ಚಿಕ್ಕಬಳ್ಳಾಪುರ: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆಯೆಂದು ನಂಬಿಸಿ ಆನ್‌ಲೈನ್ ಕಳ್ಳರು ವೈದ್ಯರೊಬ್ಬರಿಗೆ ಬರೋಬ್ಬರಿ 76 ಲಕ್ಷ ರು, ಹಣವನ್ನು ಅವರ ಅವರ ಖಾತೆಗಳಿಂದ ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಂಡಿರುವ ಭಾರೀ ವಂಚನೆ ಪ್ರಕರಣ ಜಿಲ್ಲಾ ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಆನ್‌ಲೈನ್ ಕಳ್ಳರ ಮೋಸದ ಜಾಲಕ್ಕೆ ಸಿಲುಕಿ 76 ಲಕ್ಷ ರು, ಹಣ ಕಳೆದುಕೊಂಡ ವೈದ್ಯರನ್ನು ತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿರುವ ಸತ್ಯಸಾಯಿ ಸರಳ ಮೆಮೋರಿಯಲ್ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಡಾ.ರಾಮ್ ಮೊಹನ್ ರಾವ್ (53) ಎಂದು ಗುರುತಿಸಲಾಗಿದೆ.
ಈ ಹಿಂದೆ ಶೇರ್ ಮಾರ್ಕೆಟ್ ಅಪ್ಲಿಕೇಷನ್ ನಲ್ಲಿ ಟ್ರೇಡಿಂಗ್ ಮಾಡುತ್ತಿದ್ದ ರಾಮಮೋಹನ್ ನಂತರ ನಿವೃತ್ತಿ ಆದ ಮೇಲೆ ಅದನ್ನು ಬಿಟ್ಟಿದ್ದರು. ಜ.23 ರಂದು ವ್ಯಾಟ್ಸಾಪ್ ನಲ್ಲಿ ಒಂದು ಲಿಂಕ್ ಬಂದಿದ್ದು ಅದನ್ನು ಕ್ಲಿಕ್ ಮಾಡಿದರೆ ಅಪ್ ಡೇಟ್ ಆಗುವುದಾಗಿ ತಿಳಿಸಿದರು. ನಂತರ ರಾಮಮೋಹನ್ ಅವರಿಗೆ ಅನ್‌ಲೈನ್ ಕಳ್ಳರು ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವಂತೆ ಹೇಳಿ, ಹೆಚ್ಚಿನ ಲಾಭದ ಆಸೆ ತೋರಿಸಿ ಅವರಿಂದ 76 ಲಕ್ಷ ರೂ.ಪಡೆದು ಮೋಸ ಮಾಡಿದ್ದಾರೆ.