಯನ್ನು ಸ್ಮರಿಸಲು ಈ ಅವಕಾಶವನ್ನು ಬಳಸಿಕೊಳ್ಳೋಣ.

ಈ ಸಂವಿಧಾನ ಕೇವಲ ದಾಖಲೆಯಲ್ಲ; ಇದು ನಮ್ಮ ಪ್ರಜಾಪ್ರಭುತ್ವ ರಾ?ದ ಆತ್ಮವಾಗಿದೆ, ಎಲ್ಲರಿಗೂ ನ್ಯಾಯ, ಸಮಾನತೆ ಮತ್ತು ಸ್ವಾತಂತ್ರ್ಯವನ್ನು ಖಾತ್ರಿಪಡಿಸುತ್ತದೆ ಎಂದರು.
ವಿಶೇಷ ವಿದ್ಯಾರ್ಥಿನಿ ಕೆ.ಅನುಪಮ ಮಾತನಾಡಿ, ಗಣರಾಜ್ಯವು ಸರ್ಕಾರದ ಒಂದು ರೂಪವಾಗಿದೆ, ಇದರಲ್ಲಿ ಜನರು ತಮ್ಮ ಸ್ವಂತ ಆಯ್ಕೆಯ ಪ್ರಕಾರ ಆಡಳಿತಗಾರನನ್ನು ಆಯ್ಕೆ ಮಾಡುವ ಸಂಪೂರ್ಣ ಹಕ್ಕನ್ನು ಹೊಂದಿರುತ್ತಾರೆ. ಅಂದರೆ, ನಾವು ಸಂವೇದನಾಶೀಲ ನಾಗರಿಕರಾಗಿ ಮತ ಚಲಾಯಿಸಿದಾಗ, ಅದರ ಪರಿಣಾಮವಾಗಿ ನಾವು ಸರಿಯಾದ ಸರ್ಕಾರದ ಬೆಂಬಲವನ್ನು ಪಡೆಯುತ್ತೇವೆ. ನಮ್ಮ ದೇಶದಲ್ಲಿ ಪ್ರತಿ ವರ್ಷ ಜನವರಿ ೨೬ ರಂದು ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ ಎಂದು ತಿಳಿಸಿದರು. ವಿಶೇಷ ಶಾಲೆಯ ವಿದ್ಯಾರ್ಥಿ ಆರ್. ಶ್ರೇಯಸ್ ಅವರು ಗಣರಾಜ್ಯೋತ್ಸವ ದಿನಾಚರಣೆಯ ಮಹತ್ವದ ಕುರಿತು ಮತ್ತು ಸಂವಿಧಾನ ಶಿಲ್ಪಿಯಾದ ಡಾ.ಬಿ ಆರ್ ಅಂಬೇಡ್ಕರ ಅವರ ಜೀವನ ಮೌಲ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಮರ್ಥನಂ ಸಂಸ್ಥೆಯ ಮೈಸೂರು ವಿಭಾಗದ ಮುಖ್ಯಸ್ಥ ಮಾತನಾಡಿ, ವಿಶ್ವದಲ್ಲೇ ಅತ್ಯಂತ ದೊಡ್ಡ ಸಂವಿಧಾನ ಎನ್ನುವ ವೈಶಿಷ್ಯ ತೆಯನ್ನು ಹೊಂದಿರುವ ನಮ್ಮ ಸಂವಿಧಾನದ ಮತ್ತು ಸಾಗಿ ಬಂದ ಹಾದಿಯನ್ನು ಸ್ಮರಿಸುವುದರೊಂದಿಗೆ ಮುಂದಿನ ದಿನಗಳನ್ನ ಯೋಜಿಸುವ ಸಂದರ್ಭವೂ ಇದಾಗಿದೆ. ಸ್ವರಾಜ್ಯ ನಮ್ಮ ಜನ್ಮಸಿದ್ಧ ಹಕ್ಕು ಎಂದು ಪ್ರತಿಪಾದಿಸಿದ್ದನ್ನು ಮಂಡಿಸಿ ಮಾಡಿದ ಪುಣ್ಯ ದಿನವಿದು ಎಂದು ಹೇಳಿದರು.

ಕಾರ್ಯಕ್ರಮದ ನಿರೂಪಣೆಯನ್ನು ದರ್ಶಿನಿ, ಸ್ವಾಗತವನ್ನು ವಿದ್ಯಾವತಿ, ವಂದನೆಯನ್ನು ದೀಪು ನೆರವರಿಸಿಕೊಟ್ಟರು, ಸಂವಿಧಾನದ ಪೀಠಿಕೆಯ ಪ್ರಾಸ್ತವನೆಯನ್ನು ಸಲ್ಮಾ ಬಾನು ಬೋಧಿಸಿದರು, ಇದೇ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯಿನಿ ಭ್ರಮಾರಂಬ, ವಿಶೇಷ ಶಿಕ್ಷಕಿಯರಾದ ಬೃಂದಾ ಬಾಯಿ, ಜಿ.ಬಿ.ಶಿವಕುಮಾರ್, ಶರೀಫ್, ಸಿಬ್ಬಂದಿಗಳಾದ ಚಂದ್ರೇಗೌಡ, ಪವಿತ್ರ ಮತ್ತು ಮಂಜುಳ ಸೇರಿದಂತೆ ಮೊದಲಾದವರು ಇದ್ದರು. ಮಾಹಿತಿಗಾಗಿ, ೬೩೬೪೮೬೭೮೧೮, ೮೧೨೩೭೨೫೯೪೯

RELATED ARTICLES
- Advertisment -
Google search engine

Most Popular